ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ದೇಶದಲ್ಲಿ ಹಿಂದೂ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ವಿಪ್ರ ಸಮಾಜದ ಕೊಡುಗೆ ಮರೆಯುವಂತಿಲ್ಲ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದಿಂದ ತೊರವಿ ನರಸಿಂಹ ದೇವಸ್ಥಾನದಲ್ಲಿ ಎರಡು ದಿನ ಹಮ್ಮಿಕೊಂಡಿದ್ದ ಗಾಯತ್ರಿ ಜಪ ಯಜ್ಞ ಹಾಗೂ ಮಹಾ ರುದ್ರ ಹೋಮ ಸಮಾರೋಪದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ವಿಪ್ರ ಸಮಾಜ ಸದಾ ವಿಶ್ವದ ಒಳಿತನ್ನು ಬಯಸುತ್ತದೆ. ಸರ್ವೇಜನ ಸುಖಿನೋ ಭವಂತು ಎಂಬ ತತ್ವದಡಿಯಲ್ಲಿ ಪ್ರಪಂಚದ ಎಲ್ಲ ಜನರಿಗೂ ಸುಖ, ಶಾಂತಿ ಲಭಿಸಲಿ ಎಂದು ಬಯಸುವ ಸಮಾಜ ಇದಾಗಿದೆ. ಹೋಮ, ಹವನ ಮಾಡುವುದರಿಂದ ಉತ್ತಮ ಮಳೆಯಾಗುತ್ತದೆ, ಮಳೆಯಾದರೆ ಬೆಳೆ ಬೆಳೆಯಲು ಸಾಧ್ಯ. ಲೋಕ ಕಲ್ಯಾಣಾರ್ಥವಾಗಿ ಇಂತಹ ಯಜ್ಞ ಮಾಡುತ್ತಿರುವ ಬ್ರಾಹ್ಮಣ ಸಮಾಜದ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಬೆಳಗ್ಗೆ ಗಾಯತ್ರಿ ಜಪಯಜ್ಞ ಹಾಗೂ ಮಹಾರುದ್ರ ಹೋಮದ ಪೂರ್ಣಾಹುತಿ ನಡೆಯಿತು. ನಂತರ ಶ್ರೀ ಲಕ್ಷ್ಮಿ ನರಸಿಂಹ ದೇವರ ರಥೋತ್ಸವ ವೈಭವದಿಂದ ಜರುಗಿತು. ದಾನಿಗಳಿಗೆ ಸನ್ಮಾನ ಸಮಾರಂಭ ಹಾಗೂ ಭಕ್ತರಿಗೆ ಸಾಮೂಹಿಕ ತೀರ್ಥ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.ಪಂ.ಮಧ್ವಾಚಾರ್ಯ ಮೊಕಾಶಿ, ಪಂ.ವೇದನಿಧಿ ಆಚಾರ್ಯ, ಶ್ರಿಕಾಂತಾಚಾರ್ಯ ಆಶ್ರಿತ, ಕೃಷ್ಣಾಚಾರ್ಯ ಗಲಗಲಿ, ಸುಧನ್ವ ಸಂಗಮ, ರಾಜ್ಯ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಆನಂದ ಜೋಶಿ, ನರಸಿಂಹ ದೇವಸ್ಥಾನ ಸಮಿತಿ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ, ಉಪಾಧ್ಯಕ್ಷ ಶಶಿಕಾಂತ ಜೋಶಿ, ಕಾರ್ಯದರ್ಶಿ ಸಂತೋಷ ಕುಲಕರ್ಣಿ ಹಾಗೂ ವಿಪ್ರ ಸಮಾಜದ ಪ್ರಮುಖರಾದ ಉಲ್ಲಾಸ ಪಾಟೀಲ, ಎಸ್.ಎಂ.ದೇಸಾಯಿ, ವಿದ್ಯಾ ಕುಲಕರ್ಣಿ, ಚೈತ್ರಾ ಗೊರಟೆಕರ, ಆನಂದ ಕುಲಕರ್ಣಿ, ಪ್ರದೀಪ ಕುಲಕರ್ಣಿ, ರಮೇಶ ನಾಮಣ್ಣವರ, ಪವನ ಗಲಗಲಿ, ಸಂದೀಪ ಕುಲಕರ್ಣಿ, ಕೆ.ಬಿ.ಕುಲಕರ್ಣಿ, ರಾಜೇಂದ್ರ ಜೋಶಿ, ಸುಧೀಂದ್ರ ಜೋಶಿ, ಗೋವಿಂದ ದೇಶಪಾಂಡೆ, ಪ್ರಹ್ಲಾದ ಕುಲಕರ್ಣಿ, ವಿಜಯ ಜೋಶಿ, ಅನಂತ ಕುಲಕರ್ಣಿ, ಅಂಬಾದಾಸ ಜೋಶಿ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.
;Resize=(128,128))
;Resize=(128,128))