ವಿರಾಜಪೇಟೆ- ಗೋಣಿಕೊಪ್ಪ ಪೊಲೀಸರ ಪಾರಮ್ಯ

| Published : Jul 30 2025, 12:50 AM IST

ಸಾರಾಂಶ

ವಿರಾಜಪೇಟೆ ನಗರ ಮತ್ತು ಗ್ರಾಮಾಂತರ ಪೊಲೀಸರು ಹಾಗೂ ಗೋಣಿಕೊಪ್ಪ ಪೊಲೀಸರು ಪಾರಮ್ಯ ಮೆರೆದು ಹಲವು ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಇಲ್ಲಿನ ದಿ. ಒಕ್ಕಲಿಗರ ಕಾಳಪ್ಪ ಗದ್ದೆಯಲ್ಲಿ ಭಾನುವಾರ ಜರುಗಿದ ವಿರಾಜಪೇಟೆ ಪೊಲೀಸ್ ಉಪ ವಿಭಾಗದ ಪೊಲೀಸರು ಹಾಗೂ ಕುಟುಂಬ ವರ್ಗದ ನಡುವೆ ಜರುಗಿದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿರಾಜಪೇಟೆ ನಗರ ಮತ್ತು ಗ್ರಾಮಾಂತರ ಪೊಲೀಸರು ಹಾಗೂ ಗೋಣಿಕೊಪ್ಪ ಪೊಲೀಸರು ಪಾರಮ್ಯ ಮೆರೆದು ಹಲವು ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಗೋಣಿಕೊಪ್ಪ ಪೊಲೀಸರು (ಪ್ರಥಮ) ಹಾಗೂ ವಿರಾಜಪೇಟೆ ಗ್ರಾಮಾಂತರ ಪೊಲೀಸರು( ದ್ವಿತೀಯ) ಸ್ಥಾನಗಳಿಸಿದ್ದಾರೆ.

ಪುರುಷರ ಹಗ್ಗ ಜಗ್ಗಾಟ ಪಂದ್ಯದಲ್ಲಿ ಗೋಣಿಕೊಪ್ಪಲು ವೃತ್ತ ಪೊಲೀಸರು (ಪ್ರಥಮ) ಹಾಗೂ ವಿರಾಜಪೇಟೆ ವೃತ್ತ ಪೊಲೀಸರು ( ದ್ವಿತೀಯ) ಸ್ಥಾನ ಗಳಿಸಿದ್ದಾರೆ.

ಪುರುಷರ ಕಬಡ್ಡಿಯಲ್ಲಿ ಶ್ರೀಮಂಗಲ ಪೊಲೀಸರು (ಪ್ರಥಮ) ಹಾಗೂ ವಿರಾಜಪೇಟೆ ನಗರ ಪೊಲೀಸರು ( ದ್ವಿತೀಯ) ಸ್ಥಾನ ಗೆದ್ದಿದ್ದಾರೆ.

ಮಹಿಳೆಯರ ಥ್ರೋಬಾಲ್‌ನಲ್ಲಿ ವಿರಾಜಪೇಟೆ ವೃತ್ತ ಮಹಿಳಾ ಪೊಲೀಸರು (ಪ್ರಥಮ), ಗೋಣಿಕೊಪ್ಪಲು ವೃತ್ತ ಮಹಿಳಾ ಪೊಲೀಸರು ( ದ್ವಿತೀಯ),

ಮಹಿಳೆಯರ ಹಗ್ಗ ಜಗ್ಗಾಟ: ವಿರಾಜಪೇಟೆ ಮಹಿಳಾ ಪೊಲೀಸರು (ಪ್ರಥಮ), ಗೋಣಿಕೊಪ್ಪಲು ಮಹಿಳಾ ಪೊಲೀಸರು (ದ್ವಿತೀಯ).

ಪುರುಷರಿಗೆ ಕುಡಿಕೆ ಹೊಡೆಯುವ ಸ್ಪರ್ಧೆ:

ಶ್ರೀಮಂಗಲ ಪೊಲೀಸ್ ಮಹಾದೇವ್ (ಪ್ರಥಮ), ಕುಟ್ಟ ಎಎಸ್ ಐ ಕಾರ್ಯಪ್ಪ (ದ್ವಿತೀಯ)

ಕಪ್ಪಲ್ ರೇಸ್: ಪೊಲೀಸ್ ದಂಪತಿ ಅನಿತಾ- ಮಲ್ಲಪ್ಪ (ಪ್ರಥಮ) ಹಾಗೂ ರಾಜೇಶ್ವರಿ- ಬಸವರಾಜು ದಂಪತಿ (ದ್ವಿತೀಯ).

ಪೊಲೀಸ್ ಕುಟುಂಬ ಕಪ್ಪಲ್ ರೇಸ್: ಆಲಿ ದಂಪತಿ (ಪ್ರಥಮ) ಹಾಗೂ ಮಂಜು ದಂಪತಿ (ದ್ವಿತೀಯ)

ಮಹಿಳಾ ಪೊಲೀಸ್ ಓಟದ ಸ್ಪರ್ಧೆ:

ಶಿವಲಿಂಗಿ ಕೃಷ್ಣ ಪ್ರಸಾದ್ (ಪ್ರಥಮ), ಅನಿತಾ ಮಲ್ಲಪ್ಪ (ದ್ವಿತೀಯ) ಹಾಗೂ ವತ್ಸಲಾ ಪ್ರಸನ್ನ( ತೃತೀಯ)

ಕುಟುಂಬದ ಯುವತಿಯರಿಗಾಗಿ ಓಟ:

ಪ್ರಿಯಾಂಕ (ಪ್ರಥಮ), ವಿದ್ಯಾ ಬೆಳವಿ (ದ್ವಿತೀಯ) ಹಾಗೂ ರಾಜೇಶ್ವರಿ (ತೃತೀಯ)

ಹೆಣ್ಣು ಮಕ್ಕಳಿಗಾಗಿ ಓಟದ ಸ್ಪರ್ಧೆ: ಕುಮಾರಿ ನಿಧಿಶ್ರಿ (ಪ್ರಥಮ), ಚಿಂತನಾ (ದ್ವಿತೀಯ) ಹಾಗೂ ಸಾನಿಕ (ತೃತೀಯ)

12 ವಯೋಮಾನ ಬಾಲಕರು: ಬಿದ್ದಪ್ಪ, ಯಶಸ್ ಹಾಗೂ ಮೋಹಿತ್ ಕ್ರಮವಾಗಿ ಮೊದಲ ಮೂರು ಸ್ಥಾನ ಗೆದ್ದಿದ್ದಾರೆ.

12 ವರ್ಷ ಮೇಲ್ಪಟ್ಟು: ಮಾಸ್ಟರ್ ಜೀವನ್, ಮಾಸ್ಟರ್ ಅಭಯ್ ಹಾಗೂ ಮಾಸ್ಟರ್ ಪ್ರವರ್ಥ್ ಮೊದಲ ಮೂರು ಸ್ಥಾನ ಗೆದ್ದಿದ್ದಾರೆ.

18 ವರ್ಷ ಮೇಲ್ಪಟ್ಟ ಯುವಕರಲ್ಲಿ ಕ್ರಮವಾಗಿ ಕೌಶಿಕ್ ಎಂ.ಎಂ., ಕೆ.ಎನ್. ಕಾರ್ತಿಕ್ ಹಾಗೂ ದ್ರಾವಿಡ್ ಪೊನ್ನಣ್ಣ ಮೊದಲ ಮೂರು ಬಹುಮಾನ ಗೆದ್ದಿದ್ದಾರೆ.

ಸಹಾಯಕ ಉಪ ನಿರೀಕ್ಷರಿಗಾಗಿ ನಡೆದ ಓಟದ ಸ್ಪರ್ಧೆಯಲ್ಲಿ ಕಾರ್ಯಪ್ಪ, ಪ್ರಮೋದ್, ಪ್ರದೀಪ್ ಕುಮಾರ್ ಬಹುಮಾನ ಗೆದ್ದುಕೊಂಡರು.

ಇದೇ ಸಂದರ್ಭ ಮಡಿಕೇರಿ ಪೊಲೀಸ್ ಉಪ ವಿಭಾಗ ತಂಡಕ್ಕೆ ವಿಶೇಷ ಪ್ರಶಸ್ತಿ, ಪೊಲೀಸ್ ಕುಟುಂಬದ ಮಹಿಳೆಯರಿಗೆ ನಡೆದ ಹಗ್ಗ ಜಗ್ಗಾಟದಲ್ಲಿ ವಿಶೇಷ ಸ್ಮರಣಿಕೆ, ಹಾಗೂ ಸಿದ್ಧಾಪುರ ಪೊಲೀಸರಿಗೂ ವಿಶೇಷ ಗೌರವ ನೀಡಲಾಯಿತು.

ಮುಂದಿನ ವರ್ಷ ಮಡಿಕೇರಿ ಹಾಗೂ ಕುಶಾಲನಗರದಲ್ಲಿ ಪೊಲೀಸರ ಕೆಸರು ಗದ್ದೆ ಕ್ರೀಡಾಕೂಟ:

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಹೆಚ್ಚುವರಿ ಪೊಲೀಸ್ ಅಧೀಕ್ಷಕ ದಿನೇಶ್ ಕುಮಾರ್ ಅವರು, ಗೋಣಿಕೊಪ್ಪಲುವಿನಲ್ಲಿ ಪೊಲೀಸರ ನಡುವೆ ಜರುಗಿದ ಕೆಸರು ಗದ್ದೆ ಕ್ರೀಡಾಕೂಟ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು ಕರ್ತವ್ಯ ನಿರತ ಪುರುಷ ಹಾಗೂ ಮಹಿಳಾ ಪೊಲೀಸರು, ಅವರ ಕುಟುಂಬ ವರ್ಗ ಸಂಪೂರ್ಣವಾಗಿ ಒಂದು ದಿನದ ಕೆಸರು ಗದ್ದೆ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದು ಉತ್ತಮ ಮನರಂಜನೆ ನೀಡಿದೆ. ಇಂದಿನ ಕ್ರೀಡೆಗೆ ವರುಣನೂ ಕೃಪೆ ತೋರಿದ್ದು, ವಿರಾಜಪೇಟೆ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಮಹೇಶ್‌ಕುಮಾರ್ ಮತ್ತು ತಂಡ ವ್ಯವಸ್ಥಿತವಾಗಿ, ಯಶಸ್ವಿಯಾಗಿ ಆಯೋಜಿಸಿದೆ. ಮುಂದಿನ ವರ್ಷ ಮಡಿಕೇರಿ ಪೊಲೀಸ್ ಉಪವಿಭಾಗ ಹಾಗೂ ಕುಶಾಲನಗರ ಪೊಲೀಸ್ ಉಪ ವಿಭಾಗದಲ್ಲಿ ಕೆಸರು ಗದ್ದೆ ಕ್ರೀಡಾಕೂಟವನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಕೆಸರು ಗದ್ದೆಯನ್ನು ಸಜ್ಜುಗೊಳಿಸಿ ಅವಕಾಶ ನೀಡಿದ ಮಾಲೀಕ ಅಜಯ್ ಕುಮಾರ್ ಹಾಗೂ ತೀರ್ಪುಗಾರ ತಂಡದ ಮುಖ್ಯಸ್ಥರಾದ ವಿ.ಪಿ.ಡಾಲ ಅವರ ಶ್ರಮವನ್ನು ಇದೇ ಸಂದರ್ಭ ಶ್ಲಾಘಿಸಿದರು.

ಸಮಾರೋಪ ಸಮಾರಂಭದಲ್ಲಿ ವಿರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್, ಮಡಿಕೇರಿ ಡಿವೈಎಸ್‌ಪಿ ಸೂರಜ್, ಮಡಿಕೇರಿ ಡಿಎಸ್‌ಬಿ ಇನ್ಸ್ಪೆಕ್ಟರ್ ಮೇದಪ್ಪ, ಮಡಿಕೇರಿ ಪೊಲೀಸ್ ವೃತ್ತ ನಿರೀಕ್ಷಕ ಪಿ.ಕೆ. ರಾಜು ಮುಂತಾದವರು ಮಾತನಾಡಿದರು. ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ವಿವಿಧ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು, ಮಹಿಳಾ ಉಪ ನಿರೀಕ್ಷಕರು, ಪೊಲೀಸ್ ಸಿಬ್ಬಂದಿ, ಕುಟುಂಬ ವರ್ಗ ಸೇರಿದಂತೆ ಸುಮಾರು 200 ಮಂದಿ ಪೊಲೀಸ್ ಕುಟುಂಬ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಕಾಪ್ಸ್ ಶಾಲಾ ಆಡಳಿತ ಮಂಡಳಿ ಪ್ರಮುಖರಾದ ಧನ್ಯ ಸುಬ್ಬಯ್ಯ, ಮಾನಸ ತಿಮ್ಮಯ್ಯ ಹಾಗೂ ಸೋಮಯ್ಯ ಮುಂತಾದವರು ಭಾಗವಹಿಸಿದ್ದರು. ಕೆಸರು ಗದ್ದೆ ಕ್ರೀಡೋತ್ಸವದ ನಂತರ ಎಎಸ್‌ಪಿ ಬಾರಿಕೆ ದಿನೇಶ್‌ಕುಮಾರ್ ಅವರೂ ಸೇರಿದಂತೆ ಅಧಿಕಾರಿಗಳು, ಪೊಲೀಸರು ಮತ್ತು ಕುಟುಂಬ ವರ್ಗ ಕೊಡವ ವಾಲಗಕ್ಕೆ ಕುಣಿದು ಕುಪ್ಪಳಿಸಿ ಮನರಂಜನೆ ಒದಗಿಸಿದರು.

ಕಾರ್ಯಕ್ರಮ ನಿರೂಪಣೆ ಕಾವೇರಮ್ಮ ಹಾಗೂ ಮಲ್ಲಪ್ಪ, ಸ್ವಾಗತ ಕುಟ್ಟ ಪೊಲೀಸ್ ಉಪ ನಿರೀಕ್ಷಕ ಮಹಾದೇವ್ ಹಾಗೂ ವಿರಾಜಪೇಟೆ ಸಮ್ಮದ್ ವಂದನಾರ್ಪಣೆ ಮಾಡಿದರು.