ವಿರಾಜಪೇಟೆ: ಬೃಹತ್ ಗಾತ್ರದ ಕಾಳಿಂಗ ಸರ್ಪ ಸೆರೆ

| Published : Oct 08 2023, 12:00 AM IST

ಸಾರಾಂಶ

ವಿರಾಜಪೇಟೆ ನಗರದ ಕಾಫಿ ತೋಟವೊಂದರದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಉರಗ ತಜ್ಞರಾದ ಸತೀಶ್ ಮತ್ತು ಅಮಾನ್ ಸತತ ಎರಡು ಗಂಟೆಯ ಅವಧಿಯಲ್ಲಿ, ಮರದಲ್ಲಿ ಜೋತು ಬಿದ್ದಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ಸರ್ಪವು ಸುಮಾರು 11 ಅಡಿ ಉದ್ದವಿದ್ದು 16-17 ಕೆ.ಜಿ. ತೂಕವಿದೆ
ವಿರಾಜಪೇಟೆ: ನಗರದ ಕಾಫಿ ತೋಟವೊಂದರದಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂದ್ದು ಉರಗ ತಜ್ಞರಾದ ಸತೀಶ್ ಮತ್ತು ಅಮಾನ್ ಅದನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ. ವಿರಾಜಪೇಟೆ ನಗರದ ಪಂಜರ್ ಪೇಟೆಯ ನಿವಾಸಿ ದಿವಂಗತ ಜನರಲ್ ಕೊದಂಡ ಸೋಮಣ್ಣ ಅವರ ಮನೆಯ ತೋಟದಲ್ಲಿ ಬೃಹತ್ ಗಾತ್ರದ ಸರ್ಪ ಇರುವುದನ್ನು ತೋಟದ ಕಾರ್ಮಿಕರು ನೋಡಿದ್ದಾರೆ. ಭಯಭೀತರಾದ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ತೋಟದ ನಿರ್ವಾಹಕರಿಗೆ ತಿಳಿಸಿದ್ದಾರೆ. ನಿರ್ವಾಹಕರು ಸ್ನೇಹಿತರನ್ನು ಸಂಪರ್ಕಿಸಿ ಉರಗ ತಜ್ಞರನ್ನು ಸಂಪರ್ಕಿಸಿದ್ದಾರೆ. ಸ್ಥಳೀಯರಾದ ಉರಗ ತಜ್ಞ ಆಟೋ ಚಾಲಕ ಮಲೆತಿರಿಕೆ ಬೆಟ್ಟದ ನಿವಾಸಿ ಸತೀಶ್ ಎ. ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ತೋಟದ ಮರ ಒಂದರಲ್ಲಿ ತೂಗು ಹಾಕಿಕೊಂಡಿದ್ದ ಸರ್ಪವನ್ನು ಸೆರೆ ಹಿಡಿಯಲು ಹರಸಹಾಸ ಮಾಡಿದ್ದಾರೆ. ಆದರೂ ಸರ್ಪ ಸೆರೆಯಾಗಲಿಲ್ಲಾ. ಕೊನೆಗೆ ಸ್ನೇಹಿತರಾದ ಉರಗ ತಜ್ಞರಾದ ಅಮಾನ್ ಅವರ ಸಹಾಯ ಪಡೆದು ಸತತ ಎರಡು ಗಂಟೆಯ ಅವಧಿಯಲ್ಲಿ ಮರದಲ್ಲಿ ಜೋತು ಬಿದ್ದಿದ್ದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದರು. ಸರ್ಪವು ಸುಮಾರು 11 ಅಡಿ ಉದ್ದವಿದ್ದು 16-17 ಕೆ.ಜಿ. ತೂಕವಿದೆ ಎಂದು ಉರಗ ತಜ್ಞ ಸತೀಶ್ ಮಾಹಿತಿ ನೀಡಿದರು. ಸೆರೆಯಾದ ಕಾಳಿಂಗ ಸರ್ಪವನ್ನು ಮಾಕುಟ್ಟ ವಲಯ ಅರಣ್ಯ ಪ್ರದೇಶಕ್ಕೆ ಬಿಡಲಾಯಿತು.