ವಿರಾಜಪೇಟೆ ಪುರಸಭೆ: ಜಲಶುದ್ಧಿ ನಿರ್ವಹಣಾ ಘಟಕ ಸ್ಥಾಪನೆಗೆ ೨.೭೬ ಕೋಟಿ ರು. ಅನುದಾನ ಬಿಡುಗಡೆ

| Published : Nov 06 2024, 11:59 PM IST / Updated: Nov 07 2024, 12:00 AM IST

ವಿರಾಜಪೇಟೆ ಪುರಸಭೆ: ಜಲಶುದ್ಧಿ ನಿರ್ವಹಣಾ ಘಟಕ ಸ್ಥಾಪನೆಗೆ ೨.೭೬ ಕೋಟಿ ರು. ಅನುದಾನ ಬಿಡುಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಜಲಶುದ್ಧಿ ನಿರ್ವಹಣಾ ಘಟಕ ಸ್ಥಾಪನೆಗೆ ಸುಮಾರು 2 ಕೋಟಿ ರುಪಾಯಿ ಅನುದಾನ ಶಾಸಕರ ವಿಶೇಷ ಪ್ರಯತ್ನದಿಂದ ಬಿಡುಗಡೆಗೊಂಡಿಗೆ ಎಂದು ಪುರಸಭೆ ಅದ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ ತಿಳಿಸಿದ್ದಾರೆ.

ಕನ್ನಡಪರ್ಭ ವಾರ್ತೆ ವಿರಾಜಪೇಟೆ

ಇತ್ತೀಚಿನ ದಿನಗಳಲ್ಲಿ ಜಲಮೂಲಗಳು ಕಲುಷಿತವಾಗುತ್ತಿದ್ದು, ತೋಡುಗಳು ಮತ್ತು ಇತರಡೆಗಳಿಂದ ಸಂಗ್ರಹಗೊಂಡ ತ್ಯಾಜ್ಯಗಳು ನದಿಯನ್ನು ಸೇರುತ್ತಿದೆ. ಈ ನಿಟ್ಟನಲ್ಲಿ ನದಿಯನ್ನು ಸಂರಕ್ಷಣೆ ಮಾಡುವ ಕಾರ್ಯಕ್ಕೆ ಸರ್ಕಾರವು ಮುಂದಾಗಿದ್ದು ವಿರಾಜಪೇಟೆ ಪುರಸಭಾ ವ್ಯಾಪ್ತಿಯಲ್ಲಿ ಜಲಶುದ್ಧಿ ನಿರ್ವಹಣಾ ಘಟಕ ಸ್ಥಾಪನೆಗೆ ಸುಮಾರು 2 ಕೋಟಿ ರುಪಾಯಿ ಅನುದಾನ ಶಾಸಕರ ವಿಶೇಷ ಪ್ರಯತ್ನದಿಂದ ಬಿಡುಗಡೆಗೊಂಡಿಗೆ ಎಂದು ಪುರಸಭೆ ಅದ್ಯಕ್ಷೆ ಎಂ.ಕೆ. ದೇಚಮ್ಮ ಕಾಳಪ್ಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರ ಪ್ರದೇಶಗಳ ಮನೆ, ಮತ್ತು ವಾಣೀಜ್ಯ ಸಂಕೀರ್ಣ ಜನವಸತಿ ಪ್ರದೇಶಗಳಿಂದ ಸಂಗ್ರಹವಾಗುವ ತ್ಯಾಜ್ಯ ಮತ್ತು ಮಲೀನ ನೀರು ನಗರದ ವಿವಿಧ ಭಾಗಗಳಲ್ಲಿ ಹರಿಯುವ ತೋಡು, ಕಿರು ತೋಡುಗಳು ಕಾಲೆವೆಗೆ ಸೇರುತ್ತಿದೆ. ತೋಡುಗಳಲ್ಲಿ ಸಂಗ್ರಹಗೊಂಡ ಮಲಿನ ನೀರು ನೇರವಾಗಿ ನದಿಯನ್ನು ಸೇರುತ್ತಿದೆ. ಇದರಿಂದ ನದಿ ನೀರು ಮಲಿನಗೊಂಡು ಜಲಚರಗಳು, ಪ್ರಾಣಿಸಂಕುಲ, ಮನುಷ್ಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ಮನಗಂಡು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಅವರ ವಿಶೇಷ ಪ್ರಯತ್ನದಿಂದ ಜಲಶುದ್ಧಿ ಅಭಿಯಾನದ ಅಡಿಯಲ್ಲಿ (ಬಳಸಿದ ನೀರು ನಿರ್ವಹಣೆ) ಘಟಕ ಸ್ಥಾಪನೆಗೆ 2 ಕೋಟಿ 76 ಲಕ್ಷ ರುಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಈ ಯೋಜನೆಯಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಸುಮಾರು 3 ಎಕರೆ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಸ್ಥಳ ನಿಗದಿ ಮಾಡುವ ಕಾರ್ಯಕ್ಕೆ ಪುರಸಭೆಯು ಮುಂದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪುರಸಭೆ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ. ರಾಜೇಶ್ ಪದ್ಮನಾಭ, ಎಸ್.ಎಚ್‌, ಮತೀನ್‌ ಮತ್ತು ಮೋಹಮ್ಮದ್ ರಾಫಿ ಇದ್ದರು.