ಸಾರಾಂಶ
ಡಿ. 7 ಮತ್ತು 8ರಂದು ಇಲ್ಲಿನ ಸೇಂಟ್ ಆನ್ಸ್ ಶಾಲಾ ಮೈದಾನದಲ್ಲಿ ಮುಕ್ತ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಇಲ್ಲಿನ ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯ ವಿರಾಜಪೇಟೆ ವತಿಯಿಂದ 13ನೇ ವಾರ್ಷಿಕೋತ್ಸವ ಅಂಗವಾಗಿ ಡಿ.7 ಮತ್ತು 8ರಂದು ಇಲ್ಲಿನ ಸೇಂಟ್ ಆನ್ಸ್ ಶಾಲಾ ಮೈದಾನದಲ್ಲಿ ಗ್ರಾಮೀಣ ಮಟ್ಟದ ಮುಕ್ತ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.ಇಲ್ಲಿನ ಶತಮಾನ ಭವನ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ
ಸಂಘದ ಕಾರ್ಯದರ್ಶಿ ಡೇನಿಯಲ್ ಸಾಲ್ಡಾನ, ಪಂದ್ಯಾವಳಿ ಒಟ್ಟು 26 ತಂಡಗಳಿಗೆ ಸೀಮಿತವಾಗಿರುತ್ತದೆ. 5 ಓವರ್‌ಗಳ ಪಂದ್ಯಾಟವಾಗಿದ್ದು ಜಿಲ್ಲಾ ಗ್ರಾಮಾಂತರ ಮಟ್ಟದ ಪಂದ್ಯವಾಗಿರುತ್ತದೆ. ವಿಜೇತ ತಂಡಗಳಿಗೆ ಆಕರ್ಷಕ ಟ್ರೋಫಿ ಮತ್ತು ನಗದು, ವೈಯಕ್ತಿಕ ಬಹುಮಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಸಂಘದ ಸದಸ್ಯ ಜ್ಯೂಡಿ ವಾಜ್ ಮಾತನಾಡಿ, ತಂಡಗಳು ಡಿ.1ರೊಳಗೆ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿಗಾಗಿ ಬಿಲ್ಟನ್ ವಾಜ್ 9080605238 . ಡೇನಿಯಲ್ 9483910464 ಅವರನ್ನು ಸಂಪರ್ಕಿಸುವಂತೆ ತಿಳಿಸಿದರು. ಸಂತ ಅನ್ನಮ್ಮ ಕ್ರೈಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಜಾನ್ಸನ್ ಡಿಸೋಜ, ಉಪಾಧ್ಯಕ್ಷ ಜೋಸೆಫ್ ಡಿಸೋಜ, ಕ್ರೀಡಾ ಕಾರ್ಯದರ್ಶಿ ಬಿಲ್ಟನ್ ವಾಜ್, ಸದಸ್ಯರಾದ ಬ್ಲೇಜಿ ಸಿಕ್ವೇರಾ ಹಾಜರಿದ್ದರು.