ಸಮೀಪದ ಅರಪಟ್ಟು ಗ್ರಾಮದ ನೆಲ್ಯಾಳುವಿನ ದೇವರ ಕಾಡಿನಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಮಹಾಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ದೇವರ ಕಾಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯು ನೆಲೆ ನಿಂತಿದ್ದು ಭಕ್ತರು ಇಲ್ಲಿ ಹರಕೆಯ ರೂಪದಲ್ಲಿ ಸಾಕುಪ್ರಾಣಿಗಳ ರೂಪಗಳನ್ನು ಒಪ್ಪಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ.
ವಿರಾಜಪೇಟೆ: ಸಮೀಪದ ಅರಪಟ್ಟು ಗ್ರಾಮದ ನೆಲ್ಯಾಳುವಿನ ದೇವರ ಕಾಡಿನಲ್ಲಿ ನೆಲೆಸಿರುವ ಶ್ರೀ ಅಯ್ಯಪ್ಪ ದೇವರ ವಾರ್ಷಿಕ ಮಹಾಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ದೇವರ ಕಾಡಿನಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯು ನೆಲೆ ನಿಂತಿದ್ದು ಭಕ್ತರು ಇಲ್ಲಿ ಹರಕೆಯ ರೂಪದಲ್ಲಿ ಸಾಕುಪ್ರಾಣಿಗಳ ರೂಪಗಳನ್ನು ಒಪ್ಪಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ನವೆಂಬರ್ ನಿಂದ ಡಿಸೆಂಬರ್ ವರೆಗೆ ಪ್ರತಿ ವರ್ಷವೂ ಒಂದು ತಿಂಗಳ ಕಾಲ ಈ ದೇವಸ್ಥಾನದಲ್ಲಿ ನಿತ್ಯ ಪೂಜೆಯನ್ನು ಅರ್ಚಕರು ಸಲ್ಲಿಸುವ ಸಂಪ್ರದಾಯವಿದೆ. ಮಹಾಪೂಜೆ ಪ್ರಯುಕ್ತ ಸ್ಥಳೀಯ ಅರ್ಚಕರಾದ ರಾಮಪ್ರಸಾದ್ ಭಟ್ ಅವರು ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿದರು. ವಾರ್ಷಿಕ ಮಹಾಪೂಜೆ ಪ್ರಯುಕ್ತ ಬೆಳಿಗ್ಗೆಯಿಂದಲೇ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡವು. ಅರ್ಚಕರು ಮೊದಲಿಗೆ ಸಂಕಲ್ಪವನ್ನು ಮಾಡಿದರು. ನಂತರ ಶ್ರೀ ಅಯ್ಯಪ್ಪ ಸ್ವಾಮಿಗೆ ಪಂಚಾಮೃತ ಅಭಿಷೇಕ, ಸಿಯಾಳದ ಅಭಿಷೇಕ, ಅಲಂಕಾರ ಪೂಜೆ, ಮುಂತಾದ ಧಾರ್ಮಿಕ ವಿಧಾನಗಳನ್ನು ನೆರವೇರಿಸಿದ ಬಳಿಕ ಮಹಾ ಮಂಗಳಾರತಿ ನೆರವೇರಿಸಲಾಯಿತು. ಮಹಾಮಂಗಳಾರತಿ ಬಳಿಕ ಅರ್ಚಕರು ಪ್ರಾರ್ಥನೆ ಸಲ್ಲಿಸಿದರು. ತದನಂತರ ಪ್ರಸಾದ ವಿತರಣೆ ಹಾಗೂ ಆಗಮಿಸಿದ ಭಕ್ತಾದಿಗಳಿಗೆ ನೆಲ್ಯಾಳು ಕುಟುಂಬಸ್ಥರ ವತಿಯಿಂದ ಅನ್ನದಾನ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕಡಂಗ ಮುರೂರು, ಅರಪಟ್ಟು, ಕೆದ ಮುಳ್ಳೂರು ವಿನಿಂದ ಆಗಮಿಸಿದ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು.