ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕದಿಂದ ಪುಣ್ಯ ಬರುತ್ತದೆ: ಜೆ.ಎ.ರಮೇಶ್

| Published : Jul 24 2025, 12:50 AM IST

ಹಸಿದ ಹೊಟ್ಟೆಗೆ ಅನ್ನ ನೀಡುವ ಕಾಯಕದಿಂದ ಪುಣ್ಯ ಬರುತ್ತದೆ: ಜೆ.ಎ.ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಲಯನ್ಸ್ ಸಂಸ್ಥೆ ಪ್ರಾರಂಭದಲ್ಲಿ ವಾರಕ್ಕೆ ಒಂದು ದಿನ ಆಸ್ಪತ್ರೆಗೆ ಬರುವ ಬಾಣಂತಿಯರಿಗೆ ಹಾಗೂ ರೋಗಿಗಳಿಗೆ ಊಟ ನೀಡುತ್ತಿದ್ದರು. ನಂತರ ಒಂದು ವರ್ಷದ ಹಿಂದೆ ಜುಲೈನಿಂದ ಇಂದಿನವರೆಗೂ ಪ್ರತಿದಿನ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳು, ಹಸಿದು ಬರುವವರೆಗೆ ಅನ್ನ ನೀಡುತ್ತಿರುವುದು ಶ್ಲಾಘನೀಯ.

ಕನ್ನಡಪ್ರಭ ವಾರ್ತೆ ಹಲಗೂರು

ಹಸಿದವರಿಗೆ ಅನ್ನ ನೀಡುವುದು ನಿಜಕ್ಕೂ ಒಳ್ಳೆಯ ಕೆಲಸ. ಇದರಿಂದ ಮನುಷ್ಯನನ್ನು ತೃಪ್ತಿ ಪಡಿಸಿದ ಪುಣ್ಯ ಲಭಿಸುತ್ತದೆ ಎಂದು ಲಯನ್ಸ್ ಕ್ಲಬ್ಬಿನ ಮಾಜಿ ಜಿಲ್ಲಾ ರಾಜ್ಯಪಾಲ ಜೆ.ಎ.ರಮೇಶ್ ಅಭಿಪ್ರಾಯಪಟ್ಟರು.

ಲಯನ್ಸ್ ಕ್ಲಬ್‌ನಿಂದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ದಿನನಿತ್ಯ ನಡೆಸಿಕೊಂಡು ಬರುತ್ತಿರುವ ಅನ್ನಪೂರ್ಣ ಹಸಿವು ನಿವಾರಣೆ ಕಾರ್ಯಕ್ಕೆ ಜುಲೈ 21ರಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಲಯನ್ಸ್ ಸಂಸ್ಥೆ ಪ್ರಾರಂಭದಲ್ಲಿ ವಾರಕ್ಕೆ ಒಂದು ದಿನ ಆಸ್ಪತ್ರೆಗೆ ಬರುವ ಬಾಣಂತಿಯರಿಗೆ ಹಾಗೂ ರೋಗಿಗಳಿಗೆ ಊಟ ನೀಡುತ್ತಿದ್ದರು. ನಂತರ ಒಂದು ವರ್ಷದ ಹಿಂದೆ ಜುಲೈನಿಂದ ಇಂದಿನವರೆಗೂ ಪ್ರತಿದಿನ ಆಸ್ಪತ್ರೆಗೆ ಬರುವ ಪ್ರತಿಯೊಬ್ಬ ರೋಗಿಗಳು, ಹಸಿದು ಬರುವವರೆಗೆ ಅನ್ನ ನೀಡುತ್ತಿರುವುದು ಶ್ಲಾಘನೀಯ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ವೀರಭದ್ರಪ್ಪ ಮಾತನಾಡಿ, ಆರೋಗ್ಯ ಕೇಂದ್ರ ಆವರಣದಲ್ಲಿ ಇಂತಹ ಕಾರ್ಯಕ್ರಮ ಆಯೋಜನೆಯಿಂದ ರೋಗಿಗಳಿಗೆ ಅನುಕೂಲವಾಗುತ್ತಿದೆ. ಇದೇ ರೀತಿ ದಳವಾಯಿ ಕೋಡಿಹಳ್ಳಿ ಆರೋಗ್ಯ ಕೇಂದ್ರದಲ್ಲೂ ಸಹ ವಾರಕ್ಕೆ ಒಂದು ಬಾರಿ ಊಟ ನೀಡುತ್ತಿರುವುದು ಉತ್ತಮ ಕಾರ್ಯ ಎಂದರು.

ನಂತರ ಹಸಿವು ನಿವಾರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ವೇಳೆ ಆರೋಗ್ಯಾಧಿಕಾರಿ ವೀರಭದ್ರಪ್ಪ, ಜಿಲ್ಲಾ ಮಾಜಿ ರಾಜ್ಯಪಾಲ ರಮೇಶ್ ಅವರನ್ನು ಸನ್ಮಾನಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಜಿ.ಎಸ್.ಮನೋಹರ, ಎನ್.ಕೆ.ಕುಮಾರ್, ಡಾ.ಶಂಷುದ್ದೀನ್, ಡಾ.ಎ.ಎಸ್.ನಾಗೇಶ್, ಡಾ.ಸಿದ್ದರಾಜು, ಎ.ಟಿ.ಶ್ರೀನಿವಾಸ್, ಪ್ರವೀಣ್ ಇತರರು ಇದ್ದರು.