ಸಾರಾಂಶ
ಕನ್ನಡಪ್ರಭ ವಾರ್ತೆ ಪಾಲಬಾವಿ
ಪರರಿಗೆ ಹಿತವನ್ನು ಮಾಡುವುದೇ ಪುಣ್ಯ. ಪರರಿಗೆ ಕೇಡು ಬಯಸುವುದು ಮಹಾ ಪಾಪ. ಮಾನವ ಜನ್ಮ ಶ್ರೇಷ್ಠವಾದದ್ದು, ಪರೋಪಕಾರ ಮಾಡುತ್ತ ಈ ಪವಿತ್ರವಾದ ಮಾನವ ಜನ್ಮವನ್ನು ಪಾವನ ಮಾಡಿಕೊಳ್ಳಬೇಕು. ಇದುವೇ ಸಾರ್ಥಕ ಜೀವನ ಎಂದು ಹಿರಿಯ ಸಾಂಸ್ಕೃತಿಕ ಚಿಂತಕ, ಮಾಜಿ ಜಿಪಂ ಸದಸ್ಯ ಡಿ.ಎಸ್. ನಾಯಿಕ ಅಭಿಪ್ರಾಯಪಟ್ಟರು.ತಾಲೂಕಿನ ಮೊರಬ-ನೀಲಜಿ ಗ್ರಾಮದಲ್ಲಿ ಜುಲೈ 21ರಂದು ಮುಂಜಾನೆ 11ಗಂಟೆಗೆ ದಿ.ಕಲ್ಲಪ್ಪ ನಾಗಪ್ಪ ಧುಮಾಳೆ ಅವರ 10ನೆಯ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾಜಿ ಕಾಡಾ ಅಧ್ಯಕ್ಷ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಸಂಜೀವಕುಮಾರ ಬಾನೆ(ಸರಕಾರ) ಚಿಕ್ಕ ಮಕ್ಕಳಿಗೆ ಹಾಲು ಕುಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಸ್ತವಾಡ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸುಖದೇವ್ ಕಾಂಬಳೆ ಮಾತನಾಡಿ, ದಿ.ಕಲ್ಲಪ್ಪ ಧುಮಾಳೆ ಅವರ ಜೀವನ ಸಾಧನೆ, ಜನಪರ ಕಾಳಜಿಯನ್ನು ಬನ್ನಿಸಿದರು. ವೇದಿಕೆ ಮೇಲೆ ಜೀಜಾಬಾಯಿ ಧುಮಾಳೆ, ತುಕಾರಾಂ ಧುಮಾಳೆ ಇದ್ದರು. ರಾಜು ಧುಮಾಳೆ, ಶಿವರಾಜ್ ಧುಮಾಳೆ, ಶಶಿಕಾಂತ ಧುಮಾಳೆ, ಅಶೋಕ ಧುಮಾಳೆ, ಖಂಡೋಬಾ ಧುಮಾಳೆ, ವಿಜಯ ಸಣ್ಣಕ್ಕಿ, ಸುಭಾಷ ಕಾಂಬಳೆ, ನಾರಾಯಣ ಕೊಳೇಕರ, ನಿಂಗನಗೌಡ ಪಾಟೀಲ ಉಪಸ್ಥಿತರಿದ್ದರು.
ದಿ.ಕಲ್ಲಪ್ಪ ಧುಮಾಳೆಯವರ 50ಕ್ಕೂ ಹೆಚ್ಚು ಒಡನಾಡಿಗಳು, ಹಿತೈಷಿಗಳಿಗೆ ತಂದೆಯವರ ನೆನಪಿಗಾಗಿ ದಿ.ಕಲ್ಲಪ್ಪ ಧುಮಾಳೆ ಅವರ ಮಕ್ಕಳು ವಸ್ತ್ರದಾನ ಮಾಡಿದರು.ನಿಲಯ ಪಾಲಕ ಶಂಕರ ಕೊಡತೆ ಪ್ರಾಸ್ತಾಪವಾಗಿ ಮಾತನಾಡಿ ಸ್ವಾಗತಿಸಿದರು. ಶಿಕ್ಷಕ ರಾಜು ಕಾಂಬಳೆ ನಿರೂಪಿಸಿದರು. ರಾಜು ಧುಮಾಳೆ ವಂದಿಸಿದರು. ಶಿಕ್ಷಕ ಚಂದ್ರಕಾಂತ ಸಾಂಗಲಿ ಅವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ನಂತರ ದಾಸೋಹ ಮನೆಯಲ್ಲಿ ಅನ್ನ ಸಂತರ್ಪಣೆ ನೆರವೇರಿತು.