ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮೇಳಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎನ್.ವಿರೂಪಾಕ್ಷ ಹಾಗೂ ಉಪಾಧ್ಯಕ್ಷರಾಗಿ ಚಂದಗಾಲು ಚನ್ನಮ್ಮ ಅವಿರೋಧವಾಗಿ ಆಯ್ಕೆಯಾದರು.ಸಂಘದ ಒಟ್ಟು 12 ಮಂದಿ ನಿರ್ದೇಶಕರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕೂಟದಿಂದ ಅಧ್ಯಕ್ಷ ಗಾದಿಗೆ ಎನ್.ವಿರೂಪಾಕ್ಷ ಹಾಗೂ ಉಪಾಧ್ಯಕ್ಷಗಾಧಿಗೆ ಚನ್ನಮ್ನ ಹೊರತುಪಡಿಸಿ ಬೇರೆ ಯಾರೂ ಸಹ ಅರ್ಜಿ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸಿಡಿಒ ಪಾರ್ವತಮ್ಮ ಅವಿರೋಧ ಎಂದು ಘೋಷಣೆ ಮಾಡಿದರು. ಸಂಘದ ಕಾರ್ಯದರ್ಶಿ ಉಮೇಶ್ ಚುನಾವಣಾ ಸಹಾಯಕರಾಗಿ ಕೆಲಸ ಮಾಡಿದ್ದರು.
ನಂತರ ನೂತನ ಅಧ್ಯಕ್ಷ ಎನ್.ವಿರೂಪಾಕ್ಷ ಮಾತನಾಡಿ, ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು. ರೈತರಿಗೆ ರಿಯಾಯ್ತಿ ದರದಲ್ಲಿ ಗೊಬ್ಬರ ಸೇರಿದಂತೆ ಅಗತ್ಯ ಕೃಷಿ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು.ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಟಿ.ಶ್ರೀಧರ್, ಗ್ರಾಪಂ ಮಾಜಿ ಅಧ್ಯಕ್ಷ ಬೆಟ್ಟೇಗೌಡ, ಸಂಘದ ನಿರ್ದೇಶಕರಾದ ಅಶೋಕ್, ಶ್ರೀನಿವಾಸ್, ಪರಮೇಶ್, ಮಹದೇವು, ರಮೇಶ್, ಕೃಷ್ಣಬಾಬು, ಮಂಜುಳ, ತೇಜು, ಮುಖಂಡರಾದ ಆರ್.ಪ್ರದೀಪ್, ಧನಂಜಯ್ಯ, ಮನೋಹರ್, ಎಂ.ಎಂ.ಅಶೋಕ ಸೇರಿದಂತೆ ಗ್ರಾಪಂ ಸದಸ್ಯರು, ಗ್ರಾಮಸ್ಥರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿದರು.
ಪಿಇಟಿ ಟ್ರಸ್ಟ್‌ಗೆ ಮಧ್ಯಂತರ ಆಡಳಿತ ಸಮಿತಿ ನೇಮಕಮಂಡ್ಯ: ನಗರದ ಪ್ರತಿಷ್ಠಿತ ಜನತಾ ಶಿಕ್ಷಣ ಟ್ರಸ್ಟ್‌ನ ಎಲ್ಲಾ ಟ್ರಸ್ಟಿಗಳನ್ನು ಆಡಳಿತ ಸಮಿತಿಯ ಸದಸ್ಯರನ್ನಾಗಿ ಮಾಡಿ ಜಿಲ್ಲಾ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಟ್ರಸ್ಟ್‌ನ ಪದಾಧಿಕಾರಿಗಳ ಆಯ್ಕೆ, ಲೆಕ್ಕಪತ್ರ, ಆಡಳಿತಾತ್ಮಕ ವಿಚಾರಗಳಲ್ಲಿ ಟ್ರಸ್ಟಿಗಳ ನಡುವೆ ವಿವಾದ ಭುಗಿಲೆದ್ದಿದ್ದು ಕೆಲವು ಟ್ರಸ್ಟಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯವು ಭಾಗಶಃ ವಾದ-ವಿವಾದಗಳನ್ನು ಆಲಿಸಿ ಮೇ ೨ರಂದು ಮಧ್ಯಂತರ ಆದೇಶ ಹೊರಡಿಸಿದೆ. ಅದರ ಪ್ರಕಾರ ಆಡಳಿತ ಸಮಿತಿಯೊಂದನ್ನು ನೇಮಿಸಿ ಟ್ರಸ್ಟಿನ ಎಲ್ಲರನ್ನೂ ಸದಸ್ಯರನ್ನಾಗಿ ಮಾಡಿದೆ. ಟ್ರಸ್ಟಿನ ಪ್ರತಿದಿನದ ಲೆಕ್ಕಪತ್ರಗಳನ್ನು ತಪ್ಪದೇ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಟ್ರಸ್ಟಿನ ಇಬ್ಬರೂ ಟ್ರಸ್ಟಿಗಳಿಗೆ ಆದೇಶಿಸಿದೆ. ನ್ಯಾಯಾಲಯಕ್ಕೆ ಬೇಸಿಗೆ ರಜೆ ಇರುವುದರಿಂದ ಜೂನ್ ೬ಕ್ಕೆ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.