ಸಾರಾಂಶ
ಅಂಡಿಂಜೆ ಗ್ರಾಮದ ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27ನೇ ವರ್ಷದ ವಿಶ್ವಕರ್ಮ ಪೂಜೆ ಇತ್ತೀಚೆಗೆ ನಡೆಯಿತು. ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ತಾಲೂಕಿನ ಅಂಡಿಂಜೆ ಗ್ರಾಮದ ನವೋದಯ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಇದರ 27ನೇ ವರ್ಷದ ವಿಶ್ವಕರ್ಮ ಪೂಜೆ ಇತ್ತೀಚೆಗೆ ನಡೆಯಿತು.ಸಂಘದ ಅಧ್ಯಕ್ಷ ಪ್ರಭಾಕರ ಆಚಾರ್ಯರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಕಳ ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ, ಅಮರಶಿಲ್ಪಿ ಜಕಣಾಚಾರ್ಯ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಾಮಚಂದ್ರ ಆಚಾರ್ಯ ಅತ್ತೂರು, ಮೂಡುಬಿದಿರೆ ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಸೀತಾರಾಮ ಆಚಾರ್ಯ, ಮೂಡುಬಿದಿರೆಯ ಉದ್ಯಮಿ ಗಣೇಶ ಆಚಾರ್ಯ ಹೊಸ್ಮಾರ್ ಇವರು ಅಭ್ಯಾಗತರಾಗಿ ಆಗಮಿಸಿದರು. ಗ್ರಾಮ ಕೂಡುವಳಿಕೆ ಮೊಕ್ತೇಸರ ರಾಧಾಕೃಷ್ಣ ಆಚಾರ್ಯ ಕಜೆ, ಹಾಗು ಪುರೋಹಿತ್ ಪ್ರಕಾಶ್ ಆಚಾರ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಕಂಪನಿಗಳಲ್ಲಿ ಉದ್ಯೋಗವನ್ನು ತೊಡಗಿಸಿಕೊಂಡಿದ್ದು, ಪ್ರಸ್ತುತ ಅರ್ವ ಎಂಟರ್ಪ್ರೈಸಸ್ ಎಂಬ ಸಂಸ್ಥೆಯಲ್ಲಿ ಬೀಡಿ, ಗೇರುಬೀಜ ಸಮೇತ ವಿವಿಧ ಕಂಪೆನಿಗಳಿಗೆ ಭವಿಷ್ಯನಿಧಿ(ಪಿ ಎಫ್) ಮಾರ್ಗದರ್ಶಕರಾಗಿರುವ ವಿವಿಧ ಕಂಪನಿಗಳಿಂದ ಪುರಸ್ಕೃತ ಸುಬ್ರಹ್ಮಣ್ಯ ಆಚಾರ್ಯ ಪಾಲಬೆ ಅರುವ, ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿ ಆದರ್ಶ್ ಹರಿ ನಿವಾಸ ಅಂಡಿಂಜೆ, 2024 ರ ಪಿಯುಸಿ ಪರೀಕ್ಷೆಯಲ್ಲಿ ಸರ್ಕಾರಿ ಪ ಪೂ ಕಾಲೇಜಿನಲ್ಲಿ ಅತ್ಯಧಿಕ ಅಂಕ ಗಳಿಸಿರುವ ಸಾನಿಧ್ಯ ಬಿ ಕೆ ಆಚಾರ್ಯ ಇವರನ್ನು ಅಭಿನಂದಿಸಲಾಯಿತು.ಡಿ ಭಾಸ್ಕರ ಆಚಾರ್ಯ ಸ್ವಾಗತಿಸಿದರು. ಸಾನಿಧ್ಯ ಬಿ ಕೆ ನಿರ್ವಹಿಸಿದರು.