ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಕೀರ್ತಿ ವಿಶ್ವಗುರು ಬಸವಣ್ಣ: ದೊಡ್ಡಯ್ಯ

| Published : May 10 2024, 11:45 PM IST

ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ಕೀರ್ತಿ ವಿಶ್ವಗುರು ಬಸವಣ್ಣ: ದೊಡ್ಡಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬರನ್ನು ಸಮಾನಾಗಿ ಕಾಣಬೇಕೆಂದು ಮೇಲುಕೀಳಿನ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ತತ್ವ, ಅದರ್ಶಗಳನ್ನು ಪಾಲಿಸಬೇಕು. ಹಾಗೇ, ಬಸವ ಜಯಂತಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಎಲ್ಲ ಸಮುದಾಯಗಳ ಒಳಿತಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನ. ಹೀಗಾಗಿ ಎಲ್ಲ ಸಮುದಾಯದವರು ಜಯಂತಿ ಆಚರಿಸಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಸಮ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ ಜೊತೆಗೆ ಜಗತ್ತಿನಲ್ಲಿಯೇ ಮೊದಲ ಬಾರಿಗೆ ಸಂಸತ್ ನಿರ್ಮಿಸಿ ಪ್ರಜಾ ಪ್ರಭುತ್ವಕ್ಕೆ ನಾಂದಿ ಹಾಡಿದ ಕೀರ್ತಿ ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಯ್ಯ ತಿಳಿಸಿದರು.

ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬಸವ ಜಯಂತಿಯಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದ ಮಾತನಾಡಿ, ಪ್ರತಿಯೊಬ್ಬರನ್ನು ಸಮಾನಾಗಿ ಕಾಣಬೇಕೆಂದು ಮೇಲುಕೀಳಿನ ವಿರುದ್ಧ ಹೋರಾಟ ಮಾಡಿದ ಬಸವಣ್ಣನವರ ತತ್ವ, ಅದರ್ಶಗಳನ್ನು ಪಾಲಿಸಬೇಕೆಂದು ಸಲಹೆ ನೀಡಿದರು.

12ನೇ ಶತನಮಾನದಲ್ಲಿ ಅನುಭವ ಮಂಟಪ ನಿರ್ಮಿಸಿ ಸಮಾನತೆ ಬಗ್ಗೆ ವಿಶ್ವಕ್ಕೆ ಮಾದರಿಯಾದರು. ಕಾಯಕವೇ ಕೈಲಾಸ ಎನ್ನುತ್ತಾ ಮಾಡುವ ಕೆಲಸದಲ್ಲಿಯೇ ದೇವರು ಕಾಣಬಹುದು ಎನ್ನುವುದನ್ನು ತಿಳಿಸಿಕೊಟ್ಟರು.

ಬಸವ ಜಯಂತಿ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಲ್ಲ. ಬದಲಾಗಿ ಎಲ್ಲ ಸಮುದಾಯಗಳ ಒಳಿತಿಗಾಗಿ ಹೋರಾಟ ನಡೆಸಿದ ಮಹಾನ್ ಚೇತನ. ಹೀಗಾಗಿ ಎಲ್ಲ ಸಮುದಾಯದವರು ಜಯಂತಿ ಆಚರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವರಾಜು, ಕಾರ್ಯಧ್ಯಕ್ಷ ಶಿವಮಾದೇಗೌಡ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ತಾಪಂ ಮಾಜಿ ಅಧ್ಯಕ್ಷ ಪ್ರಕಾಶ್, ಗ್ಯಾರಂಟಿ ಯೋಜನೆಗಳ ಸಮಿತಿ ಜಿಲ್ಲಾಧ್ಯಕ್ಷ ಚಿಕ್ಕಲಿಂಗಯ್ಯ, ಸದಸ್ಯ ಅಮೃತ್ ಕಂಟೇಶ್, ಪುರಸಭೆ ಸದಸ್ಯ ಶಿವಸ್ವಾಮಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಪ್ರಸನ್ನ,ಟಿಎಪಿಸಿಎಂಎಸ್ ಅಧ್ಯಕ್ಷ ಬಸವರಾಜು, ಮುಖಂಡರಾದ ಮಾರೇಹಳ್ಳಿ ಬಸವರಾಜು, ಭಭ್ರುವಹನ, ಪುರಸಭೆ ಮಾಜಿಸದಸ್ಯ ಕೃಷ್ಣ ಸೇರಿದಂತೆ ಇತರರು ಇದ್ದರು.ಬಸವೇಶ್ವರ ಕಾಯಕ ತತ್ವದಿಂದ ಸಮಸಮಾಜ ನಿರ್ಮಾಣ: ಬಿ.ಎಸ್. ವಿಜಯ್

ಕಿಕ್ಕೇರಿ:ವಿಶ್ವಗುರು ಬಸವೇಶ್ವರ ತತ್ವವನ್ನು ಕಾಯಕವಾಗಿ ಸ್ವೀಕರಿಸಿದರೆ ಸಮಸಮಾಜದ ನಿರ್ಮಾಣಕ್ಕೆ ಸಾಧ್ಯವಾಗಲಿದೆ ಎಂದು ಪಿಡಿಒ ಬಿ.ಎಸ್.ವಿಜಯ್ ತಿಳಿಸಿದರು.

ಐಕನಹಳ್ಳಿ ಗ್ರಾಪಂನಲ್ಲಿ ನಡೆದ ಬಸವೇಶ್ವರ ಜಯಂತಿಯಲ್ಲಿ ಮಾತನಾಡಿ, ಮೇಲು ಕೀಳು ಅಸಮಾನತೆ ತೊಡೆದು ವಚನ ಸಾಹಿತ್ಯದ ಮೂಲಕ ಕ್ರಾಂತಿ ಸಾರಿದವರು ಬಸವಣ್ಣ. ಅಂತರ್‌ ಜಾತಿ ವಿವಾಹಕ್ಕೆ ಪ್ರೋತ್ಸಾಹ, ಸರಳ ವಿವಾಹಕ್ಕೆ ಒತ್ತು ನೀಡಿದ ಮನುಕುಲದ ಆಧ್ಯಾತ್ಮಿಕ ಶರಣಗುರು ಇವರಾಗಿದ್ದಾರೆ ಎಂದರು.ಬಸವಣ್ಣ ವಚನ ಚಳವಳಿ ಮೂಲಕ ಕ್ರಾಂತಿ ಮಾಡಿದರು. ಜಾತಿ, ಕುಲ, ಮತ ಬಿಟ್ಟು ಮಾನವ ಧರ್ಮ, ಮಾನವ ಪ್ರೀತಿ ಬಲು ದೊಡ್ಡದು ಎಂದು ಸಾರಿ ಕಲ್ಯಾಣ ಸಾಮ್ರಾಜ್ಯದ ತತ್ವ ಸಾರಿದ ಮಹಾನ್ ನಾಯಕ ಎಂದರು.

ಇದೇ ವೇಳೆ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಿಸಲಾಯಿತು. ಗ್ರಾಪಂ ಕಾರ್ಯದರ್ಶಿ ಪ್ರಭುನಂದ, ಸಿಬ್ಬಂದಿ ಮಂಜೇಗೌಡ, ಶಿವು, ಹರೀಶ್, ಉಮೇಶ್‌ ಉಪಸ್ಥಿತರಿದ್ದರು.