ಸಾರಾಂಶ
12ನೇ ಶತಮಾನದಲ್ಲಿ ವಿಶ್ವಕ್ಕೆ ವಚನ ಸಾಹಿತ್ಯವನ್ನು ಪರಿಚಯಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಜಗತ್ತಿಗೆ ಸಂಸತ್ತಿನ ಮೊದಲ ಕಲ್ಪನೆ ಕೊಟ್ಟವರು ಬಸವಣ್ಣನವರು.
ಕನ್ನಡಪ್ರಭ ವಾರ್ತೆ ಸುರಪುರ
ಸಮಾಜದಲ್ಲಿದ್ದ ಜಾತೀಯತೆ, ಅಸಮಾನತೆ, ಮೌಢ್ಯತೆ, ಕಂದಚಾರ ತೊಲಗಿಸಲು ಹೋರಾಡಿದ ಯುಗದ ಪ್ರವರ್ತಕರು, ಮಹಾ ಮಾನವತವಾದಿ ವಿಶ್ವಗುರು ಬಸವಣ್ಣನವರು ಎಂದು ಕನ್ನೆಳ್ಳಿ ಹಿರೇಮಠದ ವೇದಮೂರ್ತಿ ಬೂದಯ್ಯ ಸ್ವಾಮಿಗಳು ಹೇಳಿದರು.ತಾಲೂಕಿನ ಸಮೀಪದ ಕನ್ನೆಳ್ಳಿ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ವಿಶ್ವಕ್ಕೆ ವಚನ ಸಾಹಿತ್ಯವನ್ನು ಪರಿಚಯಿಸಿದ ಕೀರ್ತಿ ಬಸವಾದಿ ಶರಣರಿಗೆ ಸಲ್ಲುತ್ತದೆ. ಜಗತ್ತಿಗೆ ಸಂಸತ್ತಿನ ಮೊದಲ ಕಲ್ಪನೆ ಕೊಟ್ಟವರು ಬಸವಣ್ಣನವರು, ಅನುಭವ ಮಂಟಪವನ್ನು ಸ್ಥಾಪಿಸಿ ಸಾವಿರಾರು ಜನ ಶಿವಶರಣರ ಅನುಭವಕೂಟಕ್ಕೆ ಅನುವು ಮಾಡಿಕೊಟ್ಟರು ಎಂದರು.
ಸ್ತ್ರೀ ಸಮಾನತೆ, ಜಾತಿ ರಹಿತ ಸಮಾಜ ನಿರ್ಮಾಣ, ವೀರಶೈವ ಲಿಂಗಾಯತ ಧರ್ಮ ಸ್ಥಾಪನೆ ಸೇರಿದಂತೆ ಅನೇಕ ಸಮಾಜ ಧಾರ್ಮಿಕ ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದಾರೆ. ಬಸವೇಶ್ವರ ತತ್ವ, ಚಿಂತನೆ ವಿಚಾರಗಳು ಸರ್ವಕಾಲಕ್ಕೂ ಪ್ರಸ್ತುತವಾಗುತ್ತವೆ ಎಂದು ಹೇಳಿದರು.ಬಸಯ್ಯಸ್ವಾಮಿ ಮಠಪತಿ, ಪ್ರಕಾಶ ಅಂಗಡಿ ಕನ್ನಳ್ಳಿ, ಮಲ್ಲು ಜಾನಕೋಟಿ, ಮಡಿವಾಳಪ್ಪ ಕೊಂಡಗುಳಿ, ದೇವಣ್ಣ ಚಾನಕೋಟಿ, ಈರಣ್ಣ ಮೈಲಾಸುರ, ದೇವಣ್ಣ ಕೆರಿ, ಶರಣು ಕೇರಿ, ಮಲ್ಲೇಶಿ ಕುಂಬಾರ್, ನಾಗಣ್ಣ ಅಂಗಡಿ, ನಾಗರಾಜ ಕೇರಿ, ಬಸವರಾಜ ಮೆಡಿಕಲ್, ನಿಂಗಣ್ಣ ಸಜ್ಜನ, ಬಸವರಾಜ ಬೋನಾಳ, ವಿಜಯಕುಮಾರ ಹೂಗಾರ, ಮಹೇಶ್ ಬಿಸೆಟ್ಟಿ, ಬಸವರಾಜ ನಾಯಕೋಡಿ, ಸಿದ್ದು ಶಾಬಾದಿ, ಬೂಮ್ಮಣ್ಣ ಪೂಜಾರಿ, ನಿಂಗಣ್ಣ ಪೂಜಾರಿ, ಪರಶುರಾಮ ದ್ಯಾಪುರ್ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಮುಖಂಡರು ಹಾಗೂ ನೂರಾರು ಜನ ಯುವಕರು ಪಾಲ್ಗೊಂಡಿದ್ದರು.