ಸಾರಾಂಶ
ಕುಷ್ಟಗಿ: ವಿಶ್ವಕರ್ಮ ಸಮುದಾಯದವರು ಈ ಆಧುನಿಕ ಯುಗದಲ್ಲಿ ಅಪ್ಡೇಟ್ ಆಗುವ ಮೂಲಕ ಅಭಿವೃದ್ಧಿ ಹೊಂದಬೇಕು ಎಂದು ನಟರಾಜ ಸೋನಾರ ಅಭಿಪ್ರಾಯಪಟ್ಟರು.ಪಟ್ಟಣದ ಕಾಳಿಕಾದೇವಿಯ ದೇವಸ್ಥಾನದಲ್ಲಿ ತಾಲೂಕು ವಿಶ್ವ ಕರ್ಮ ಸಮಾಜದಿಂದ ನಡೆದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಅಂಗವಾಗಿ ನಡೆದ ಜಯಂತ್ಯುತ್ಸವ ಹಾಗೂ ಉಪನಯನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಮಾಜದವರು ಜಾಗೃತರಾಗಬೇಕು. ಆಧುನಿಕ ಕಾಲದಲ್ಲಿ ಎಲ್ಲವು ಮೊಬೈಲ್ ಮೂಲಕ ಆರ್ಡರ್ ಮಾಡಿಕೊಂಡು ಸಾಮಗ್ರಿಗಳನ್ನು ಖರೀದಿಸುವ ಕಾಲದಲ್ಲಿ ನಮ್ಮ ಸಮಾಜದವರು ಮೈಮರೆತು ಕೆಲಸ ಮಾಡಬಾರದು. ಜತೆಗೆ ನಮ್ಮ ಸಂಸ್ಕೃತಿಯನ್ನು ಸಂಸ್ಕಾರವನ್ನು ಮರೆಯಬಾರದು ಎಂದು ಹೇಳಿದರು.ನಮ್ಮ ಸಮಾಜದವರು ಕುಲಕಸುಬನ್ನು ಹೊಂದಿದವರು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿಕೊಂಡು ಉತ್ತಮ ಜೀವನ ಸಾಗಿಸುವಂತಾಗಬೇಕು ಎಂದರು.ಮಾಜಿ ಶಾಸಕ ಹಸನಸಾಬ ದೋಟಿಹಾಳ ಮಾತನಾಡಿದರು. ಈ ಸಂದರ್ಭದಲ್ಲಿ ದಿವಾಕರ ಸ್ವಾಮಿ ಲೇಬಗೇರಿ, ರಾಮಚಂದ್ರ ಬಡಿಗೇರ, ಕೆ.ಬಿ. ಬಡಿಗೇರ, ವಾಸಪ್ಪ ಪತ್ತಾರ, ಭೀಮಣ್ಣ ಬಡಗೇರ, ಚಂದ್ರಶೇಖರ ಬಡಗೇರ, ವೀರಪ್ಪ ಪತ್ತಾರ, ರಾಮಚಂದ್ರಪ್ಪ ಬಡಿಗೇರ್, ಕೃಷ್ಣಪ್ಪ ಪತ್ತಾರ್, ಎಚ್ಚರಪ್ಪ ಬಡಿಗೇರ್, ಎಸ್.ಕೆ. ಬಡಿಗೇರ್, ಗುರಪ್ಪ ಬಡಿಗೇರ್, ಶ್ರೀಶೈಲಪ್ಪ ಬಡಿಗೇರ್, ಸವಿತಾ ಬಡಿಗೇರ್, ವೀರಭದ್ರಪ್ಪ ಪತ್ತಾರ್, ಲಕ್ಷ್ಮಿಬಾಯಿ ಕಮ್ಮಾರ್, ನೀಲಕಂಠಪ್ಪ ಬಡಿಗೇರ್, ಶರಣಪ್ಪ ಬಡಿಗೇರ್, ಬೊಮ್ಮಣ್ಣ ಬಡಿಗೇರ್, ಮೌನೇಶ್ ಸೋನಾರ್, ದೇವಪ್ಪ ಬಡಿಗೇರ್, ಅನಿಲಕುಮಾರ್ ಕಮ್ಮಾರ್, ದೇವರಾಜ ಬಿಜಕಲ್, ಬಸವರಾಜ್ ಬಡಿಗೇರ್ ಇದ್ದರು.