ಸಮಾಜವನ್ನು ಸಂಘಟಿಸಲು, ಶಿಕ್ಷಣ ಪ್ರೋತ್ಸಾಹಿಸಲು ಮತ್ತು ಕಲೆ ಬೆಳೆಸಲು ನಿರಂತರ ಕೆಲಸ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಧೈರ್ಯದಿಂದ ಸಂಘಟಿತರಾಗಿ ಕೆಲಸ ಮಾಡಬೇಕೆಂದು ಮುಖಂಡರು ಕರೆ ನೀಡಿದರು.
ಧಾರವಾಡ:
ಪಂಚಕಸಬುಗಳ ಮೂಲಕ ನಾಡಿಗೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ. ಅದರಲ್ಲೂ ಇತ್ತೀಚೆಗೆ ಸಮಾಜದ ಮಹಿಳೆಯರು ಸಂಘಟಿತರಾಗಿರುವುದು ಶ್ಲಾಘನೀಯ ಎಂದು ಮಾಜಿ ಮೇಯರ್ ರಾಮಣ್ಣ ಬಡಿಗೇರ ತಿಳಿಸಿದರು.ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ಮಹಿಳಾ ಪದಾಧಿಕಾರಿಗಳ ಪದಗ್ರಹಣದಲ್ಲಿ ಮಾತನಾಡಿದ ಅವರು, ಒಗ್ಗಟ್ಟಿನಿಂದ ಎಲ್ಲವನ್ನೂ ಸಾಧಿಸಬಹುದು. ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ, ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ವಿಶ್ವಕರ್ಮ ಸಮುದಾಯಕ್ಕೆ ನ್ಯಾಯ ಸಿಗಲು ನಾವು ಸಂಘಟಿತರಾಗಿ ಇರಬೇಕು ಎಂದರು.
ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ ಮಾತನಾಡಿ, ಸಮಾಜವನ್ನು ಸಂಘಟಿಸಲು, ಶಿಕ್ಷಣ ಪ್ರೋತ್ಸಾಹಿಸಲು ಮತ್ತು ಕಲೆ ಬೆಳೆಸಲು ನಿರಂತರ ಕೆಲಸ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಾಗಿ ಧೈರ್ಯದಿಂದ ಸಂಘಟಿತರಾಗಿ ಕೆಲಸ ಮಾಡಬೇಕು ಎಂದು ಹೇಳಿದರು.ಹುಲಗುರ ಮೌನೇಶ್ವರ ಸ್ವಾಮೀಜಿ, ಶಿರೋಳ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗೌರವ ಅಧ್ಯಕ್ಷರಾಗಿ ಅನುಪಮಾ ಹಂಸಭಾವಿ, ಅಧ್ಯಕ್ಷರಾಗಿ ಶಾರದಾ ಬಡಿಗೇರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಕ್ಕ ಪತ್ತಾರ, ಉಪಾಧ್ಯಕ್ಷ ಮಂಜುಳಾ ಕಮ್ಮಾರ, ಕಲಾವತಿ ಹವಳಕೊಂಡ, ಶಂಕ್ರವ್ವ ಸುತಾರ, ಗೀತಾ ಬಡಿಗೇರ, ಮಂಜುಳಾ ಪೂಜಾರ, ಕಾರ್ಯದರ್ಶಿ ಮೀನಾಕ್ಷಿ ಬಡಿಗೇರ, ಶಿವಲೀಲಾ ಪತ್ತಾರ, ಪುಷ್ಪ ಪತ್ತಾರ, ಶೋಭಾ ಪತ್ತಾರ, ವಿಜಯಲಕ್ಷ್ಮೀ ಬಡಿಗೇರ, ಶೋಭಾ ಪತ್ತಾರ, ಅಕ್ಕಮ್ಮ ಪತ್ತಾರ ಅಧಿಕಾರ ಗ್ರಹಣ ಮಾಡಿದರು.
ಆರ್.ಡಿ. ಕಡ್ಲಿಕೊಪ್ಪ, ಶ್ರೀಶೈಲ ಸುತಾರ, ಜಿ.ಐ. ಪಟ್ಟಣಕೋಡಿ, ವಿ.ಬಿ. ಬಡಿಗೇರ ಸೇರಿದಂತೆ ಇತರರಿದ್ದರು.