ವಿಶ್ವಕರ್ಮರು ಅಪಾರ ಜ್ಞಾನ ಬಲ ಹೊಂದಿದ್ದರು: ಎಚ್.ಕೆ.ಮೂರ್ತಿ

| Published : Sep 19 2025, 01:00 AM IST

ವಿಶ್ವಕರ್ಮರು ಅಪಾರ ಜ್ಞಾನ ಬಲ ಹೊಂದಿದ್ದರು: ಎಚ್.ಕೆ.ಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ವಿಶ್ವಕರ್ಮರು ಅಪಾರ ಜ್ಞಾನ ಬಲದಿಂದ ಅನೇಕ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ .

ಹಲಗೂರು: ಸಾವಿರಾರು ವರ್ಷಗಳ ಹಿಂದೆ ದೇವಾನು ದೇವತೆಗಳಿಗೆ ಆಯುಧಗಳು, ಅರಮನೆ, ಮಹಲುಗಳನ್ನು ಕಟ್ಟಿದ ಗರಿಮೆ ವಿಶ್ವಕರ್ಮ ಸಮುದಾಯಕ್ಕೆ ಸಲ್ಲುತ್ತದೆ ಎಂದು ಗ್ರಾಪಂ ಸದಸ್ಯ ಎಚ್.ಕೆ.ಮೂರ್ತಿ ತಿಳಿಸಿದರು. ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಮಹೋತ್ಸವದಲ್ಲಿ ಮಾತನಾಡಿ, ವಿಶ್ವಕರ್ಮರು ಅಪಾರ ಜ್ಞಾನ ಬಲದಿಂದ ಅನೇಕ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ವ್ಯವಸಾಯ ಸಲಕರಣೆಗಳು, ಆಭರಣ ಮತ್ತು ದೇವಾಲಯಗಳ ವಾಸ್ತುಶಿಲ್ಪ ಕಲೆಗಳನ್ನು ತಯಾರಿಸುವ ಜಗತ್ತಿನ ನಿರ್ಮಾತೃ ವಿಶ್ವಕರ್ಮರಾಗಿದ್ದಾರೆ. ಪಂಚಕರ್ಮ ಕೆಲಸ ಮಾಡುವ ಜನಾಂಗದ ಇವರು ರೈತ ಸ್ನೇಹಿ ಆಗಿದ್ದಾರೆ. ಕೃಷಿಗೆ ಬೇಕಾದ ನೇಗಿಲು, ಕುಂಟೆ, ಆಯುಧ ಸೇರಿ ಎಲ್ಲಾ ರೀತಿಯ ಸಾಮಗ್ರಿಗಳನ್ನು ಉತ್ಪಾದಿಸಿ ಅನ್ನದಾತರಿಗೆ ನೆರವಾಗಿದ್ದಾರೆ ಎಂದು ತಿಳಿಸಿದರು. ತಾಪಂ ಇಒ ಎಚ್.ಜಿ.ಶ್ರೀನಿವಾಸ್ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗ್ರಾಪಂ ಅಧ್ಯಕ್ಷೆ ಗುಲ್ನಾಜ್ ಭಾನು, ಉಪಾಧ್ಯಕ್ಷೆ ಸಿ.ಲತಾ, ಸದಸ್ಯರಾದ ಲಿಯಾಕಿತ್ ಅಲಿ, ಜಮೀಲ್ ಪಾಷಾ, ಸದ್ರುಲ್ಲಾ, ಎಚ್.ಕೆ.ಶಶಿಕಲಾ, ಟಿ.ರಕ್ಷಿತಾ, ಚಿಕ್ಕತಾಯಮ್ಮ, ಶೈಲಜಾ, ಪಿಡಿಒ ಕೆ.ಚೆಂದಿಲ್, ಬಿಲ್ ಕಲೆಕ್ಟರ್ ಆನಂದ್ ಸೇರಿದಂತೆ ಹಲವರು ಇದ್ದರು.

-----------ಹಲಗೂರಿನ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವಕರ್ಮ ಜಯಂತಿ ಮಹೋತ್ಸವದಲ್ಲಿ ಪಂಚಾಯ್ತಿ ಅಧ್ಯಕ್ಷೆ ಗುಲ್ನಾಜ್ ಬಾನು, ಉಪಾಧ್ಯಕ್ಷೆ ಸಿ.ಲತಾ, ಸದಸ್ಯರಾದ ಎಚ್.ಕೆ.ಮೂರ್ತಿ, ಲಿಯಾಕಿತ್ ಅಲಿ, ಜಮೀಲ್ ಪಾಷಾ, ಸದ್ರುಲ್ಲಾ, ಪಿಡಿಒ ಕೆ.ಚಂದಿಲ್, ಬಿಲ್ ಕಲೆಕ್ಟರ್ ಆನಂದ್ ಸೇರಿ ಇತರರು ಭಾಗಿಯಾಗಿದ್ದರು.