ನರಸಿಂಹರಾಜಪುರವಿಶ್ವ ಕರ್ಮ ಜಯಂತಿ ವಿಶ್ವ ಕರ್ಮ ಬ್ರಾಹ್ಮಣ ಸಮಾಜದ ಹಬ್ಬ ಎಂದು ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಒಕ್ಕೂಟದ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಆಚಾರ್ಯ ತಿಳಿಸಿದರು.
- ಸಿಂಸೆಯ ವಿಶ್ವ ಕರ್ಮ ಬ್ರಾಹ್ಮಣ ಸಮುದಾಯ ಭವನದಲ್ಲಿ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರವಿಶ್ವ ಕರ್ಮ ಜಯಂತಿ ವಿಶ್ವ ಕರ್ಮ ಬ್ರಾಹ್ಮಣ ಸಮಾಜದ ಹಬ್ಬ ಎಂದು ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ಶೃಂಗೇರಿ ಕ್ಷೇತ್ರ ಒಕ್ಕೂಟದ ಅಧ್ಯಕ್ಷ ಎ.ಎಸ್.ಕೃಷ್ಣಯ್ಯ ಆಚಾರ್ಯ ತಿಳಿಸಿದರು.
ಗುರುವಾರ ಸಿಂಸೆ ವಿಶ್ವ ಕರ್ಮ ಸಮುದಾಯ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ, ಗಾಯಿತ್ರಿ ವಿಶ್ವ ಕರ್ಮ ಮಹಿಳಾ ಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ವಿರಾಟ್ ವಿಶ್ವ ಕರ್ಮವ ಚಂಡೆ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಈ ಹಿಂದೆ ನಮ್ಮ ಸಮಾಜದಿಂದ ಮಾತ್ರ ವಿಶ್ವ ಕರ್ಮ ಜಯಂತಿ ಆಚರಿಸಲಾಗುತ್ತಿತ್ತು. 2016 ರಿಂದ ಸರ್ಕಾರಿ ಕಾರ್ಯಕ್ರಮವಾಗಿದೆ. ಸರ್ಕಾರ ವಿಶ್ವ ಕರ್ಮ ನಿಗಮ ಪ್ರಾರಂಭಿಸಿದ್ದು ಇದರಲ್ಲಿ ವಿವಿಧ ಸಾಲ, ಸೌಲಭ್ಯಗಳಿವೆ. ಇದನ್ನು ನಮ್ಮ ಸಮಾಜದವರು ಉಪಯೋಗಿಸಿಕೊಳ್ಳಬೇಕು. ನಮಗೆ ಸಂಘಟನೆ ಅತಿ ಮುಖ್ಯ ಎಂದರು.ಮೆಣಸೂರಿನ ಪುರೋಹಿತರಾದ ಅರುಣ ಶರ್ಮ ಉಪನ್ಯಾಸ ನೀಡಿ, ಜಗತ್ತಿನ ಸೃಷ್ಠಿಯಲ್ಲಿ ವಿಶ್ವಕರ್ಮರ ಪಾತ್ರ ದೊಡ್ಡ ದಾಗಿದೆ.ವಿಶ್ವ ಕರ್ಮ ಸಮಾಜಕ್ಕೆ ಗಾಯಿತ್ರಿ ಪೀಠ, ಸಾವಿತ್ರಿ ಪೀಠ, ಸರಸ್ವತಿ ಪೀಠ ಸೇರಿದಂತೆ 5 ಪೀಠಗಳು ಮಾರ್ಗ ದರ್ಶನ ನೀಡುತ್ತಿದೆ. ವಿಶ್ವ ಕರ್ಮ ಸಮಾಜದವರು ಕಾಳಿಕಾಂಬ ದೇವರ ಆರಾಧನೆ ಮಾಡುತ್ತಾರೆ. ಸಮಾಜದ ಆಧಾರ ಸ್ಥಂಭವಾದ ಗಾಯಿತ್ರಿ ಉಪಾಸನೆ ಮಾಡುತ್ತೇವೆ. ನಮ್ಮ ಸಮಾಜದಲ್ಲಿ ಭಾಷೆ,ಆಚಾರ, ವಿಚಾರದಿಂದ ಹಲವು ಪಂಗಡ ಗಳಾಗಿ ವಿಭಜನೆಯಾಗಿತ್ತು.ಈಗ ಸಂಘಟನೆಯಿಂದ ಮತ್ತೆ ಒಟ್ಟಾಗಿದ್ದೇವೆ. ನಮ್ಮ ಸಮಾಜದ ಅನೇಕರು ವಿಜ್ಞಾನ, ಕಲೆ, ಸಾಹಿತ್ಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಭಾರತ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದರು. ವಿಶ್ವ ಕರ್ಮ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪಾರ್ಚನೆ ಮಾಡಿದರು. ಸಭೆಗೂ ಮುನ್ನ ಸಮೀಪದ ನಾಗಲಾಂಬಿಕ ದೇವಸ್ಥಾನದಲ್ಲಿ ವಿಶ್ವ ಕರ್ಮ ಯಜ್ಞ , ವಿಶೇಷ ಪೂಜೆ ನಡೆಯಿತು.
ಇದೇ ಸಂದರ್ಭದಲ್ಲಿ ವಿಶ್ವ ಕರ್ಮ ಸಮಾಜದ ಹಿರಿಯರಾದ ವಿಜಯ ಆಚಾರ್ಯ, ಸಮಾಜದ ನಿವೃತ್ತ ಶಿಕ್ಷಕಿ ನೇತ್ರಾವತಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾವ್ಯ ಸ್ವಾಗತಿಸಿದರು. ಕರುಗುಂದ ಅರುಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.ಸಭೆಯ ಅಧ್ಯಕ್ಷತೆಯನ್ನು ವಿಶ್ವ ಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ರಾಜೇಶ್ ಆಚಾರ್ಯ ವಹಿಸಿದ್ದರು. ಅತಿಥಿಗಳಾಗಿ ಗ್ರೇಡ್ -2 ತಹಶೀಲ್ದಾರ್ ಸುಜಾತ, ವಿಶ್ವ ಕರ್ಮ ಸಮಾಜದ ಮುಖಂಡರಾದ ನಳಿನಾಕ್ಷನ್ ಆಚಾರ್ಯ, ಶಿವಶಂಕ