ಶಿಲ್ಪಕಲೆಗಳ ಕೆತ್ತನೆಯಲ್ಲಿ ವಿಶ್ವಕರ್ಮ ಕೊಡುಗೆ ಅಪಾರ : ತಮ್ಮಯ್ಯ

| Published : Mar 04 2025, 12:37 AM IST

ಶಿಲ್ಪಕಲೆಗಳ ಕೆತ್ತನೆಯಲ್ಲಿ ವಿಶ್ವಕರ್ಮ ಕೊಡುಗೆ ಅಪಾರ : ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಪರಮಾತ್ಮನ ವಿಗ್ರಹ ಹಾಗೂ ಶಿಲ್ಪಕಲೆಗಳ ಕೆತ್ತನೆಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ. ಕಲ್ಲು ಹಾಗೂ ಮರಗಳಿಂದ ಆರಾಧಿಸುವ ದೇವರ ಮೂರ್ತಿಗಳನ್ನು ಕೆತ್ತಲಟ್ಟಿರುವ ಹಿನ್ನೆಲೆಯಲ್ಲಿ ವಿಶ್ವಕರ್ಮರಿಗೆ ರಾಷ್ಟ್ರದಲ್ಲಿ ವಿಶೇಷ ಗೌರವವಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ವಿಶ್ವಕರ್ಮ ಸಮುದಾಯ ಭವನದಲ್ಲಿ ಶ್ರೀ ವೈಶ್ಯಕರ್ಮಣ ಮಹಾಯಜ್ಞ । ಸಾಮೂಹಿಕ ಉಪನಯನ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪರಮಾತ್ಮನ ವಿಗ್ರಹ ಹಾಗೂ ಶಿಲ್ಪಕಲೆಗಳ ಕೆತ್ತನೆಯಲ್ಲಿ ವಿಶ್ವಕರ್ಮರ ಕೊಡುಗೆ ಅಪಾರ. ಕಲ್ಲು ಹಾಗೂ ಮರಗಳಿಂದ ಆರಾಧಿಸುವ ದೇವರ ಮೂರ್ತಿಗಳನ್ನು ಕೆತ್ತಲಟ್ಟಿರುವ ಹಿನ್ನೆಲೆಯಲ್ಲಿ ವಿಶ್ವಕರ್ಮರಿಗೆ ರಾಷ್ಟ್ರದಲ್ಲಿ ವಿಶೇಷ ಗೌರವವಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾಸಭಾದಿಂದ ಹಮ್ಮಿಕೊಂಡಿದ್ಧ ಶ್ರೀ ವೈಶ್ಯ ಕರ್ಮಣ ಮಹಾಯಜ್ಞ, ಸಾಮೂಹಿಕ ಉಪನಯನ ಮತ್ತು ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಮಾನ್ಯ ಬಂಡೆಯನ್ನು ನೂರಾರು ಉಳಿ ಏಟಿನಿಂದ ಕೆತ್ತಿ ಸುಂದರ ರೂಪಕೊಟ್ಟು ದೈವಜ್ಞಾನ ತುಂಬುವ ಕೈಚಳಕ ವಿಶ್ವಕರ್ಮರಲ್ಲಿದೆ. ಆ ಕೆತ್ತಲ್ಪಟ್ಟಿರುವ ನೂರಾರು ಮೂರ್ತಿಗಳನ್ನು ಮಠ ಮಂದಿರ, ಮನೆಗಳಲ್ಲಿ ಪ್ರತಿಷ್ಟಾಪಿಸಿ ಕೈಮುಗಿಯುವಂತಹ ಸಂಸ್ಕೃತಿಗೆ ಪ್ರೇರಿತರು. ಹೀಗಾಗಿ ದೇವರ ಸೇವೆಯಲ್ಲಿ ವಿಶ್ವಕರ್ಮರ ಕೊಡುಗೆ ಶ್ಲಾಘನೀಯ ಎಂದರು.

ಅಮರಶಿಲ್ಪಿ ಜಕಣಾಚಾರಿ ಬೇಲೂರು ಹಳೇಬೀಡು ಕೆತ್ತನೆ ನೋಡಲು ಎರಡು ಕಣ್ಣುಗಳು ಸಾಲದು. ಈ ವಿಶಿಷ್ಟ ಶಿಲ್ಪಕಲೆ ಸವಿಯಲು ಪ್ರಪಂಚದ ವಿವಿಧ ಮೂಲೆಗಳಿಂದ ಭೇಟಿ ನೀಡುತ್ತಾರೆ. ಅದರಂತೆ ವಿಜಯನಗರ ಸಾಮ್ರಾಜ್ಯ, ಪುರಾತನ ದೇವಾಲಯಗಳಲ್ಲಿ ಯಾವುದೇ ತಾಂತ್ರಿಕತೆ ಇಲ್ಲದಾಗ ಕೇವಲ ಮೆದುಳಿನ ಶಕ್ತಿಯಿಂದಲೇ ಭವ್ಯ ರೂಪು ನೀಡಿದ್ದಾರೆ ಎಂದು ಹೇಳಿದರು.ಪ್ರಸ್ತುತ ಶ್ರೀಲೇಖಾ ಟಾಕೀಸ್ ಸಮೀಪ ಸಂಘದ ಕಟ್ಟಡ ಅರ್ಧಬರ್ಧ ಸ್ಥಿತಿಯಲ್ಲಿದೆ. ಈ ಭವನದ ಅಭಿವೃದ್ಧಿಗೆ ನಗರಸಭೆ ಯಿಂದ ಅನುದಾನ ಕಾಯ್ದಿರಿಸಿದ್ದು, ಸದ್ಯದಲ್ಲೇ ಅನುದಾನ ಬಿಡುಗಡೆ ಗೊಳಿಸಿ, ಮುಂದಿನ ವಾರ್ಷಿಕೋತ್ಸವದ ವೇಳೆಗೆ ಕಟ್ಟಡದ ಸಂಪೂರ್ಣ ಕಾಮಗಾರಿ ಪೂರೈಸಿ ಸಮಾಜಕ್ಕೆ ಅರ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಸಾನಿಧ್ಯ ವಹಿಸಿದ್ದ ಚನ್ನಗಿರಿಯ ಸಾವಿತ್ರಿ ಪೀಠದ ಶ್ರೀ ಶಂಕರಾತ್ಮನಂದ ಸರಸ್ವತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ಎಳೆ ವಯಸ್ಸಿನಿಂದಲೇ ಮಕ್ಕಳಿಗೆ ಸನಾತನ ಸಂಸ್ಕೃತಿಯನ್ನು ಪಾಲಕರು ಬಿತ್ತಿದರೆ, ಭವಿಷ್ಯದಲ್ಲಿ ಹಿಂದೂ ಪರಂಪರೆ, ಸನಾತನ ಧರ್ಮ ಉಳಿಸಿ ಬೆಳೆಸಲು ಸಾಧ್ಯ ಎಂದು ಹೇಳಿದರು.ವಿಶ್ವಕರ್ಮ ಸಮುದಾಯದಲ್ಲಿ ಹಲವಾರು ಉಪ ಜಾತಿಗಳಿವೆ. ಎಲ್ಲವೂ ಕೂಡಾ ವಿಶ್ವಕರ್ಮ ಜನಾಂಗದ ಭಾಗವಾಗಿವೆ ಎಂದ ಅವರು, ಈ ವೈಶ್ವಕರ್ಮಣ ಯಜ್ಞ ಲೋಕಕಲ್ಯಾಣಾರ್ಥ ಹಾಗೂ ಜನತೆಯಲ್ಲಿ ಸಾಮರಸ್ಯ ಮೂಡಿಸುವ ನಿಟ್ಟಿನಲ್ಲಿ ಜರುಗಿಸ ಲಾಗಿದೆ ಎಂದು ತಿಳಿಸಿದರು.ಜಿಪಂ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ಸಣ್ಣ ಸಮಾಜಗಳಲ್ಲಿ ಕಾಲೆಳೆಯುವ ಸಂಸ್ಕೃತಿಯಿದೆ. ಹೀಗಾಗಿ ಸಮಾಜವನ್ನು ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಮುನ್ನಡೆದರೆ ಆರ್ಥಿಕ ಮತ್ತು ಸದೃಢವಾಗಿ ಸಮಾಜ ಬೆಳವಣಿಗೆ ಹೊಂದಲು ಸಾಧ್ಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಭಾದ ಅಧ್ಯಕ್ಷ ಎಚ್.ಆರ್. ಉಮಾಶಂಕರ್, ವಿಶ್ವಕರ್ಮ ಸಮಾಜ ಸ್ಥಾಪನೆಗೆ ಹಲವಾರು ಹಿರಿಯರ ಕೊಡುಗೆಯಿದೆ. ಜೊತೆಗೆ ಸಮಾಜದ ಏಳಿಗೆಗೆ ಶಕ್ತಿಮೀರಿ ಕೆಲಸ ಆಗಿವೆ. ಆದರೆ, ಅನೇಕ ವರ್ಷಗಳು ಕಳೆದರೂ ಭವನ ಪೂರ್ಣ ಗೊಳ್ಳದಿರುವುದು ಬೇಸರ ತಂದಿದೆ. ಈ ಬಗ್ಗೆ ಶಾಸಕರು ಶೀಘ್ರಗಮನಹರಿಸಿ ಭವನ ಪೂರ್ಣಕ್ಕೆ ಅನುದಾನ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.ಇದೇ ವೇಳೆ ಮುಂಜಾನೆಯಿಂದ ನೂರಾರು ಭಕ್ತರ ಸಮ್ಮುಖದಲ್ಲಿ ಯಜ್ಞ ಪೂರ್ಣಗೊಂಡಿತು. ತದ ನಂತರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸುಮಾರು 20 ವಟುಗಳಿಗೆ ಸಾಮೂಹಿಕ ಉಪ ನಯನ ಜರುಗಿಸಲಾಯಿತು.ಕಾರ್ಯಕ್ರಮದಲ್ಲಿ ಸೇವಾ ಸಭಾದ ಗೌರವಾಧ್ಯಕ್ಷ ಚೇತನ್‌ಕುಮಾರ್, ನಿಕಟಪೂರ್ವ ಅಧ್ಯಕ್ಷ ಎಂ.ಜೆ. ಮಹೇಶ್‌ ಆಚಾರ್, ವಿಶ್ವಕರ್ಮ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ.ರತೀಶ್, ಜಿಲ್ಲಾ ವಿಶ್ಚಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಭೀಮಾ ಚಾರ್, ಸೇವಾರತ್ನ ಪುರಸ್ಕೃತ ಕೃಷ್ಣಮೂರ್ತಿ, ವಿದ್ಯುತ್‌ ಸರಬರಾಜು ನಿಗಮದ ಸದಸ್ಯ ಚಿದಂಬರ್, ಕೆನರಾ ಬ್ಯಾಂಕ್ ಮೌಲ್ಯಮಾಪಲಕರ ಸಂಘದ ರಾಜ್ಯಾಧ್ಯಕ್ಷ ರುದ್ರಯ್ಯ ಆಚಾರ್, ಸಮಾಜದ ಮುಖಂಡರಾದ ದಿವಾಕರ, ಬಿ.ಚಂದ್ರಶೇಖರ್, ಮಹೇಂದ್ರಚಾರ್, ನವೀನ್‌ಕುಮಾರ್ ಆಚಾರ್ಯ, ತೀರ್ಥಾಚಾರ್ ಉಪಸ್ಥಿತರಿದ್ದರು.3 ಕೆಸಿಕೆಎಂ 9ಚಿಕ್ಕಮಗಳೂರಿನ ವಿಶ್ವಕರ್ಮ ಸಮುದಾಯ ಭವನದಲ್ಲಿ ನಡೆದ ಶ್ರೀ ವೈಶ್ಯಕರ್ಮಣ ಮಹಾಯಜ್ಞ, ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು.