ವಿಶ್ವಕರ್ಮರ ರಾಜಕೀಯ ಶಕ್ತಿ ಪ್ರದರ್ಶನ ಅಗತ್ಯವಿದೆ

| Published : Nov 21 2025, 03:00 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸವದತ್ತಿ ಜಗತ್ತಿಗೆ ವಿಶ್ವಕರ್ಮರು ಕಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಧಾರ್ಮಿಕವಾಗಿ ಉನ್ನತ ಸ್ಥಾನದಲಿದ್ದು, ರಾಜಕೀಯ ಶಕ್ತಿಗೋಸ್ಕರ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಿದೆ ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಹೇಳಿದರು. ತಾಲೂಕಿನ ಶಿರಸಂಗಿ ಶಕ್ತಿಪೀಠ ಕಾಳಿಕಾ ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಸಭೆ, ದಾನಿಗಳಿಗೆ ಸನ್ಮಾನ ಹಾಗೂ ಕಲಾಪ್ರದರ್ಶನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಜಗತ್ತಿಗೆ ವಿಶ್ವಕರ್ಮರು ಕಲೆ ಸಾಹಿತ್ಯ, ಸಂಸ್ಕೃತಿ ಹಾಗೂ ಧಾರ್ಮಿಕವಾಗಿ ಉನ್ನತ ಸ್ಥಾನದಲಿದ್ದು, ರಾಜಕೀಯ ಶಕ್ತಿಗೋಸ್ಕರ ಶಕ್ತಿ ಪ್ರದರ್ಶನ ಮಾಡುವ ಅಗತ್ಯವಿದೆ ಎಂದು ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುಜ್ಞಾನಮೂರ್ತಿ ಹೇಳಿದರು. ತಾಲೂಕಿನ ಶಿರಸಂಗಿ ಶಕ್ತಿಪೀಠ ಕಾಳಿಕಾ ದೇವಸ್ಥಾನದ ಆವರಣದಲ್ಲಿ ನಡೆದ ಧಾರ್ಮಿಕ ಸಭೆ, ದಾನಿಗಳಿಗೆ ಸನ್ಮಾನ ಹಾಗೂ ಕಲಾಪ್ರದರ್ಶನ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮುದಾಯದ ಸರ್ವಾಂಗೀಣ ಬೆಳವಣಿಗೆಗೆ ರಾಜಕೀಯ ಜಾಗೃತಿ ಮುಖ್ಯವಾಗಿದೆ ಎಂದರು.ವಿಶ್ವಕರ್ಮ ಸಮುದಾಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಾಬು ಪತ್ತಾರ ಮಾತನಾಡಿ, ಸಮಾಜ ಧಾರ್ಮಿಕ ತಳಹದಿಯ ಮೇಲೆ ಬೆಳೆಯುತ್ತಿದ್ದು, ದೇಶವನ್ನಾಳುವ ಶಕ್ತಿ ವಿಶ್ವಕರ್ಮರಿಗೂ ಇದೆ ಎಂದು ತಿಳಿಸಿದರು.

ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷ ಪ್ರೊ.ಪಿ.ಬಿ.ಬಡಿಗೇರ ಮಾತನಾಡಿದರು. ಚಿಕ್ಕುಂಬಿ ನಾಗಲಿಂಗೇಶ್ವರ ಮಠದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿದ್ದರು. ಕಾಳಿಕಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ತೇಜಪ್ಪಾಚಾರ್ಯ ಮೂಕಿ ಸಾನ್ನಿಧ್ಯ ವಹಿಸಿದ್ದರು. ಉಡುಪಿ ಸಂಗೀತ ವಿದ್ವಾನ ಯಶವಂತ.ಎಂ.ಜಿ, ಸಮಾಜದ ಗೌರವಾಧ್ಯಕ್ಷ ಉಮೇಶ.ಬಿ, ಅಖಿಲ ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜ ಬೆಂಗಳೂರಿನ ಅಧ್ಯಕ್ಷ ಈಶ್ವರಾಚಾರ್ಯ.ಎಂ.ಪಿ, ಕುಮಾರ.ಜಿ ಹಾಗೂ ಎಂ.ಪಿ.ಚರತ್‌ಚಂದ್ರ, ಭಾರತಿ ಲೋಹಾರ, ನಾಗೇಂದ್ರ ಆಚಾರ, ವೈಶಾಲಿ ಸುತಾರ, ರಾಜಗೋಪಾಲ ಕಡ್ಲಿಕೊಪ್ಪ ಅವರನ್ನು ಸನ್ಮಾನಿಸಲಾಯಿತು.

ಶಿಲ್ಪಕಲೆ ವಿಭಾಗದಲ್ಲಿ ಪ್ರಜ್ವಲ್ ಬಡಿಗೇರ, ಸುದರ್ಶನ ದೇವಾಡಿಗ, ಪ್ರಕಾಶ ಬಡಿಗೇರ, ಕೆ.ಆರ್.ಮೌನೇಶ್ವರ ಆಚಾರ್ಯ, ಮೌನೇಶ ಬಡಿಗೇರ ಹಾಗೂ ಚಿತ್ರಕಲೆ ವಿಭಾಗದಲ್ಲಿ ವಿಠ್ಠಲ್ ಬರಕಾಳೆ, ರವಿ ನಾಯಕ್, ಪವನ ನಾಯಕ್, ದರ್ಶನ ಮುಳಹುಂದ, ಸುದೀಪ ಕಮ್ಮಾರ ಮತ್ತು ಛಾಯಾಚಿತ್ರಕಲೆ ವಿಭಾಗದಲ್ಲಿ ರಮೇಶ ಚವ್ಹಾಣ, ಕುಬೇರ ನಾಗಲೂರ, ಕಾವ್ಯ.ಎಸ್.ಪಿ, ನವೀನಕುಮಾರ ಶಿರವಾರ, ಹನಮಂತ ಕಮ್ಮಾರ ಬಹುಮಾನ ಪಡೆದರು.ರಾಜ್ಯಮಟ್ಟದ ಕಲಾ ಪ್ರದರ್ಶನದ ಮಾರ್ಗದರ್ಶನಕ ಎಸ್.ಕೆ.ಪತ್ತಾರ, ಎಸ್.ಎಂ.ಲೋಹಾರ, ಎಂ.ಕೆ.ಪತ್ತಾರ, ಡಾ.ವಿರುಪಾಕ್ಷ ಬಡಿಗೇರ, ಶಂಕರ ಪತ್ತಾರ, ಎಂ.ಬಿ.ಬಡಿಗೇರ, ನವೀನಕುಮಾರ ಆಚಾರ, ವಿರೇಶ ಬಡಿಗೇರ, ಸಂಗಮೇಶ ಬಡಿಗೇರ ಬಹುಮಾನ ವಿತರಣೆ ವೇಳೆ ಉಪಸ್ಥಿತರಿದ್ದರು.