ಶಿರೋಳ ಯಚ್ಚರಸ್ವಾಮಿಗಳ ಸಂಸ್ಥಾನ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸುವರು.

ಗದಗ: ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಅಂಗ ಸಂಸ್ಥೆಗಳ ಸಹಯೋಗದಲ್ಲಿ 8ನೇ ವರ್ಷದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕಲಿಕಾ ಸಾಮಗ್ರಿಗಳ ವಿತರಣೆ, ವಿಶ್ವಕರ್ಮ ನೌಕರಶ್ರೀ, ವಿಶ್ವಕರ್ಮ ಸಾಧಕಶ್ರೀ ಪ್ರಶಸ್ತಿ ಪ್ರದಾನ ಹಾಗೂ ನಿವೃತ್ತ ನೌಕರ ದಂಪತಿಗೆ ಸನ್ಮಾನ ಸಮಾರಂಭ ಮೇ 24ರಂದು ಬೆಳಗ್ಗೆ 9.30ಕ್ಕೆ ನಗರದ ವಿಶ್ವಕರ್ಮ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ.ಕಡ್ಲಿಕೊಪ್ಪ ತಿಳಿಸಿದರು.

ನಗರದ ವಿಶ್ವಕರ್ಮ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿರೋಳ ಯಚ್ಚರಸ್ವಾಮಿಗಳ ಸಂಸ್ಥಾನ ಗವಿಮಠದ ಅಭಿನವ ಯಚ್ಚರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಉದ್ಘಾಟಿಸುವರು. ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಡಿ. ಕಡ್ಲಿಕೊಪ್ಪ ಅಧ್ಯಕ್ಷತೆ ವಹಿಸುವರು ಎಂದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕ ಕೆ.ಡಿ. ಬಡಿಗೇರ, ಧಾರವಾಡ ಜಿಲ್ಲಾ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕಾಳಪ್ಪ ವಿ. ಬಡಿಗೇರ, ರಾಯಚೂರ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಾ. ಮೋಹನ ವೈ. ಪತ್ತಾರ, ಧಾರವಾಡ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಿಠ್ಠಲ ಜಿ. ಕಮ್ಮಾರ, ಹಾವೇರಿ ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಈರಪ್ಪ ಶ. ಪಂಚಾನನ, ದೇವೇಂದ್ರಪ್ಪ ಅಗಲತಕಟ್ಟಿ, ಕೆ.ರಾಮು ಗಾಣದಾಳ, ದೇವೇಂದ್ರಪ್ಪ ಎಚ್. ಬಡಿಗೇರ, ರುದ್ರಪ್ಪ ಕೆ. ಬಡಿಗೇರ, ಮೌನೇಶ ಕೆಂಭಾವಿ ಆಗಮಿಸುವರು ಎಂದರು.

ಈ ವೇಳೆ ಡಾ. ಸಿ.ವಿ. ಬಡಿಗೇರ, ವಿಶ್ವನಾಥ ಕಮ್ಮಾರ, ಶ್ರೀಧರ ಕೊಣ್ಣೂರ, ಮೌನೇಶ ಸಿ. ಬಡಿಗೇರ, ಮಹೇಶ ಕಮ್ಮಾರ, ವಿಶ್ವನಾಥ ರಾಜನಾಳ, ಸುಮಂಗಲಾ ಪತ್ತಾರ, ಶಂಕರ ಪತ್ತಾರ, ಆನಂದ ಕಮ್ಮಾರ, ನಾಗರಾಜ ಕಮ್ಮಾರ, ಶಂಕರ ಕಂಚಗಾರ, ಗೋಪಾಲ ಬಡಿಗೇರ, ಕುಮಾರ ಬಡಿಗೇರ, ಪ್ರಕಾಶ ಬಡಿಗೇರ, ಈರಣ್ಣ ಬಡಿಗೇರ, ವಿಶ್ವನಾಥ ಪತ್ತಾರ, ಮಧುಸೂದನ ವಿಶ್ವಕರ್ಮ ಇತರರು ಇದ್ದರು.