ಸಾರಾಂಶ
ತನ್ನದೇ ಆದ ವೈಶಿಷ್ಟಮಯ ಶಿಲ್ಪ ಮತ್ತು ಚಿತ್ರಕಲೆಯ ಮೂಲಕ ವಿಶ್ವಪ್ರಸಿದ್ಧರಾದವರು ವಿಶ್ವಕರ್ಮರು. ಅವರ ಕಲೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅಂತಹ ದೈತ್ಯಶಕ್ತಿಯ ಕಲೆಯನ್ನು ಉಳಿಸಿಕೊಂಡು ಹೋಗುವಲ್ಲಿ ನಾಡಿನ ವಿಶ್ವಕರ್ಮರು ಯಶಸ್ವಿಯಾಗಿದ್ದಾರೆ. ವಿಶ್ವಕರ್ಮರು ನಮಗೆ ಸದಾ ಆದರ್ಶಪ್ರಾಯರು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತನ್ನದೇ ಆದ ವೈಶಿಷ್ಟಮಯ ಶಿಲ್ಪ ಮತ್ತು ಚಿತ್ರಕಲೆಯ ಮೂಲಕ ವಿಶ್ವಪ್ರಸಿದ್ಧರಾದವರು ವಿಶ್ವಕರ್ಮರು. ಅವರ ಕಲೆಗೆ ಬೆಲೆಕಟ್ಟಲು ಸಾಧ್ಯವಿಲ್ಲ. ಅಂತಹ ದೈತ್ಯಶಕ್ತಿಯ ಕಲೆಯನ್ನು ಉಳಿಸಿಕೊಂಡು ಹೋಗುವಲ್ಲಿ ನಾಡಿನ ವಿಶ್ವಕರ್ಮರು ಯಶಸ್ವಿಯಾಗಿದ್ದಾರೆ. ವಿಶ್ವಕರ್ಮರು ನಮಗೆ ಸದಾ ಆದರ್ಶಪ್ರಾಯರು ಎಂದು ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ಧಿಮಂಡಳಿ ಅಧ್ಯಕ್ಷ ಟಿ. ರಘುಮೂರ್ತಿ ತಿಳಿಸಿದರು.ಅವರು, ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ವಿಶ್ವಕರ್ಮ ಸಮಾಜ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ರೇಹಾನ್‌ಪಾಷ, ರಾಜ್ಯ ಸರ್ಕಾರ ನಾಡಿಗೆ ಕೊಡುಗೆ ನೀಡಿದ ಮಹಾನ್ ವ್ಯಕ್ತಿಗಳ ಸ್ಮರಣೆಯನ್ನು ಇಂದಿನ ಪೀಳಿಗೆಯೂ ಸಹ ನೆನಪಿಸಿಕೊಳ್ಳುವಂತೆ ಮಾಡುವಲ್ಲಿ ಈ ಕಾರ್ಯಕ್ರಮ ರೂಪಿಸಿದೆ. ವಿಶ್ವಕರ್ಮ ಈ ನಾಡುಕಂಡ ಅಪರೂಪದ ಚಿತ್ರಬ್ರಹ್ಮ ಎಂದರು.ಕುಶಲಕರ್ಮಿಕಗಳ ವಿಭಾಗದ ರಾಜ್ಯಾಧ್ಯಕ್ಷ ಆರ್. ಪ್ರಸನ್ನಕುಮಾರ್ ಮಾತನಾಡಿ, ವಿಶ್ವಕರ್ಮರ ಜಯಂತಿಯನ್ನು ನಾಡ ಜಯಂತಿಯಾಗಿ ರೂಪಿಸುವಲ್ಲಿ ಸರ್ಕಾರದ ಪಾತ್ರ ದೊಡ್ಡದಿದೆ. ಪ್ರತಿವರ್ಷವೂ ಸಹ ನಾವೆಲ್ಲರೂ ವಿಶ್ವಕರ್ಮರ ಜಯಂತಿ ಆಚರಣೆಯನ್ನು ಆಚರಿಸುವ ಅವಕಾಶ ಮಾಡಿಕೊಡಲಾಗಿದೆ. ವಿಶ್ವಕರ್ಮರ ಅನೇಕ ಕಾರ್ಯಗಳ ಬಗ್ಗೆ ಸರ್ಕಾರ ಪುಸ್ತಕದ ಮೂಲಕ ಪ್ರಚಾರ ಕೈಗೊಳ್ಳುವಂತೆ ಮಾಡಬೇಕೆಂದರು.
ನಗರಸಭೆ ಅಧ್ಯಕ್ಷೆ ಜೈತುಂಬಿ, ಉಪಾಧ್ಯಕ್ಷೆ ಸುಜಾತ, ಇಒ ಶಶಿಧರ, ಅಧ್ಯಕ್ಷ ಚಂದ್ರಶೇಖರಚಾರ್, ಉಪಾಧ್ಯಕ್ಷ ವೈ. ನಾಗರಾಜು, ಯುವ ಘಟಕದ ಅಧ್ಯಕ್ಷ ಸೀತಾರಾಮಚಾರ್, ಸಹ ಕಾರ್ಯದರ್ಶಿ ಭರತ್‌ಕುಮಾರ್, ಖಜಾಂಚಿ ಜಿ.ಪಿ. ಪದ್ಮನಾಭಚಾರ್, ಮಾಜಿ ಅಧ್ಯಕ್ಷ ವೆಂಕಟೇಶ್‌ಚಾರ್, ಬಿಎನ್‌ಜಿ ವೆಂಕಟೇಶ್, ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ, ಮಹಿಳಾ ಘಟಕದ ಮಾಜಿ ಅಧ್ಯಕ್ಷೆ ಕಮಲಮ್ಮ, ಸರಸ್ವತಿ, ಎಂ. ಸುಮ, ಸುಮಲತಾ, ರಾಜೇಶ್ವರಿ, ಸಿ.ಇ. ಪ್ರಸನ್ನಕುಮಾರ್, ಜಯವೀರಚಾರಿ, ಶ್ರೀನಿವಾಸ್‌ಚಾರ್, ಡಿ. ಶಿವಕುಮಾರ್, ರಾಜೇಂದ್ರಚಾರ್ ಮುಂತಾದವರು ಉಪಸ್ಥಿತರಿದ್ದರು.