ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ತಹಸೀಲ್ದಾರ್ ನರಸಿಂಹಮೂರ್ತಿ

| Published : Sep 21 2024, 01:50 AM IST

ಸಮಾಜಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ: ತಹಸೀಲ್ದಾರ್ ನರಸಿಂಹಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಸುತ್ತಮುತ್ತಲಿನ ಜಗತ್ತನ್ನು ಆಕರ್ಷಕ ಹಾಗೂ ಸುಂದರವಾಗಿಸುವಲ್ಲಿ ವಿಶ್ವಕರ್ಮ ಸಮುದಾಯ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಹಸೀಲ್ದಾರ್ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.ಚನ್ನಪಟ್ಟಣದಲ್ಲಿ ವಿಶ್ವಕರ್ಮ ಜಯಂತಿಯಲ್ಲಿ ಮಾತನಾಡಿದರು.

-ಸಮುದಾಯದ ಯುವಕರು ಉದ್ಯಮದತ್ತ ಮುಖ ಮಾಡುತ್ತಿರುವುದು ಸ್ವಾಗತಾರ್ಹ ಕನ್ನಡಪ್ರಭ ವಾರ್ತೆ ಚನ್ನಪಟ್ಟಣ

ಸಮಾಜ ನಿರ್ಮಾಣದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಅಪಾರ. ನಮ್ಮ ಸುತ್ತಮುತ್ತಲಿನ ಜಗತ್ತನ್ನು ಆಕರ್ಷಕ ಹಾಗೂ ಸುಂದರವಾಗಿಸುವಲ್ಲಿ ವಿಶ್ವಕರ್ಮ ಸಮುದಾಯ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ತಹಸೀಲ್ದಾರ್ ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.

ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವಕರ್ಮ ಸಮುದಾಯದಲ್ಲಿ ಐದು ವಿಭಾಗದಲ್ಲಿ ಕೆಲಸ ಮಾಡಿ ಪ್ರಕೃತಿಗೆ ಸೌಂದರ್ಯ ಕಲ್ಪಿಸಿದ್ದಾರೆ. ಪ್ರವಾಸಿ ತಾಣಗಳು, ಬಹುಮಹಡಿ ಕಟ್ಟಡಗಳು ಸೇರಿದಂತೆ ಹಳ್ಳಿಯಿಂದ-ದಿಲ್ಲಿಯವರೆಗೆ ಪ್ರಕೃತಿಗೆ ಸುಂದರ ರೂಪ ನೀಡುವಲ್ಲಿ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದರು.

ವಿಶ್ವಕರ್ಮ ಸಮುದಾಯದ ಮುಖಂಡ ಜೆ.ಎಸ್. ರಾಜು ಮಾತನಾಡಿ, ರೈತರು ಕೃಷಿಗೆ ಬಳಸುವ ನೇಗಿಲಿನಿಂದ ಹಿಡಿದು ದೇವಸ್ಥಾನಗಳ ನಿರ್ಮಾಣ, ವಿಗ್ರಹಗಳ ಕೆತ್ತನೆ, ಚಿನ್ನಾಭರಣ ತಯಾರಿಕೆ, ಕಟ್ಟಡ ಸಾಮಗ್ರಿಗಳು ಹೀಗೆ ಪ್ರತಿ ಕ್ಷೇತ್ರದಲ್ಲಿ ವಿಶ್ವಕರ್ಮ ಸಮುದಾಯದ ಕೊಡುಗೆ ಇದೆ. ಇದನ್ನು ಗುರುತಿಸಿರುವ ಸರ್ಕಾರ ವಿಶ್ವಕರ್ಮ ಜಯಂತಿಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸುತ್ತಿದೆ. ಇಂದು ವಿಶ್ವಕರ್ಮ ಸಮುದಾಯದಲ್ಲಿನ ಎಲ್ಲಾ ಉದ್ಯಮದಲ್ಲಿ ಆಧುನಿಕತೆ ಮತ್ತು ಕಂಪ್ಯೂಟರ್ ವಿನ್ಯಾಸಗಳ ಹಾವಳಿ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸಮುದಾಯದ ಯುವಕರು ಉದ್ಯಮದತ್ತ ಮುಖ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಶಿಕ್ಷಕ ರಾಜಶೇಖರ್ ಮಾತನಾಡಿ, ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಉತ್ತಮ ಭವಿಷ್ಯ ರೂಪಿಸುವಲ್ಲಿ ಎಡವುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲೇ ಮಕ್ಕಳನ್ನು ಉದ್ಯಮದತ್ತ ಸೆಳೆದು ಅವರ ವಿದ್ಯಾಭ್ಯಾಸ ಮೊಟಕುಗೊಳಿಸುವ ಜತೆಗೆ ಹಣದ ಆಮಿಷಕ್ಕೆ ಸಿಲುಕಿಸುತ್ತಿದ್ದಾರೆ. ಸಮುದಾಯದ ಜನತೆ ಈಗಲಾದರೂ ಎಚ್ಚೆತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವಲ್ಲಿ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪತಹಸೀಲ್ದಾರ್ ಲಕ್ಷ್ಮಿದೇವಮ್ಮ, ಸಮುದಾಯದ ಮುಖಂಡರಾದ ಬ್ರಹ್ಮಾಚಾರ್, ಚಿನ್ನಸ್ವಾಮಾಚಾರ್, ಸಿ.ಜಿ.ರಮೇಶ್, ಕೃಷ್ಣಾಚಾರ್, ಪಾಲಿಶ್ ರಾಜು, ರಾಜೇಶ್ ಬೆಳಕೆರೆ, ರಾಜೇಶ್ ಚಕ್ಕೆರೆ, ರಾಮಣ್ಣ, ನಾಗೇಶ್ ಮಾಸ್ಟರ್, ಚಂದ್ರಾಚಾರ್, ನಾಣಿ, ಗುರುರಾಜ್, ಸುರೇಶ್, ಕೃಷ್ಣ, ಚಂದನ್, ದೇವರಾಜ್ ಇತರರಿದ್ದರು.