ಶಿಗ್ಗಾಂವಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ತಾಲೂಕು ಕಾರ್ಯ ನಿರತ ಪತ್ರಕರ್ತರ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ವಿಶ್ವನಾಥ ಬಂಡಿವಡ್ಡರ್ ಅವಿರೋಧವಾಗಿ ಆಯ್ಕೆಯಾದರು.
ಶಿಗ್ಗಾಂವಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ನಡೆದ ತಾಲೂಕು ಕಾರ್ಯ ನಿರತ ಪತ್ರಕರ್ತರ ಸದಸ್ಯರ ಸಭೆಯಲ್ಲಿ ಅಧ್ಯಕ್ಷರಾಗಿ ವಿಶ್ವನಾಥ ಬಂಡಿವಡ್ಡರ್ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಬಸವರಾಜ ಹೊನ್ನಣ್ಣನವರ, ಗೌಡಪ್ಪ ಬನ್ನೆ, ಪ್ರಧಾನ ಕಾರ್ಯದರ್ಶಿಯಾಗಿ ಬಸವರಾಜ ಹಡಪದ, ಖಜಾಂಚಿಯಾಗಿ ಸುಧಾಕರ ದೈವಜ್ಞ, ಕಾರ್ಯದರ್ಶಿಯಾಗಿ ಸುರೇಶ ಯಲಿಗಾರ, ಸಿದ್ದರಾಮಗೌಡ ಮೆಳ್ಳಾಗಟ್ಟಿ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ನಿಂಗಪ್ಪ ಚಾವಡಿ, ಜಿಲ್ಲಾಧ್ಯಕ್ಷ ನಾಗರಾಜ ಕುರುವತ್ತೇರ, ಉಪಾಧ್ಯಕ್ಷರಾದ ನಾರಾಯಣ ಹೆಗಡೆ, ರಾಜ್ಯ ಸಮಿತಿ ಸದಸ್ಯ ಪಿ.ಎಂ. ಸತ್ಯಪ್ಪನವರ, ಕಾರ್ಯದರ್ಶಿಗಳಾದ ಮಂಜುನಾಥ ಗುಡಿಸಾಗರ, ಕಾರ್ಯಕಾರಣಿ ಸಮಿತಿ ಸದಸ್ಯ ಕಿರಣ ಮಾಸಣಗಿ, ಸದಾಶಿವ ಹಿರೇಮಠ, ಹೊನ್ನಪ್ಪ ಬಾರ್ಕಿ, ಮಾಜಿ ಅಧ್ಯಕ್ಷ ಪರಮೇಶ ಲಮಾಣಿ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾದ ಬಿ.ಎಸ್. ಹಿರೇಮಠ, ಎಂ.ವ್ಹಿ. ಗಾಡದ, ರವಿ ಉಡುಪಿ, ಈಶ್ವರಗೌಡ ಕರಿಗೌಡ್ರ, ವಿರುಪಾಕ್ಷಪ್ಪ ನೀರಲಗಿ, ದೇವರಾಜ ಸುಣಗಾರ, ಪುಟ್ಟಪ್ಪ ಲಮಾಣಿ, ಚನ್ನವೀರ ನೀರಲಗಿ, ಶಿವು ಕೊಟಗಿಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.