ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡಿ ಮಹತ್ವ ಅರಿಯಬೇಕು

| Published : May 22 2024, 12:52 AM IST

ಸಾರಾಂಶ

ಚನ್ನಮ್ಮನ ಕಿತ್ತೂರು ಪಟ್ಟಣದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ, ಕಸಾಪ ತಾಲೂಕು ಘಟಕದಿಂದ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಆವರಣದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಚನ್ನಮ್ಮನ

ಕಿತ್ತೂರುಪಟ್ಟಣದಲ್ಲಿ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ, ಕಸಾಪ ತಾಲೂಕು ಘಟಕದಿಂದ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ ಆವರಣದಲ್ಲಿ ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯನ್ನು ವಿಶೇಷವಾಗಿ ಆಯೋಜಿಸಲಾಯಿತು.ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ನಿಮಿತ್ತ ಆಯೋಜಿಸಿದ್ದ ಅನೌಪಚಾರಿಕ ಜ್ಞಾನದ ಶಾಖೆಗಳಾಗಿ ವಸ್ತು ಸಂಗ್ರಹಾಲಯಗಳು ಎಂಬ ವಿಷಯದ ಕುರಿತು ಇತಿಹಾಸ ಪ್ರಾಧ್ಯಾಪಕ ಡಾ.ಬಸವರಾಜ.ಎನ್.ಅಕ್ಕಿ ಅವರು ವಸ್ತು ಸಂಗ್ರಹಾಲಯಗಳ ಹಿನ್ನೆಲೆ, ಬೆಳೆದು ಬಂದ ಬಗೆ ಅವುಗಳ ಅಧ್ಯಯನದ ಮಹತ್ವ, ವಿವಿಧ ತೆರನಾದ ವಸ್ತು ಸಂಗ್ರಹಾಲಯದ ಕುರಿತು ವಿಸ್ತೃತವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ವಸ್ತು ಸಂಗ್ರಹಾಲಯದ ಅಧ್ಯಯನದ ಅಗತ್ಯತೆ ಪ್ರಸ್ತಾಪಿಸಿದರು. ಈ ಕಾರ್ಯಕ್ರಮದ ನಿಮಿತ್ತ ಕ.ಸಾ.ಪ ಚನ್ನಮ್ಮನ ಕಿತ್ತೂರ ವತಿಯಿಂದ 2023-24ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿಗೆ ಸ್ಥಾನ ಪಡೆದ ವಿದ್ಯಾರ್ಥಿಗಳ ಸನ್ಮಾನ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ 125/125 ಅಂಕಗಳನ್ನು ಪಡೆದ 24 ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ, ಪುಸ್ತಕ ಕಾಣಿಕೆಗಳನ್ನು ನೀಡಿ ಗೌರವಿಸಲಾಯಿತು.ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಕನ್ನಡ ಭಾಷೆ, ಇತಿಹಾಸ ಪ್ರಜ್ಞೆಯ ಬೆಳವಣಿಗೆಯ ಬಗ್ಗೆ ಹಾಗೂ ವಸ್ತುಸಂಗ್ರಹಾಲಯಗಳು ವಹಿಸುವ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಸಾಂಸ್ಕೃತಿಕ, ಸಾಮಾಜಿಕ ಜವಾಬ್ದಾರಿಗಳನ್ನು ಮನಗಾಣಿಸಿದರು. ಜನಸಾಮಾನ್ಯರು ವಸ್ತು ಸಂಗ್ರಹಾಲಯಗಳಿಗೆ ಭೇಟಿ ನೀಡುವುದರ ಮೂಲಕ ಅವುಗಳ ಮಹತ್ವ ಅರಿಯಬೇಕು ಎಂದು ಸಲಹೆ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಅಜ್ಜನ್ನವರ ಉದ್ಘಾಟಿಸಿ ಮಾತನಾಡಿದರು. ವಸ್ತುಸಂಗ್ರಹಾಲಯದ ಕ್ಯುರೇಟರ್ ರಾಘವೇಂದ್ರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ ಈ ವರ್ಷದ ಧ್ಯೇಯ ಶಿಕ್ಷಣ ಮತ್ತು ಸಂಶೋಧನೆಗಾಗಿ ವಸ್ತುಸಂಗ್ರಾಲಯಗಳು ಎಂಬ ವಿಷಯದ ಕುರಿತು ವಿವರಿಸಿದರು.ಪಟ್ಟಣ ಪಂಚಾಯತಿ ಅಧಿಕಾರಿ ಮಲ್ಲಯ್ಯ ಹಿರೇಮಠ ಅವರು ಇತಿಹಾಸ ಪ್ರಜ್ಞೆ, ಚಾರಿತ್ರಿಕ, ಸಾಂಸ್ಕೃತಿಕ ಅಧ್ಯಯನಗಳ ಅವಶ್ಯಕತೆಯನ್ನು ತಿಳಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಬಿ.ದಳವಾಯಿಯವರು ಕರ್ನಾಟಕ ಸುವರ್ಣ ಸಂಭ್ರಮ ಕುರಿತು ಪ್ರಸ್ತಾಪಿಸಿ ಕನ್ನಡ ವಿಷಯದಲ್ಲಿ 125/125 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸುವುದರ ಜೊತೆಗೆ ಕನ್ನಡ ನಾಡು ನುಡಿಯ ವಿಶೇಷತೆ ಕೊಂಡಾಡಿದರು.

ಕುಮಾರಿ ಕೃತಿ ಮತ್ತು ಅಕ್ಷರ ಪ್ರಾರ್ಥಿಸಿದರು. ಮಂಜುನಾಥ ಕಳಸಣ್ಣವರ ಉಪನ್ಯಾಸಕರನ್ನು ಪರಿಚಯಿಸಿದರು. ಬಿ.ಸಿ.ಬಿದರಿಯವರು ಕಾರ್ಯಕ್ರಮ ನಿರೂಪಿಸಿದರು. ರಾಜಶೇಖರ. ರಗಟಿಯವರು ವಂದಿಸಿದರು. ಮಹೇಶ.ಹೊಂಗಲರವರು ಸನ್ಮಾನ ಕಾರ್ಯಕ್ರಮ ನೆರವೇರಿಸಿದರು. ಕ.ಸಾ.ಪ ದ ಸದಸ್ಯರಾದ ವಿವೇಕ.ಕುರಗುಂದ, ವಿ.ಎಸ್.ನಂದಿಹಳ್ಳಿ, ನಾಗಯ್ಯ. ಹುಲೆಪ್ಪನವರಮಠ, ಮಹಿಳಾ ಸದಸ್ಯರಾದ ಪ್ರಭಾವತಿ ಲದ್ದಿಮಠ ಹಾಗೂ ಸರ್ವಸದಸ್ಯರು ಭಾಗವಹಿಸಿದ್ದರು. ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.ಅಂತಾರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನಾಚರಣೆಯ ಮಹತ್ವ ಹಾಗೂ ಅವುಗಳ ಜ್ಞಾನದ ಪೂರೈಕೆ ಪ್ರಸ್ತುತ ವಸ್ತುಸಂಗ್ರಹಾಲಯಗಳು ಜೀವಂತ ಇತಿಹಾಸದ ಪ್ರತೀಕವಾಗಿವೆ.

-ರಾಘವೇಂದ್ರ,

ಕ್ಯುರೇಟರ್ ಕಿತ್ತೂರ ರಾಣಿ ಚನ್ನಮ್ಮ ಸ್ಮಾರಕ ಸರ್ಕಾರಿ ವಸ್ತುಸಂಗ್ರಹಾಲಯ.