ನೆಲಮಂಗಲ/ದಾಬಸ್‍ಪೇಟೆ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೆಲಮಂಗಲಕ್ಕೆ 2 ದಿನಗಳ ಪ್ರವಾಸ ಕೈಗೊಂಡಿದ್ದು, ಭಕ್ತರ ಮನೆಗಳು ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು ತಿಳಿಸಿದರು
ನೆಲಮಂಗಲ/ದಾಬಸ್‍ಪೇಟೆ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ನೆಲಮಂಗಲಕ್ಕೆ 2 ದಿನಗಳ ಪ್ರವಾಸ ಕೈಗೊಂಡಿದ್ದು, ಭಕ್ತರ ಮನೆಗಳು ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ನಾಗರಾಜು ತಿಳಿಸಿದರು.
ನೆಲಮಂಗಲ ನಗರದ ಪರಿವೀಕ್ಷಣಾ ಮಂದಿರದಲ್ಲಿ ವಿವಿಧ ಒಕ್ಕಲಿಗ ಸಂಘಟನೆಗಳು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕೊರೋನಾ ಸಾಂಕ್ರಾಮಿಕಕ್ಕೂ ಮೊದಲೇ ಶ್ರೀಗಳು ನೆಲಮಂಗಲ ಪ್ರವಾಸ ಮಾಡಲು ಯೋಜನೆ ರೂಪಿಸಿದ್ದರೂ ಸಾಧ್ಯವಾಗಿರಲಿಲ್ಲ. ಅ. 26, 27 ಎರಡು ದಿನ ನೆಲಮಂಗಲ ನಗರ, ಕಸಬಾ, ತ್ಯಾಮಗೊಂಡ್ಲು, ಸೋಂಪುರ, ಸೋಲೂರುಗಳಿಗೆ ಭೇಟಿ ನೀಡಿ ಭಕ್ತರನ್ನು ಭೇಟಿ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀ ಮಠಕ್ಕೆ ಭಕ್ತರು, ಸಮುದಾಯದ ಮುಖಂಡರು ದವಸ ಧಾನ್ಯ, ಗುರು ಕಾಣಿಕೆ ಸೇರಿದಂತೆ ಇತರೆ ನೆರವು ನೀಡಬಹುದು. ಒಕ್ಕಲಿಗ ಸಮುದಾಯದ ಎಲ್ಲಾ ಮುಖಂಡರು ಪಕ್ಷಾತೀತವಾಗಿ ಐಕ್ಯತೆಯಿಂದ ಶ್ರೀಗಳನ್ನು ಸ್ವಾಗತಿಸಿ, ಗುರು ಪೂಜೆ ಸಲ್ಲಿಸಿ, ಗುರುವಿಗೆ ಗುರುವಂದನೆ ಸಲ್ಲಿಸೋಣ ಎಂದು ಮನವಿ ಮಾಡಿದರು.ನೆಲಮಂಗಲ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಶ್ರೀಗಳು ಇದೇ ಮೊದಲ ಬಾರಿಗೆ ನೆಲಮಂಗಲ ತಾಲೂಕಿನ ಭಕ್ತರ ಮನೆಗಳಿಗೆ ಎರಡು ದಿನ ಭೇಟಿ ನೀಡುತ್ತಿದ್ದಾರೆ. ಹಿಂದೆ ಈ ರೀತಿ ಕಾರ್ಯಕ್ರಮಗಳು ನಡೆದಿಲ್ಲವಾದ್ದರಿಂದ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟಾಗಿ ಒಂದು ಕಡೆ ಅದ್ಧೂರಿ ಗುರುವಂದನಾ ಸಮಾರಂಭ ಮಾಡಿ ನಮ್ಮ ಕೈಲಾದ ಗುರುಕಾಣಿಕೆ ನೀಡೋಣ. ಶ್ರೀಮಠಕ್ಕೆ ನಮ್ಮ ಕೈಲಾದ ಸಹಕಾರವನ್ನು ಎಲ್ಲರೂ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎನ್.ಗಣೇಶ್, ಎನ್ ಪಿಎ ಮಾಜಿ ಅಧ್ಯಕ್ಷ ಎಂ.ನಾರಾಯಣಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಣ್ಣ (ತಿಮ್ಮರಾಜು), ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಚಂದ್ರಕಲಾ, ರಾಜ್ಯ ಒಕ್ಕಲಿಗರ ಒಕ್ಕೂಟದ ಅಧ್ಯಕ್ಷ ಮಧುಸೂಧನ್,ಪ್ರೆಸ್ ಕ್ಲಬ್ ಕೌನ್ಸಿಲ್ ತಾಲೂಕು ಅಧ್ಯಕ್ಷ ವಿಜಯ್ ಹೊಸಪಾಳ್ಯ, ಮುಖಂಡರಾದ ಹೆಚ್.ಜಿರಾಜು, ಚಂದುಕುಮಾರ್, ವಿಷ್ಣು, ಲಕ್ಷ್ಮೀನಾರಾಯಣ್, ಕೃಷ್ಣಪ್ಪ, ಸುರೇಶ್, ಮಾರೇಗೌಡ, ನಾರಾಯಣಸ್ವಾಮಿ, ಕೆಂಪರಾಜು, ಟಿ.ಬೇಗೂರು ಮುನಿರಾಜು, ಅಂಜನಮೂರ್ತಿ, ಸಿಎಂ ಗೌಡ, ಬೆಟ್ಟಸ್ವಾಮಿ,ರಮೇಶ್, ಪುರುμÉೂೀತ್ತಮ್, ಗೋಪಿ, ಬೂದಿಹಾಳ್ ಕಿಟ್ಟಿ, ಮುನಿರಾಜು, ಪಾಪಣ್ಣಿ, ಶಿವಕುಮಾರ್, ಮಂಜುನಾಥ್, ಗಣೇಶ್, ಶೇಖರ್, ವೆಂಕಟೇಶ್, ಮಣಿ, ಮನುಕಾಚನಹಳ್ಳಿ, ಲೀಲಾಕುಮಾರ್, ಸುರೇಂದ್ರ, ರವೀಂದ್ರ, ಕಿರಣ್, ಶೇಖರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಪೋಟೋ 5 :
ನೆಲಮಂಗಲದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ನೆಲಮಂಗಲ ಪ್ರವಾಸ ಕುರಿತು ವಿವಿಧ ಒಕ್ಕಲಿಗರ ಸಂಘಟನೆಗಳ ಮುಖಂಡರು ಪೂರ್ವಭಾವಿ ಸಭೆಯಲ್ಲಿ ಮಾಹಿತಿ ನೀಡಿದರು.