ಪಾಪ ಕಳೆಯಲು ಪುಣ್ಯಕ್ಷೇತ್ರದ ದರ್ಶನ ಮಾಡಿ: ಸದಾಶಿವ ಸ್ವಾಮೀಜಿ

| Published : Feb 24 2025, 12:35 AM IST

ಪಾಪ ಕಳೆಯಲು ಪುಣ್ಯಕ್ಷೇತ್ರದ ದರ್ಶನ ಮಾಡಿ: ಸದಾಶಿವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಅನ್ಯಕ್ಷೇತ್ರೇ ಕೃತಂ ಪಾಪಂ, ಪುಣ್ಯಕ್ಷೇತ್ರೆ ವಿನಷ್ ತಿ ಎಂಬಂತೆ ಎಲ್ಲೋ ಮಾಡಿದ ಪಾಪವನ್ನು ಕಳೆಯಲು ಹಾಗೂ ತೊಳೆದುಕೊಳ್ಳಲು ಪುಣ್ಯಕ್ಷೇತ್ರಗಳಿಗೆ ಬರಬೇಕು.

ಹಾವೇರಿ: ಇಲ್ಲಿಯ ಸಿಂಧಗಿಮಠದ ಲಿಂ. ಶಾಂತವೀರ ಪಟ್ಟಾಧ್ಯಕ್ಷರ ೪೫ನೇ ಪುಣ್ಯಸ್ಮರಣೋತ್ಸವಕ್ಕೆ ಶನಿವಾರ ಸಂಜೆ ಚಾಲನೆ ನೀಡಲಾಯಿತು.

ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಅನ್ನ, ಅರಿವು, ಆಶ್ರಯಗಳ ಮೂಲಕ ವಿದ್ಯಾರ್ಥಿಗಳ ಬದುಕಿನ ಮೇಲೆ ಬೆಳಕು ಚೆಲ್ಲಿದ ಪುಣ್ಯ ಪುರುಷರು ಶಾಂತವೀರ ಪಟ್ಟಾಧ್ಯಕ್ಷರು. ಅಜ್ಞಾನಾಂಧಕಾರದಲ್ಲಿದ್ದ ಭಕ್ತರ ಬದುಕಿಗೆ ಸಂಸ್ಕೃತಿ ಸಂಸ್ಕಾರಗಳ ಪೂರ್ಣವಾಗಿ ಉಣಬಡಿಸಿ ಜ್ಞಾನ ತೇಜದ ಪೂರ್ಣ ಕುಂಭದ ಕಳಶವನ್ನಿಟ್ಟ ಪುಣ್ಯದ ಪುತ್ಥಳಿ ಶಾಂತವೀರ ಗುರುಗಳು. ಅನ್ಯಕ್ಷೇತ್ರೇ ಕೃತಂ ಪಾಪಂ, ಪುಣ್ಯಕ್ಷೇತ್ರೆ ವಿನಷ್ ತಿ ಎಂಬಂತೆ ಎಲ್ಲೋ ಮಾಡಿದ ಪಾಪವನ್ನು ಕಳೆಯಲು ಹಾಗೂ ತೊಳೆದುಕೊಳ್ಳಲು ಪುಣ್ಯಕ್ಷೇತ್ರಗಳಿಗೆ ಬರಬೇಕು. ಇಂತಪ್ಪ ಪುಣ್ಯ ಕ್ಷೇತ್ರಗಳಲ್ಲಿ ಮಂತ್ರ ನಿನಾದ ಮೂಡಿಸುತ್ತ ಕ್ಷೇತ್ರಗಳಿಗೆ ಜೀವ ಚೈತನ್ಯವನ್ನು ತುಂಬುವ ವೈದಿಕರನ್ನು ಪುರೋಹಿತರನ್ನು ಶಾಸ್ತ್ರಕೋವಿದರನ್ನು ತಯಾರು ಮಾಡಿ ಯಾಲಕ್ಕಿ ಕಂಪಿನ ಕೀರ್ತಿಯನ್ನು ಎಲ್ಲ ಕಡೆ ದೇಶೆಗೆ ಪಸರಿಸಿದ ಕೀರ್ತಿ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ ಎಂದರು.ಈ ಸಂದರ್ಭದಲ್ಲಿ ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿ, ಹೊತ್ತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು, ಪ್ರತಿದಿನ ಶರಣರ ಜೀವನ ದರ್ಶನ ಪ್ರವಚನ ನೀಡಲು ಆಗಮಿಸಿದ್ದ ಡಾ. ಮಹಾಂತ ಪ್ರಭು ಸ್ವಾಮೀಜಿ ಉಪಸ್ಥಿತರಿದ್ದರು. ಗದುಗಿನ ವೀರೇಶ್ವರ ಪುಣ್ಯಶ್ರಮದ ಸಂಗಮೇಶ್ ಪಾಟೀಲ್ ಸಂಗೀತ ಸೇವೆ ನೀಡಿದರು. ತೋಟೇಂದ್ರ ಕುಮಾರ್ ಕರಡಗಲ್ ತಬಲಾ ಹಾಗೂ ಷಣ್ಮುಖಯ್ಯ ಹಿರೇಮಠ ವಯಲಿನ್ ಸಾಥ್‌ ನೀಡಿದರು.

ಸಿಂದಗಿ ಮಠದ ಸಂಚಾಲಕ ಶಿವಬಸಯ್ಯ ಆರಾಧ್ಯಮಠ, ಜಿ.ಎಸ್. ಭಟ್, ನಗರಸಭೆ ನಾಮನಿರ್ದೇಶನ ಸದಸ್ಯ ವೀರಣ್ಣ ಹನುಮನಹಳ್ಳಿ, ವಾಗೀಶ ಶಾಸ್ತ್ರಿಗಳು, ಡಂಬಳ ಶಾಸ್ತ್ರಿಗಳು, ಶಿವಯೋಗಿಯ್ಯ ಹಿರೇಮಠ, ಮಲ್ಲಯ್ಯ ರಾಮಾಪುರ, ಈರಣ್ಣ ಮಹಾರಾಜಪೇಟ, ಶಂಕ್ರಣ್ಣ ಇಟಗಿ, ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಉಪ್ಥಿತರಿದ್ದರು.ಜೇನುನೊಣ ದಾಳಿ, ವ್ಯಕ್ತಿ ಸಾವು

ರಾಣಿಬೆನ್ನೂರು: ಜೇನುನೊಣಗಳು ಕಡಿದು ವ್ಯಕ್ತಿಯೊಬ್ಬ ಸಾವಿಗೀಡಾದ ಘಟನೆ ತಾಲೂಕಿನ ಹಲಗೇರಿ ಗ್ರಾಮದ ಹತ್ತಿರದಲ್ಲಿ ಶುಕ್ರವಾರ ನಡೆದಿದೆ. ಬ್ಯಾಡಗಿ ತಾಲೂಕಿನ ಹಿರೇಹಳ್ಳಿ ಗ್ರಾಮದ ಮರಿಗೌಡ ವೀರಭದ್ರಗೌಡ ಪಾಟೀಲ (59) ಮೃತಪಟ್ಟ ವ್ಯಕ್ತಿ. ಮೃತನು ಹಲಗೇರಿ ಹತ್ತಿರದ ಜಮೀನೊಂದರಲ್ಲಿ ಹುಣಸಿಮರದ ಕೆಳಗೆ ಹುಣಸೆಹಣ್ಣು ಆರಿಸುವ ಕೆಲಸ ಮಾಡುವ ಸಮಯದಲ್ಲಿ ಜೇನುನೊಣಗಳು ದಾಳಿ ಮಾಡಿವೆ ಎಂದು ದೂರು ದಾಖಲಾಗಿದೆ. ಈ ಕುರಿತು ಹಲಗೇರಿ ಠಾಣೆಯಲ್ಲಿ ದೂರು ದಾಖಲಾಗಿದೆ.