ಕೊಳೆರೋಗ ಬಾಧಿತ ಈರುಳ್ಳಿ ಹೊಲಗಳಿಗೆ ಭೇಟಿ

| Published : Aug 29 2025, 01:00 AM IST

ಸಾರಾಂಶ

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಬಾಗಲಕೋಟೆ ಜಿಲ್ಲಾ ಘಟಕದಿಂದ ಈರುಳ್ಳಿ ಕೊಳೆರೋಗ ಬಾಧಿತ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಲೋಕಾಪುರ

ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಬಾಗಲಕೋಟೆ ಜಿಲ್ಲಾ ಘಟಕದಿಂದ ಈರುಳ್ಳಿ ಕೊಳೆರೋಗ ಬಾಧಿತ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.

ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ ನೇತೃತ್ವದಲ್ಲಿ ರೈತರ ತಂಡ ಪಟ್ಟಣದ ರೈತ ಬರಮಪ್ಪ ಬಡಕಲಿ ಅವರ ಹೊಲಕ್ಕೆ ಭೇಟಿ ನೀಡಿ ಈರುಳ್ಳಿ ಬೆಳೆ ಹಾನಿ ಕುರಿತು ವೀಕ್ಷಣೆ ಮಾಡಿದರು.

ಜಿಲ್ಲೆಯಲ್ಲಿ ಕನಿಷ್ಠ ೨೦ ಸಾವಿರ ಎಕರೆ ಪ್ರದೇಶದಲ್ಲಿ ಈರುಳ್ಳಿ ಬೆಳೆದಿದ್ದು, ಅಕಾಲಿಕ ಮಳೆಯಿಂದ ಈರುಳ್ಳಿ ರೋಗ ಬಾಧೆಯಿಂದ ಮತ್ತು ಕೊಳೆರೋಗ, ಕಿರಣಿ ರೋಗದಿಂದ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳು ಮತ್ತು ಗ್ರಾಮಗಳಿಗೆ ಸರ್ವೇ ಕಾರ್ಯ ಕೈಗೊಂಡು ರೈತರಿಗೆ ಸೂಕ್ತ ಪರಿಹಾರ ಕೊಡಿಸಬೇಕು. ಒಂದು ಎಕರೆಗೆ ₹೩೦ ಸಾವಿರ ಪರಿಹಾರ ನೀಡಬೇಕು ಮತ್ತು ಇನ್ಶೂರೆನ್ಸ್‌ ಬೆಳೆ ವಿಮೆ ರೈತರಿಗೆ ಕಂಪನಿಗಳಿಂದ ಮಧ್ಯಂತರ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದರು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಲೋಕಣ್ಣ ಉಳ್ಳಾಗಡ್ಡಿ, ಯಮನಪ್ಪ ನವಾಬ್, ನೂರಸಾಬ ತಾಂಬೋಳಿ, ಹುಸೇನಸಾಬ ಮುಲ್ಲಾ, ಹಣಮಂತ ರಡ್ಡಿ, ಲಕ್ಷ್ಮಣ ಮಾಳಿ, ಚನ್ನಪ್ಪ ತೇಲಿ, ಬಸಪ್ಪ ಮಾಳಿ, ಬಸವರಾಜ ತೇಲಿ, ಬಾಳಪ್ಪ ಜೋಗನ್ನವರ, ಬಸಯ್ಯ ಮಠಪತಿ, ಲೋಕಾಪುರ ಹಾಗೂ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು, ರೈತರು, ಈರುಳ್ಳಿ ಬೆಳೆಗಾರರ ಸಂಘದ ಸದಸ್ಯರು ಇದ್ದರು.