ಸಾರಾಂಶ
ಯಾವುದೇ ಆಹಾರ ಪದಾರ್ಥಗಳಿಗೆ ಆಹಾರ ತಯಾರಿಸಲು ಹಾಗೂ ಆಹಾರವನ್ನು, ಪಾರ್ಸೆಲ್ ಕಟ್ಟಿಕೊಡಲು ಪ್ಲಾಸ್ಟಿಕ್ ಗಳನ್ನು ಬಳಸುವಂತಿಲ್ಲ
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಪಟ್ಟಣದಲ್ಲಿ ತಾಲೂಕು ಆಹಾರ ಸುರಕ್ಷತಾಧಿಕಾರಿ ಹಾಗೂ ಮುಖ್ಯಾಧಿಕಾರಿ ಪುರಸಭೆ ತಂಡವು ಟೀ ಅಂಗಡಿ, ಬೇಕರಿ, ಹೋಟಲ್ ಗಳಿಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪ್ಲಾಸ್ಟಿಕ್, ಗುಟ್ಕಾ ಪಾನ್ ಪರಗ್, ಪೇಪರ್ ಟೀ ಕಪ್ ಬಳಸುತ್ತಿರುವ ಟೀ ಅಂಗಡಿಗಳು, ಬೇಕರಿಗಳು, ಹೋಟೆಲ್ ಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಯಿತು.ಈ ಕುರಿತು ಎಚ್.ಡಿ. ಕೋಟೆ ಪಟ್ಟಣದ ಹೋಟೆಲ್ ಗಳಿಗೆ ಮತ್ತು ಬೀದಿಬದಿ ವ್ಯಾಪಾರಿಗಳ ಮಳಿಗೆಗಳಿಗೆ ತಾಲೂಕು ಆಹಾರ ಸುರಕ್ಷತಾಧಿಕಾರಿ ಡಾ. ರವಿಕುಮಾರ್ ಹಾಗೂ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಅವರು ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ತಾಲೂಕು ಆಹಾರ ಸುರಕ್ಷತಾಧಿಕಾರಿ ಡಾ. ರವಿಕುಮಾರ್ ಮಾತನಾಡಿ, ರಾಜ್ಯಾದ್ಯಂತಪ್ಲಾಸ್ಟಿಕ್ ಗಳನ್ನು ನಿಷೇಧ ಮಾಡಲಾಗಿದೆ, ಯಾವುದೇ ಆಹಾರ ಪದಾರ್ಥಗಳಿಗೆ ಆಹಾರ ತಯಾರಿಸಲು ಹಾಗೂ ಆಹಾರವನ್ನು, ಪಾರ್ಸೆಲ್ ಕಟ್ಟಿಕೊಡಲು ಪ್ಲಾಸ್ಟಿಕ್ ಗಳನ್ನು ಬಳಸುವಂತಿಲ್ಲ ಎಂದರು.ಹೋಟೆಲ್, ಕ್ಯಾಂಟೀನ್, ಬೀದಿಬದಿ ವ್ಯಾಪಾರಿಗಳಿಗೆ ನೋಟಿಸ್ ನೀಡಿ ದೊರೆತ ಪ್ಲಾಸ್ಟಿಕ್, ಟೀ ಕಪ್, ತಂಬಾಕು ಪದಾರ್ಥಗಳ್ನು ವಶಪಡಿಕೊಂಡು ದಂಡ ವಿಧಿಸಲಾಯಿತು.
ಪುರಸಭೆ ಆರೋಗ್ಯ ನಿರೀಕ್ಷಣಾಧಿಕಾರಿ ಹರೀಶ್, ಅರೋಗ್ಯ ಸಿಬ್ಬಂದಿಗಳಾದ ಅರಳಪ್ಪ, ಉಮೇಶ್, ಪ್ರತಾಪ್ ಮತ್ತು ಪುರಸಭೆಯ ಸಿಬ್ಬಂದಿ ವರ್ಗದವರು, ಸಾರ್ವಜನಿಕರು ಇದ್ದರು.