ಸಾರಾಂಶ
ಕನ್ನಡಪ್ರಭ ವಾರ್ತೆ ಪಿರಿಯಾಪಟ್ಟಣಮಾನವನಿಗೆ ಜ್ಞಾನ ಹಾಗೂ ವಿವೇಕ ನೀಡಲಾಗಿದೆ ಇದನ್ನು ಸನ್ಮಾರ್ಗದಲ್ಲಿ ಬಳಸಿಕೊಂಡಾಗ ಮಾತ್ರ ಮೋಕ್ಷ ಪ್ರಾಪ್ತಿಯಾಗಲಿದೆ ಎಂದು ಕೋಡಿಮಠದ ಶ್ರೀಗಳು ಹೇಳಿದರು.ಪಿರಿಯಾಪಟ್ಟಣ ತಾಲೂಕು ದೊಡ್ಡಬೇಲಾಳು ಗ್ರಾಮದ ಬಳಿ ಮೈಸೂರಿನ ನಮನ ಫೌಂಡೇಶನ್ ವತಿಯಿಂದ ನೂತನವಾಗಿ ನಿರ್ಮಾಣವಾಗಲಿರುವ ಧ್ಯಾನ ಕೇಂದ್ರ ಸ್ಥಳಕ್ಕೆ ಭೇಟಿ ನೀಡಿ ಧಾರ್ಮಿಕ ಪೂಜೆ ನೆರವೇರಿಸಿ ಬಳಿಕ ಅವರು ಮಾತನಾಡಿದರು.ಪ್ರಕೃತಿ ಹಾಗೂ ವೃಕ್ಷಗಳಿಗೆ ತನ್ನದೇ ಆದ ಅಗಾಧ ಶಕ್ತಿ ಇದ್ದು, ಮರಣ ಗೆಲ್ಲುವ ಶಕ್ತಿ ಗಿಡಮೂಲಿಕೆ ಔಷಧಿಗಳಲ್ಲಿದೆ, ಪಂಚತಾರಾ ವೃಕ್ಷಗಳಲ್ಲಿ ಹೆಚ್ಚು ಆಮ್ಲಜನಕ ಉತ್ಪಾದನೆಯಾಗಲಿದ್ದು, ದೈವ ವೃಕ್ಷಗಳಾಗಿವೆ, 84 ಲಕ್ಷ ಜೀವ ರಾಶಿಗಳಲ್ಲಿ ಆತ್ಮ ಕಡೆಯದಾಗಿದೆ, ಮನುಷ್ಯ ಮೌನವಾಗಿದ್ದರೆ ಹೆಚ್ಚು ಜ್ಞಾನ ಸಂಪಾದನೆ ಮಾಡಬಹುದು ಎಂದರು.ನಮನ್ ಫೌಂಡೇಶನ್ ಅಧ್ಯಕ್ಷೆ ಶೈಲಜಾ ಪ್ರಸಾದ್ ಮಾತನಾಡಿ, ದೈವ ಪ್ರೇರಣೆಯಿಂದ ಸಮಾನ ಮನಸ್ಕ ಟ್ರಸ್ಟಿಗಳು ಸೇರಿ ಪ್ರಾಚೀನ ವಿದ್ಯೆಯನ್ನು ನವೀಕರಿಸಿ ಪ್ರಸ್ತುತ ಸಮಾಜಕ್ಕೆ ಧ್ಯಾನ ಮಾರ್ಗದ ಮೂಲಕ ಸಮಾಜದ ಏಳಿಗೆಗಾಗಿ ಒಳ್ಳೆಯ ಕೊಡುಗೆ ನೀಡುವ ಉದ್ದೇಶದಿಂದ ಮೈಸೂರಿನ ಧ್ಯಾನ ಕೇಂದ್ರದಲ್ಲಿ ಅಭ್ಯಾಸ ನೀಡಲಾಗುತ್ತಿದೆ, ಶ್ರೀಗಳ ಮಾರ್ಗದರ್ಶನ ಹಾಗೂ ಸಹಕಾರದೊಂದಿಗೆ ನಾಲ್ಕು ಎಕರೆ ಜಾಗದಲ್ಲಿ ನೂತನ ಧ್ಯಾನ ಕೇಂದ್ರ ನಿರ್ಮಾಣ ಮಾಡುವ ಉದ್ದೇಶವಿದ್ದು ಎಲ್ಲರ ಸಹಕಾರ ಕೋರಿದರು.ನಮನ್ ಫೌಂಡೇಶನ್ ಕಾರ್ಯದರ್ಶಿ ದೀಪ್ತಿ ರಾಜೇಶ್ವರಿ ಮಾತನಾಡಿದರು.ಫೌಂಡೇಶನ್ ಉಪಾಧ್ಯಕ್ಷೆ ಉಪಾಗ್ಯ ನವಳ ನಂದಿಕಾ, ಖಜಾಂಚಿ ಮಂಜುನಾಥ್ ಪಿ. ಹೆಗಡೆ, ಸಂಯೋಜಕರಾದ ಐಶ್ವರ್ಯ ಪಿ. ಹೆಗಡೆ, ಸ್ವಯಂ ಸೇವಕರಾದ ಎಸ್. ಸಹನ, ಎಂ.ಸಿ. ಅನುಪಮ, ಯಶಸ್ವಿನಿ, ಎಸ್. ಮಂಜುಳಾದೇವಿ, ಎ. ವಿನೋದ್ ಕುಮಾರ್ ಜೈನ್, ಮೈಸೂರು ಅರಸು ಮಂಡಳಿಯ ಮಾಜಿ ಅಧ್ಯಕ್ಷ ಎನ್.ಎಸ್. ದಾಸರಾಜ್ ಅರಸ್, ಎಚ್.ಡಿ. ನಾಗರಾಜೇ ಅರಸ್ ಇದ್ದರು.