ತುಳುನಾಡಿನ ಶಾಸನ ಕಾರ್ಯಾಗಾರ, ಪಾರಂಪರಿಕ ತಾಣ ಭೇಟಿ

| Published : May 03 2024, 01:07 AM IST

ತುಳುನಾಡಿನ ಶಾಸನ ಕಾರ್ಯಾಗಾರ, ಪಾರಂಪರಿಕ ತಾಣ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ತುಳು ನಾಡಿನ ವಿಶಿಷ್ಟ ಶಾಸನಗಳ ಕುರಿತು ಉಪನ್ಯಾಸ ಕಾರ್ಯಕ್ರಮ ನಡೆಯಿತು. ತುಳುನಾಡಿನ ವ್ಯಾಪಾರ ಮಾರ್ಗದ ಕುರಿತಾದ ಮಾಹಿತಿ ವಿನಿಮಯ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕಾರ್ಕಳ

ಇಲ್ಲಿನ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಮತ್ತು ಹೆಬ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಯೋಗದಲ್ಲಿ ತುಳುನಾಡಿನ ವಿಶಿಷ್ಟ ಶಾಸನಗಳ ಕುರಿತು ಉಪನ್ಯಾಸ ಹಾಗೂ ನಂತರ ಪಾರಂಪರಿಕ ತಾಣಗಳ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಾಗಾರದಲ್ಲಿ ಶಾಸನಗಳ ಪ್ರಾಮುಖ್ಯತೆ ಹಾಗೂ ಶಾಸನಗಳ ಮೂಲಕ ತುಳುನಾಡಿನ ಇತಿಹಾಸವನ್ನು ಅರ್ಥೈಸುವಿಕೆಯನ್ನು, ತುಳುನಾಡಿನ ವ್ಯಾಪಾರ ಮಾರ್ಗದ ಕುರಿತಾದ ಮಾಹೆಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕರಾದ ಡಾ. ಬಿ ಜಗದೀಶ್‌ ಶೆಟ್ಟಿ ಮಾಹಿತಿ ನೀಡಿದರು.

ಇದೇ ವೇಳೆ ಹೆಬ್ರಿಯ ಸಮೀಪದ ಚಾರದ ಪುರಾತನ ಬಸದಿಗೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಲಾಯಿತು. ವಿದ್ಯಾರ್ಥಿಗಳಿಗೆ ಬಸದಿಯ ಕುರಿತಾದ ಇತಿಹಾಸವನ್ನು ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಮಹೇಶ್‌ ಶೆಟ್ಟಿ ವಿವರಿಸಿದರು. ವಿದ್ಯಾರ್ಥಿಗಳು ಈ ಬಸದಿಯ ಕುರಿತು ಸುದೀರ್ಘವಾಗಿ ಚರ್ಚಿಸಿದರು.

ನಂತರ ಬಸದಿಯ ಸುತ್ತಲಿನ ಸ್ವಚ್ಛ ಕಾರ್ಯದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡರು. ನಂತರ ವಿದ್ಯಾರ್ಥಿಗಳು ವರಂಗ ಜೈನ ಬಸದಿಗೆ ಭೇಟಿ ನೀಡಿ ಅಲ್ಲಿಯ ವಿಶಿಷ್ಟ ಕೆತ್ತನೆಗಳನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಹೆಬ್ರಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಷ್ಣುಮೂರ್ತಿ ಪ್ರಭು, ಹೆಬ್ರಿ ಸ.ಪ್ರ.ದ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಅರುಣಾಚಲ್‌ ಕೆ. ಎಸ್., ಆಂತರಿಕ ಗುಣಮಟ್ಟ ಭರವಸಾ ಕೋಶದ ಸಂಯೋಜಕರಾದ ಆಶಾಲತಾ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಹೇಶ್‌ ಶೆಟ್ಟಿ ಮತ್ತು ಉಪನ್ಯಾಸಕಿಯಾದ ಶಿಲ್ಪಲತಾ ಉಪಸ್ಥಿತರಿದ್ದರು.