ಕನ್ನಡಪ್ರಭ ವಾರ್ತೆ ಬಾಗಲಕೋಟೆಭಾರತ ಕಂಡ ಶ್ರೇಷ್ಠ ಅಭಿಯಂತರರಲ್ಲಿ ಒಬ್ಬರಾದ ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರ ಎನ್.ಎನ್. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಭಾರತ ಕಂಡ ಶ್ರೇಷ್ಠ ಅಭಿಯಂತರರಲ್ಲಿ ಒಬ್ಬರಾದ ಸರ್ ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಸಮಾಜಕ್ಕೆ ಅಪಾರವಾಗಿದೆ ಎಂದು ಕಾರ್ಯನಿರ್ವಾಹಕ ಅಭಿಯಂತರ ಎನ್.ಎನ್. ಪಾಟೀಲ ಹೇಳಿದರು.ನವನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಿದ್ದ ಸರ್ ಎಂ.ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಮಾತನಾಡಿ, ಸರ್ ಎಂ.ವಿಶ್ವೇಶ್ವರಯ್ಯ ಅವರು ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ನಾಡು-ನುಡಿಗೆ ವಿಶೇಷ ಸೇವೆ ಸಲ್ಲಿಸಿದ್ದಾರೆ. ಪರಿಷತ್ತಿನ ಸಂಸ್ಥಾಪಕರ ಆಶಯದಂತೆ ಕನ್ನಡಪರ ಚಟುವಟಿಕೆಗಳನ್ನು ನಡೆಸುವ ಮೂಲಕ ಕನ್ನಡಿಗರನ್ನು ಒಗ್ಗೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಈ ವೇಳೆ ಬೆಂಗಳೂರು ಕರ್ನಾಟಕ ನೀರಾವರಿ ನಿಗಮದ ನಿವೃತ್ತ ಪ್ರಧಾನ ಅಭಿಯಂತರ ಅಶೋಕ ಎಲ್. ವಾಸನದ, ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಮುಖ್ಯ ಅಭಿಯಂತರ ಬಿ.ವೈ.ಬಂಡಿವಡ್ಡರ, ಬಾಗಲಕೋಟೆಯ ಪ್ರಭಾರಿ ಕಾರ್ಯನಿರ್ವಾಹಕ ಅಭಿಯಂತರ ಬಸವೇಶ್ವರಕುಮಾರ ಶೆಟ್ಟರ, ಸಹಾಯಕ ಅಭಿಯಂತರರಾದ ಮಹಾಂತಗೌಡ ಎಸ್.ಪಾಟೀಲ, ಆಕಾಶಕುಮಾರ ಜಾಧವ ಹಾಗೂ ಎಚ್.ಟಿ.ಕುಲಕರ್ಣಿ ಅವರಿಗೆ ಸರ್ ಎಂ.ವಿಶ್ವೇಶ್ವರಯ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪಿ.ಬಿ. ಬಜಂತ್ರಿ ಅವರು ಉಪನ್ಯಾಸ ನೀಡಿದರು. ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದ ಪ್ರಿಯಾ ಕಟ್ಟಿ ಅವರನ್ನು ಸನ್ಮಾನಿಸಲಾಯಿತು.ಜಿಲ್ಲಾ ಇಂಜಿನಿಯರ್ ಸೇವಾ ಸಂಘದ ಅಧ್ಯಕ್ಷ ಬಸವರಾಜ ಮೆಳವಂಕಿ, ಸರ್ಕಾರಿ ವಕೀಲ ಬಸವರಾಜ ಗೋಡಚಿ, ಡಾ.ಪಿ.ಎಂ.ಹುಗ್ಗಿ, ಡಾ.ಮೈನೋದ್ದೀನ್ ರೇವಡಿಗಾರ, ಸಂಗಣ್ಣ ಬೀಳಗಿ, ಆರ್.ಜಿ. ಗೋರಯ್ಯನವರ ಸೇರಿದಂತೆ ಅಭಿಯಂತರರು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಇದ್ದರು.
ಆರ್.ಸಿ.ಚಿತ್ತವಾಡಗಿ ಪ್ರಾರ್ಥಿಸಿದರು. ಶಂಕರ ಹೂಲಿ ಸ್ವಾಗತಿಸಿದರು. ಸಿ.ಎಸ್. ನಾಗನೂರ ನಿರೂಪಿಸಿದರು. ವಿಜಯಶ್ರೀ ಮುರನಾಳ ವಂದಿಸಿದರು.