ನಾಡಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ: ವೀರೇಶ ಮೋಟಗಿ

| Published : Sep 16 2025, 12:03 AM IST

ನಾಡಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರ: ವೀರೇಶ ಮೋಟಗಿ
Share this Article
  • FB
  • TW
  • Linkdin
  • Email

ಸಾರಾಂಶ

ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನಾವೀನ್ಯತೆ ಬೆಳೆಯುತ್ತಿದೆ. ಎಂಜಿನಿಯರುಗಳಿಗೆ ಎಐ ತಾಂತ್ರಿಕತೆ ಬಳಕೆಯೂ ಇಂದು ಅಗತ್ಯ. ಕಾಲಕ್ಕೆ ತಕ್ಕಂತೆ ಬದಲಾಗಬೇಕು.

ರಾಣಿಬೆನ್ನೂರು: ಕನ್ನಡ ನಾಡಿಗೆ ವಿಶ್ವೇಶ್ವರಯ್ಯನವರ ಕೊಡುಗೆ ಅಪಾರವಾಗಿದೆ. ಎಂಜಿನಿಯರ್‌ಗಳು ಗುಣಮಟ್ಟದ ಕಾಮಗಾರಿ ಕೈಗೊಳ್ಳಿ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವೀರೇಶ ಮೋಟಗಿ ತಿಳಿಸಿದರು.ನಗರದ ಮೆಡ್ಲೇರಿ ರಸ್ತೆ ಆದಿಶಕ್ತಿ ಸಭಾಭವನದಲ್ಲಿ ಸೋಮವಾರ ಸ್ಥಳೀಯ ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ವತಿಯಿಂದ ಸರ್ ಎಂ. ವಿಶ್ವೇಶ್ವರಯ್ಯ ಜನ್ಮದಿನದ ಪ್ರಯಕ್ತ ಎಂಜಿನಿಯರ್ಸ್‌ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ಮಾತನಾಡಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ನಾವೀನ್ಯತೆ ಬೆಳೆಯುತ್ತಿದೆ. ಎಂಜಿನಿಯರುಗಳಿಗೆ ಎಐ ತಾಂತ್ರಿಕತೆ ಬಳಕೆಯೂ ಇಂದು ಅಗತ್ಯ. ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಮನಮೋಹಕ ಮತ್ತು ಅತ್ಯಾಕರ್ಷಕ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಬೇಕು ಎಂದರು.ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ಮಾತನಾಡಿ, ವಿಶ್ವೇಶ್ವರಯ್ಯ ದೂರದೃಷ್ಟಿ ಹೊಂದಿದ ಅದಮ್ಯ ಚೇತನರಾಗಿದ್ದು, ಎಂಜಿನಿಯರ್‌ಗಳಿಗೆ ಆದರ್ಶಪ್ರಾಯರಾಗಿದ್ದಾರೆ. ಮೈಸೂರು ದಿವಾನರಾಗಿ ಕನ್ನಡ ನಾಡಿನ ಅಭ್ಯುದಯಕ್ಕೆ ಕಾರಣರಾದರು. ಅವರ ಸಾಧನೆ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ, ಉಪಾಧ್ಯಕ್ಷ ನಾಗರಾಜ ಪವಾರ, ನಗರಸಭೆ ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ ಮಧು ಕೋಳಿವಾಡ, ದಾವಣಗೆರೆ ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನ ಡಾ. ರಾಕೇಶ ತಿಲಕ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್‌ ಅಧ್ಯಕ್ಷ ಪ್ರಭುದೇವ ಮುಂಡಾಸದ ಅಧ್ಯಕ್ಷತೆ ವಹಿಸಿದ್ದರು. ವಿಶ್ವೇಶ್ವರಯ್ಯ ಜೀವನ ಮತ್ತು ಸಾಧನೆ ಕುರಿತು ಎಂಜಿನಿಯರ್ ಶಶಿ ಕರೂರ ಉಪನ್ಯಾಸ ನೀಡಿದರು. ರಾಕೇಶ ರಡ್ಡೇರ, ಪ್ರಕಾಶ ಗುಡಮಿ, ಬಸವರಾಜ ಎಸ್.ಎಂ., ವಿನಯ ಹರಿಹರ, ಮಾರುತಿ ಪಾಟೀಲ, ನಾಗರಾಜ ಪಾಟೀಲ, ಅಮೃತ ಸಣ್ಣಿಂಗಮ್ಮನವರ, ಗೋಪಿ, ಇರ್ಷಾದ, ಅಮರ ಸಿ., ಅಫರೋಜ್, ಕಾರ್ತಿಕ್, ಹಬೀಬ, ಕಿಷನ್, ಭೀಮೇಶ ಮತ್ತಿತರರಿದ್ದರು.