ಬಸವಣ್ಣ ಸಾಮಾಜಿಕ ಕ್ರಾಂತಿಗೆ ಕಾರಣರಾದರು

| Published : May 01 2025, 12:46 AM IST

ಸಾರಾಂಶ

ವಿಚಾರ ವಾದಿಗಳಾಗಿದ್ದ ಬಸವಣ್ಣನವರು ಶತಮಾನದಲ್ಲೇ ಜನಸಾಮಾನ್ಯರ ನೋವುಗಳನ್ನು ಕಂಡು ತಮ್ಮ ಜೀವನವನ್ನು ಬಡ ಜನರ ಸೇವೆಗೆ ಹಾಗೂ ದೇವರ ಆರಾಧನೆಗೆ ಮುಡಿಪಾಗಿಟ್ಟಿದ್ದರು.

ಕನ್ನಡಪ್ರಭ ವಾರ್ತೆ ಟಿ. ನರಸೀಪುರಜಾತಿ ಮತ ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ಅಧ್ಯಕ್ಷ ಸಿ.ಎಂ. ಪ್ರಕಾಶ್ ಹೇಳಿದರು.ಪಟ್ಟಣದ ವಿವೇಕಾನಂದ ನಗರದಲ್ಲಿರುವ ವೀರಶೈವ ವಿದ್ಯಾರ್ಥಿನಿಲಯದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾಸಭಾದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮದಲ್ಲಿ ಬಸವೇಶ್ವರರ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿ ಅವರು ಮಾತನಾಡಿದರು.ವಿಚಾರ ವಾದಿಗಳಾಗಿದ್ದ ಬಸವಣ್ಣನವರು ಶತಮಾನದಲ್ಲೇ ಜನಸಾಮಾನ್ಯರ ನೋವುಗಳನ್ನು ಕಂಡು ತಮ್ಮ ಜೀವನವನ್ನು ಬಡ ಜನರ ಸೇವೆಗೆ ಹಾಗೂ ದೇವರ ಆರಾಧನೆಗೆ ಮುಡಿಪಾಗಿಟ್ಟಿದ್ದರು. ಜಾತಿ ಮತ ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣರಾದರು. ಇಂತಹ ಮಹಾನ್ ಪೂಜ್ಯ ಬಸವಣ್ಣನವರ ಆದರ್ಶ ತತ್ವಗಳನ್ನು ಈಗಿನ ಜನ ಪಾಲಿಸಬೇಕು ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷ ಎಸ್.ಕೆ. ಕಿರಣ್, ಮಹಿಳಾ ಉಪಾಧ್ಯಕ್ಷೆ ಪಿ.ಎಸ್. ಅಂಬಿಕಾ, ಮಹಾ ಪೋಷಕ ಬಿ.ಎಂ. ಶಿವಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಕೆ.ವಿ. ಶಿವಶಂಕರ್, ಮಹಿಳಾ ಕಾರ್ಯದರ್ಶಿ ಅಶ್ವಿನಿ, ಕಾರ್ಯದರ್ಶಿ ಪರಮೇಶ್ ಪಟೇಲ್, ಕೋಶಾಧ್ಯಕ್ಷ ಜಿ. ನಂಜುಂಡಸ್ವಾಮಿ, ಕಾರ್ಯದರ್ಶಿ ಚನ್ನಮಲ್ಲಿಕಾರ್ಜುನ ಸ್ವಾಮಿ ಇದ್ದರು.