ವಿವೇಕಾನಂದರ ವಿಚಾರಗಳು ಯುವ ಜನಾಂಗಕ್ಕೆ ಅವಶ್ಯಕ

| Published : Feb 11 2025, 12:49 AM IST

ಸಾರಾಂಶ

ಸ್ವಾಮಿ ವಿವೇಕಾನಂದರು ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಸಂತ ಎಂದು ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸ್ವಾಮಿ ವಿವೇಕಾನಂದರು ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಸಂತ ಎಂದು ಬಿಜೆಪಿ ಮುಖಂಡ ರುದ್ರಣ್ಣ ಚಂದರಗಿ ಹೇಳಿದರು.

ಸ್ವಾಮಿ ವಿವೇಕಾನಂದ ಸೇವಾ ಟ್ರಸ್ಟ್‌ ಮತ್ತು ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಎಲಿಟ್‌ ವತಿಯಿಂದ ಭಾನುವಾರ ನಗರದ ಮಹಿಳಾ ವಿದ್ಯಾಲಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಸಂವಿಧಾನದ 75ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವೇಕಾನಂದರ ವಿಚಾರಗಳು ಪ್ರಸ್ತುತ ಯುವಜನಾಂಗಕ್ಕೆ ಅವಶ್ಯಕವಾಗಿವೆ. ಅಮೆರಿಕದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಇಡೀ ವಿಶ್ವಕ್ಕೆ

ಹಿಂದು ಧರ್ಮದ ವಿಚಾರಧಾರೆಗಳನ್ನು ತಿಳಿಸುವ ಮೂಲಕ ಎಲ್ಲ ಧರ್ಮಗಳು ಹಿಂದು ಧರ್ಮದ ಅಡಿಯಲ್ಲಿ ನಿಲ್ಲುತ್ತವೆ ಎಂದು ತಿಳಿಸಿಕೊಟ್ಟಿದ್ದಾರೆ ಎಂದರು ತಿಳಿಸಿದರು.ಯಾವುದೇ ಸಂದರ್ಭದಲ್ಲೂ ನಾವು ಸಂವಿಧಾನವನ್ನು ಗೌರವಿಸಬೇಕು. ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಈ 75 ವರ್ಷಗಳಲ್ಲಿ ನಾವು ಅನೇಕ ದೊಡ್ಡ ಸಾಧನೆಗಳನ್ನು ಮಾಡಿದ್ದೇವೆ. ಇದೆಲ್ಲ ಸಾಧ್ಯವಾಗಿದ್ದು ಸಂವಿಧಾನದಿಂದಲೇ. ಸಂವಿಧಾನ ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕುಗಳನ್ನು ನೀಡಿದೆ. ಭಾರತದ ಸಂವಿಧಾನವನ್ನು ಪ್ರಪಂಚದಾದ್ಯಂತ ಪ್ರಶಂಸಿಸಲಾಗಿದೆ. ದೇಶಕ್ಕೆ ಸಂವಿಧಾನವೇ ದೊಡ್ಡ ಗ್ರಂಥವಾಗಿದೆ. ದೇಶಕ್ಕೆ ಉತ್ತಮ ಶಿಕ್ಷಣ ನೀತಿ, ಉದ್ಯೋಗ ನೀತಿನಯನ್ನು ಕೊಡುಗೆಯಾಗಿ ನೀಡಿದ ಕೀರ್ತಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರಿಗೆ ಸಲ್ಲುತ್ತದೆ ಎಂದರು.ರೋಟರಿ ಕ್ಲಬ್‌ ಆಫ್‌ ಬೆಳಗಾವಿ ಎಲಿಟ್‌ ಅಧ್ಯಕ್ಷ ಸಚಿನ ಹಂಗಿರಗೇಕರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪಮೇಯರ್‌ ಧನರಾಜ ಗವಳಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶೃತಿ ಮೊದಲಾದವರು ಉಪಸ್ಥಿತರಿದ್ದರು.

ವಿವೇಕಾನಂದರ ವಿಚಾರಗಳು ಪ್ರಸ್ತುತ ಯುವಜನಾಂಗಕ್ಕೆ ಅವಶ್ಯಕವಾಗಿವೆ. ಅಮೆರಿಕದ ಚಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಇಡೀ ವಿಶ್ವಕ್ಕೆ

ಹಿಂದು ಧರ್ಮದ ವಿಚಾರಧಾರೆಗಳನ್ನು ತಿಳಿಸುವ ಮೂಲಕ ಎಲ್ಲ ಧರ್ಮಗಳು ಹಿಂದು ಧರ್ಮದ ಅಡಿಯಲ್ಲಿ ನಿಲ್ಲುತ್ತವೆ ಎಂದು ತಿಳಿಸಿಕೊಟ್ಟಿದ್ದಾರೆ.

-ರುದ್ರಣ್ಣ ಚಂದರಗಿ, ಬಿಜೆಪಿ ಮುಖಂಡರು.