ವಿವೇಕಾನಂದರ ಸಂದೇಶ ಯುವ ಜನಾಂಗಕ್ಕೆ ಆದರ್ಶ: ಶಿವಸ್ವಾಮಿ

| Published : Mar 01 2025, 01:01 AM IST

ಸಾರಾಂಶ

ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಬಿತ್ತಿಪತ್ರಗಳನ್ನು ಟಿಎಚ್‌ಒ ಡಾ.ಅಲಿಂ ಪಾಶ ಬಿಡುಗಡೆಗೊಳಿಸಿದರು.

ಗುಂಡ್ಲುಪೇಟೆ: ಸ್ವಾಮಿ ವಿವೇಕಾನಂದರ ಸಂದೇಶ ಪ್ರಸ್ತುತ ಹಾಗೂ ಮುಂದೆಯೂ ಯುವ ಜನಾಂಗ/ವಿದ್ಯಾರ್ಥಿಗಳಿಗೆ ಆದರ್ಶ ಎಂದು ಗುಂಡ್ಲುಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶಿವಸ್ವಾಮಿ ಎಂ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಜ್ಯ ಏಡ್ಸ್ ಪ್ರಿವೆನ್ಸನ್ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ತಾಲೂಕು ವೈದ್ಯಾಧಿಕಾರಿಗಳ ಕಚೇರಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಮಾತನಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಅಲಿಂ ಪಾಷಾ ಮಾತನಾಡಿ, ಶಾರೀರಿಕ, ಮಾನಸಿಕ ಸ್ವಾಸ್ಥ್ಯ ಇರಬೇಕಾದರೆ ಶೈಕ್ಷಣಿಕವಾಗಿ ಪ್ರತಿಯೊಂದು ಕಾಯಿಲೆಗಳ ರೋಗ ಲಕ್ಷಣಗಳು,ವೈಯಕ್ತಿಕ ಸ್ವಚ್ಛತೆ, ಸಾಂಕ್ರಾಮಿಕ ರೋಗಗಳ ಬಗ್ಗೆ ತಿಳಿಯಬೇಕು ಎಂದರು. ಡಾ.ಜಾಫರ್ ಸಲ್ಮಾನ್ ಖಾನ್ ಮಾತನಾಡಿ. ಇಂದಿನ ಯುವ ಜನಾಂಗ ಅನಾವಶ್ಯಕ ಒತ್ತಡ, ಆಹಾರ ಪದ್ಧತಿಗಳಿಂದ ಬಳಲುತ್ತಿದ್ದು, ಹಲವಾರು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು. ಉಪ ಪ್ರಾಂಶುಪಾಲ ಡಾ.ರಮೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಯುವಜನರು/ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗಿ ಕೆಲವೊಂದು ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಎಂದರು.

ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಮಹದೇವಪ್ರಸಾದ್ ಐಸಿಟಿಸಿ ಕೇಂದ್ರದ ಆಪ್ತ ಸಮಾಲೋಚಕ ಕೃಷ್ಣಕುಮಾರ್,ಎಸ್‌ಟಿಎಲ್‌ಎಸ್‌ ದೀಪಶ್ರೀ,ಎಸ್‌ ಬಿಎಸ್ ಕೆ ಸಮಾಲೋಚಕಿ ಜ್ಯೀತಿ,ಆರ್‌ಆರ್‌ಸಿ ಆಸ್ಗರ್‌ ಅಹಮದ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಯೋಗ ಶಾಲಾ ತಂತ್ರಜ್ಞ ಶೋಯಿಬ್ ಉಲ್ಲಾಖಾನ್,ಆರೋಗ್ಯ ಇಲಾಖೆ ಸಿಬ್ಬಂದಿ, ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು.