ವಿವೇಕಾನಂದರ ವಿಚಾರ ಯುವಕರಿಗೆ ಪ್ರೇರಣೆ: ಹಾರಿಕಾ

| Published : Feb 05 2024, 01:48 AM IST

ಸಾರಾಂಶ

ಸಿರವಾರ ತಾಲೂಕಿನ ನವಲಕಲ್ ಗ್ರಾಮದಲ್ಲಿ ವಂದೇ ಭಾರತ ಯುವ ವೇದಿಕೆಯಿಂದ ಹಮ್ಮಿಕೊಂಡಿದ್ದ ಯುವಕರ ವಿಚಾರಧಾರೆ ಕಾರ್ಯಕ್ರಮದಲ್ಲಿ ಯುವವಾಗ್ಮಿ ಹಾರಿಕಾ ಮಂಜುನಾಥ ಮಾತನಾಡಿದರು.

ಕನ್ನಡಪ್ರಭವಾರ್ತೆ ಸಿರವಾರ

ಸ್ವಾಮಿ ವಿವೇಕಾನಂದರ ರಾಷ್ಟ್ರಕಟ್ಟುವ ವಿಚಾರಧಾರೆಗಳನ್ನು ಯುವಕರು ಪ್ರೇರಣೆಯಾಗಿಟ್ಟುಕೊಂಡು ಸದೃಢ, ಸಮೃದ್ಧ ದೇಶ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು ಎಂದು ಯುವವಾಗ್ಮಿ ಹಾರಿಕಾ ಮಂಜುನಾಥ ಸಲಹೆ ನೀಡಿದರು.

ತಾಲೂಕಿನ ನವಲಕಲ್ ಗ್ರಾಮದಲ್ಲಿ ವಂದೇ ಭಾರತ ಯುವ ವೇದಿಕೆ ಶನಿವಾರ ಹಮ್ಮಿಕೊಂಡಿದ್ದ ಯುವಕರ ವಿಚಾರಧಾರೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಸ್ವಾಮಿ ವಿವೇಕನಂದರು ತಮ್ಮ ವಿಚಾರಧಾರೆಗಳಿಂದ ಪ್ರಪಂಚವೇ ಭಾರತದ ಕಡೆ ನೋಡುವಂತೆ ಮಾಡಿದ್ದರು, ಅವರ ಆಶಯದಂತೆ ಅನೇಕ ಮಹನೀಯರು ಉತ್ತಮ ಕಾರ್ಯ ಮಾಡುವ ಮೂಲಕ ಭಾರತ ವಿಶ್ವಗುರುವಾಗಲು ಶ್ರಮಿಸುತ್ತಿದ್ದಾರೆ ಎಂದರು.

ವಿವೇಕಾನಂದರ ಮಾತಿನಂತೆ ದೇಶಕ್ಕಾಗಿ ಬಾಳದ ಬದುಕು ನರಕ. ಯುವಕರು ಒಗ್ಗಟ್ಟಾಗಿ ಸದೃಢ ದೇಶ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಬೇಕು. ಹಿಂದೂ ಸಮಾಜದ ಇತಿಹಾಸ ಉಳಿಸುವ ನಿಟ್ಟಿನಿಲ್ಲಿ 500 ವರ್ಷಗಳ ಹೋರಾಟದ ಫಲವಾಗಿ ಇಂದು ರಾಮ ಮಂದಿರ ನಿರ್ಮಾಣವಾಗಿದೆ. ನಮ್ಮ ಕಾಲದಲ್ಲಿ ದೇವಸ್ಥಾನ ನಿರ್ಮಾಣವಾಗಿರುವುದು ನಮ್ಮೆಲ್ಲರ ಪುಣ್ಯ ಎಂದರು.

ನವಲಕಲ್ ಬೃಹನ್ಮಠದ ಅಭಿನವ ಶ್ರೀ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನವಲಕಲ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುರುಗಮ್ಮ ವೇದಿಕೆ ಮೇಲಿದ್ದರು. ಸಿರವಾರ ಸೇರಿ ಗ್ರಾಮ ಸುತ್ತಲಿನ ಹಳ್ಳಿಗಳ ಯುವಕರು, ಮಹಿಳೆಯರು ಭಾಗವಹಿಸಿದ್ದರು