ಭಾರತ ಎತ್ತರಕ್ಕೆ ಬೆಳೆಯಬೇಕೆಂಬುದು ವಿವೇಕಾನಂದರ ಆಶಯ: ತಿಪ್ಪೇರುದ್ರಪ್ಪ

| Published : Jan 12 2024, 01:45 AM IST

ಭಾರತ ಎತ್ತರಕ್ಕೆ ಬೆಳೆಯಬೇಕೆಂಬುದು ವಿವೇಕಾನಂದರ ಆಶಯ: ತಿಪ್ಪೇರುದ್ರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ್ ಸೇವಾದಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಭಾರತ್‌ ಸೇವಾದಳದ ಸಂಯುಕ್ತಾ ಶ್ರಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿದ ಸಾಹಿತಿ ಬಿ.ತಿಪ್ಪೇರುದ್ರಪ್ಪ ಭಾರತ ದೇಶ ಧಾರ್ಮಿಕವಾಗಿ ನಾನಾ ರೂಪದಲ್ಲಿ ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಬೇಕೆಂದು ಸ್ವಾಮಿ ವಿವೇಕಾನಂದರು ಅಭಿಲಾಷೆ ಮತ್ತು ಆಸೆ ಹೊಂದಿದ್ದರು ಎಂದು ಹೇಳಿದರು.

- ಚಿಕ್ಕಮಗಳೂರಿನ ಭಾರತ್‌ ಸೇವಾದಳ ಕಚೇರಿಯಲ್ಲಿ ರಾಷ್ಟ್ರೀಯ ಯುವ ಸಪ್ತಾಹ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಭಾರತ ದೇಶ ಧಾರ್ಮಿಕವಾಗಿ ನಾನಾ ರೂಪದಲ್ಲಿ ಜಗತ್ತಿನಲ್ಲಿ ಅತ್ಯಂತ ಎತ್ತರಕ್ಕೆ ಬೆಳೆಯಬೇಕೆಂದು ಸ್ವಾಮಿ ವಿವೇಕಾನಂದರು ಅಭಿಲಾಷೆ ಮತ್ತು ಆಸೆ ಹೊಂದಿದ್ದರು ಎಂದು ಸಾಹಿತಿ ಬಿ.ತಿಪ್ಪೇರುದ್ರಪ್ಪ ಹೇಳಿದರು.

ಭಾರತ್ ಸೇವಾದಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಭಾರತ್‌ ಸೇವಾದಳದ ಸಂಯುಕ್ತಾ ಶ್ರಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಆಶಯದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ರೀತಿಯ ಹಲವು ಕಾರ್ಯಕ್ರಮಗಳನ್ನು ಯುವ ಜನರಿಗಾಗಿ ಹಮ್ಮಿಕೊಂಡಿವೆ. ಇದಕ್ಕೆ ಪೂರಕವಾಗಿ ಜನವರಿ 12 ರಂದು ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರದ ಯುವನಿಧಿ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದರು.

ಯುವಕರು ಎಚ್ಚರವಾಗಬೇಕು, ದೇಶಪ್ರೇಮ ಬೆಳಸಿಕೊಂಡು ದೇಶಕಟ್ಟಲು ಈ ರೀತಿಯ ಘೋಷಣಾ ಸ್ಪರ್ಧೆ ಆಯೋಜಿಸ ಲಾಗಿದೆ. ದೇಶದ ಸಮಗ್ರತೆ, ಏಕತೆ, ಐಕ್ಯತೆ ಕುರಿತು ಸಾರ್ವಭೌಮತ್ವದ ಬಗ್ಗೆ ದೇಶಾಭಿವೃದ್ಧಿ ಹೊಂದಬೇಕಾದರೆ ಯುವಕರು ಕಂಡ ಕನಸು ನನಸಾಗಿಸಲು ಉತ್ತಮ ಪರಿಕಲ್ಪನೆ, ಒಗ್ಗಟ್ಟು, ಸಮಗ್ರತೆ ಕುರಿತು ನಿಮ್ಮದೆಯಾದ ರೀತಿಯಲ್ಲಿ ಕಡಿಮೆ ಅವಧಿಯ ಭಾಷಣದಲ್ಲಿ ಬಹಳ ಪರಿಣಾಮಕಾರಿಯಾಗಿ ಅಭಿಪ್ರಾಯ ವ್ಯಕ್ತಪಡಿಸಬೇಕೆಂದು ಹೇಳಿದರು.

ಜನವರಿ 19ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಗುವುದು. ನಮ್ಮ ಜಿಲ್ಲೆಯಿಂದ ಹೋಗಿ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಜಿಲ್ಲೆಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ನೆಹರು ಯುವ ಕೇಂದ್ರದ ಅಧಿಕಾರಿ ಅಭಿಷೇಕ್‌ ಚವಾರೆ ಮಾತನಾಡಿ, ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ, ರಾಜ್ಯ ಮಟ್ಟದಲ್ಲಿ ವಿಜೇತಾದವರಿಗೆ ಮೊದಲನೇ ಬಹುಮಾನ ಒಂದು ಲಕ್ಷ, ದ್ವಿತೀಯ ಬಹುಮಾನ 50 ಸಾವಿರ, ತೃತೀಯ ಬಹುಮಾನ 25 ಸಾವಿರ ರು. ನೀಡಲಾಗುವುದು ಎಂದರು.

ಯುವ ಸಮೂಹದ ಕೌಶಲ್ಯ ಅಭಿವೃದ್ಧಿಗೆ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿವೆ. ಅವುಗಳ ಪ್ರಯೋಜನ ಪಡೆಯುವ ಮೂಲಕ ಆರ್ಥಿಕ, ಶೈಕ್ಷಣಿಕವಾಗಿ ಮುಂದೆ ಬರಬೇಕು, ಇದರಿಂದ ವ್ಯಕ್ತಿತ್ವ ವಿಕಸನವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸೇವಾದಳ ಸಂಘಟನ ಅಧಿಕಾರಿ ಚಂದ್ರಕಾಂತ್, ಕರ್ನಾಟಕ ರಾಜ್ಯದ ಯುವ ಸಂಘಗಳ ಒಕ್ಕೂಟದ ಚಿಕ್ಕಮಗಳೂರು ಘಟಕದ ಅಧ್ಯಕ್ಷರಾದ ಇಮ್ರಾನ್‌ ಅಹಮದ್ ಬೇಗ್, ಎನ್.ರಾಮಪ್ಪ, ಕುಮಾರಸ್ವಾಮಿ ಉಪಸ್ಥಿತರಿದ್ದರು.11 ಕೆಸಿಕೆಎಂ 5

ಚಿಕ್ಕಮಗಳೂರಿನ ಭಾರತ್‌ ಸೇವಾದಳ ಕಚೇರಿಯಲ್ಲಿ ಗುರುವಾರ ನಡೆದ ರಾಷ್ಟ್ರೀಯ ಯುವ ಸಪ್ತಾಹವನ್ನು ಬಿ. ತಿಪ್ಪೇರುದ್ರಪ್ಪ ಉದ್ಘಾಟಿಸಿದರು. ಅಭಿಷೇಕ್‌ ಚವಾರೆ, ಚಂದ್ರಕಾಂತ್‌ ಇದ್ದರು.