ಸಾರಾಂಶ
ಗದಗ ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಕಾಲೇಜು ಉದ್ಯೋಗ ಘಟಕ ಹಾಗೂ ಧಾರವಾಡದ ಇನ್ನೋವೇಟಿವ್ ಸಲ್ಯೂಷನ್ಸ್ ಸಹಯೋಗದಲ್ಲಿ ಪೋರ್ಟ್ ಫೋಲಿಯೋ ಮ್ಯಾನೇಜರ್ ಹುದ್ದೆಯ ನೇರ ಸಂದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಗದಗ
ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ಅರಿವು ಅವಶ್ಯಕವಿದ್ದು, ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಕೌಶಲ್ಯಾಧಾರಿತ ತರಬೇತಿ ಪಡೆದುಕೊಳ್ಳಬೇಕು. ಇದರಿಂದ ಸರ್ಕಾರಿ ಮತ್ತು ಸರ್ಕಾರೇತರ ವಲಯದಲ್ಲಿ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು ಎಂದು ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಶಿವಪ್ಪ ಕುರಿ ಹೇಳಿದರು.ತಾಲೂಕಿನ ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐಕ್ಯೂಎಸಿ, ಕಾಲೇಜು ಉದ್ಯೋಗ ಘಟಕ ಹಾಗೂ ಧಾರವಾಡದ ಇನ್ನೋವೇಟಿವ್ ಸಲ್ಯೂಷನ್ಸ್ ಸಹಯೋಗದಲ್ಲಿ ನಡೆದ ಪೋರ್ಟ್ ಫೋಲಿಯೋ ಮ್ಯಾನೇಜರ್ ಹುದ್ದೆಯ ನೇರ ಸಂದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಧಾರವಾಡ ಇನ್ನೋವೇಟಿವ್ ಸಲ್ಯೂಷನ್ಸ್ ಆಯ್ಕೆ ಸಮಿತಿ ಸದಸ್ಯ ರಾಕೇಶ್ ಉಪಕಾರಿ ವಿದ್ಯಾರ್ಥಿಗಳಿಂದ ಸಂದರ್ಶನ ಪಡೆದರು. ಇದರಲ್ಲಿ ಒಟ್ಟು 45 ವಿದ್ಯಾರ್ಥಿಗಳು ಪ್ರಥಮ ಹಂತದಲ್ಲಿ ಆಯ್ಕೆಯಾಗಿದ್ದಾರೆ.ಉದ್ಯೋಗ ಘಟಕದ ಸಂಚಾಲಕ ಹನುಮೇಶ, ಡಾ. ಸುಧಾ ಕೌಜಗೇರಿ, ಲಕ್ಷ್ಮಣ ಮುಳಗುಂದ, ಡಾ. ಉಲ್ಲಾಸ್ ಶೆಟ್ಟಿ, ಮಹಾನಂದ ಹಿರೇಮಠ, ಡಾ. ಅಪ್ಪಣ್ಣ ಎನ್. ಹಂಜೆ, ಡಾ. ಮಂಜುನಾಥ ತ್ಯಾಲಗಡಿ, ಪ್ರೊ. ಪ್ರಶಾಂತ ಹುಲಕುಂದ, ಡಾ. ಜಿತೇಂದ್ರ ಆರ್. ಜಹಾಗೀರದಾರ ಹಾಗೂ ಬೋಧಕ, ಬೋಧಿಕೇತರ ಸಿಬ್ಬಂದಿ ಇದ್ದರು. ಹೊನ್ನವ್ವ ನಾರಾಯಣಪುರ ಸ್ವಾಗತಿಸಿದರು. ಸಂಜನಾ ಬಳ್ಳೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ರಜಿಯಾ ನದಾಫ್ ವಂದಿಸಿದರು.