ಒಕ್ಕಲಿಗರ ಲೆದರ್ ಬಾಲ್ ಕ್ರಿಕೆಟ್‌: ಆಟಗಾರರ ಹರಾಜು

| Published : Mar 11 2025, 12:51 AM IST

ಸಾರಾಂಶ

ಕೊಡಗು ಗೌಡ ಯುವ ವೇದಿಕೆ ಆಯೋಜಿಸುತ್ತಿರುವ ಜಿಪಿಎಲ್‌ ಸೀಸನ್-3 ಒಕ್ಕಲಿಗರ ಲೆದರ್ ಬಾಲ್ ಕ್ರೀಡಾಕೂಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ಗೌಡ ಸಮಾಜದ ಸಭಾಭವನದಲ್ಲಿ ನಡೆಯಿತು.‌

ಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಗೌಡ ಯುವ ವೇದಿಕೆ ಆಯೋಜಿಸುತ್ತಿರುವ ಜಿಪಿಎಲ್‌ ಸೀಸನ್-3 ಒಕ್ಕಲಿಗರ ಲೆದರ್ ಬಾಲ್ ಕ್ರೀಡಾಕೂಟಕ್ಕೆ ಆಟಗಾರರ ಹರಾಜು ಪ್ರಕ್ರಿಯೆ ಗೌಡ ಸಮಾಜದ ಸಭಾಭವನದಲ್ಲಿ ನಡೆಯಿತು.‌

ಕೊಡಗು‌ ಗೌಡ ಸಮಾಜ ಮಡಿಕೇರಿಯ ಕಾರ್ಯದರ್ಶಿ ಕೋಳುಮುಡಿಯನ ಅನಂತಕುಮಾರ್ ಉದ್ಘಾಟಿಸಿ ಶುಭಹಾರೈಸಿದರು. ಅತಿಥಿಗಳಾಗಿ ಕೊಡಗು ಜಿಲ್ಲಾ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷ ಗಿರೀಶ್ ಮಲ್ಲಪ್ಪ, ಕುಶಾಲನಗರ ಗೌಡ ಯುವಕ ಸಂಘ ಅಧ್ಯಕ್ಷ ಕೊಡಗನ ಹರ್ಷ, ಎಒಎಲ್ಇಯ ಜನರಲ್ ಸೆಕ್ರೆಟರಿ ಕುರುಂಜಿ ಅಕ್ಷಯ್ ಚಿದಾನಂದ ಕ್ರೀಡಾಕೂಟದ ಯಶಸ್ಸಿಗೆ ಹಾರೈಸಿ, ಯುವ ವೇದಿಕೆಯ ಕಾರ್ಯವನ್ನು ಶ್ಲಾಘಿಸಿದರು.

ಮಡಿಕೇರಿಯ ಯುವ ವಕೀಲ ಕೊಟ್ಟಕೇರಿಯನ ಶ್ರೀಜಾ ದಯಾನಂದ್ ಗಂಟೆ ಬಾರಿಸುವ ಮೂಲಕ ಬಿಡ್ಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದರು. ಯುವ ವೇದಿಕೆ ಅಧ್ಯಕ್ಷ ಪಾಣತ್ತಲೆ ಜಗದೀಶ್ ಮಂದಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನವೀನ್ ದೇರಳ ಸ್ವಾಗತಿಸಿದರು. ಪರಿಚನ ಸತೀಶ್ ವಂದಿಸಿದರು. ಈ ಬಾರಿ 10 ಫ್ರಾಂಚೈಸಿಗಳು, 180 ಆಟಗಾರರನ್ನು ಹರಾಜು ಪ್ರಕ್ರಯೆಯ ಮುಖಾಂತರ ಖರೀದಿ ಮಾಡಿವೆ.