ಸ್ವಯಂ ಪ್ರೇರಿತ ರಕ್ತದಾನ ಶಿಬಿರ; 112 ಯೂನಿಟ್ ರಕ್ತ ಸಂಗ್ರಹ

| Published : Aug 28 2024, 12:56 AM IST

ಸಾರಾಂಶ

ಕಾಲಕಾಲಕ್ಕೆ ರಕ್ತದಾನ ಮಾಡುವುದು ದಾನಿಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಅನೇಕ ರೋಗಿಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ರಕ್ತದಾನ ಶಿಬಿರಗಳನ್ನು ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ,. ವತಿಯಿಂದ ಆಯೋಜನೆ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಮದ್ದೂರು

ರೋಟರಿ ಸಂಸ್ಥೆಯಿಂದ ಶಾಹಿ ಎಕ್ಸ್ ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಗೆಜ್ಜಲಗೆರೆ ಸಹಯೋಗದೊಂದಿಗೆ ಶಾಹಿ ಎಕ್ಸ್ ಪೊರ್ಟ್ಸ್ ಆವರಣದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು.

ಮಂಡ್ಯ ರಕ್ತ ನಿಧಿ ಕೇಂದ್ರ ಮಿಮ್ಸ್ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಶಾಹಿ ಎಕ್ಸ್ ಪೋರ್ಟ್ ಪ್ರೈ.ಲಿ.ನ ಸಿಬ್ಬಂದಿ 112 ಯೂನಿಟ್ ರಕ್ತವನ್ನು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮುಖಾಂತರ ಶಿಬಿರ ಯಶಸ್ವಿಗೊಳಿಸಿದರು.

ಈ ವೇಳೆ ಸಂಸ್ಥೆ ಜನರಲ್ ಮ್ಯಾನೇಜರ್ ರಮೇಶ್ ಬಂಡಿ ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾಲಕಾಲಕ್ಕೆ ರಕ್ತದಾನ ಮಾಡುವುದು ದಾನಿಗಳ ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಅನೇಕ ರೋಗಿಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ರೀತಿಯಲ್ಲಿ ರಕ್ತದಾನ ಶಿಬಿರಗಳನ್ನು ಶಾಹಿ ಎಕ್ಸ್ಪೋರ್ಟ್ ಪ್ರೈ ಲಿ,. ವತಿಯಿಂದ ಆಯೋಜನೆ ಮಾಡುತ್ತೇವೆ ಎಂದರು.

ಈ ವೇಳೆ ರೋಟರಿ ಸಂಸ್ಥೆ ಅಧ್ಯಕ್ಷ ಎಚ್.ಪಿ ಚನ್ನಂಕೇಗೌಡ, ಮಾಜಿ ಅಧ್ಯಕ್ಷ ಎಂ.ಸಿ.ಶಶಿಗೌಡ, ಕಾರ್ಯದರ್ಶಿ ಎ.ಲೋಕೇಶ್, ಸದಸ್ಯರಾದ ಪ್ರವೀಣ್, ಮಂಜುನಾಥ್ ನಾಯ್ಡು, ಶಿವಕುಮಾರ್, ಅರುಣ್ ಕುಮಾರ್, ರಾಮಾಚಂದ್ರು, ಬೋರ್ವೆಲ್ ರವಿ, ಶಾಹಿ ಗಾರ್ಮೆಂಟ್ಸ್ ನ ಎಚ್.ಆರ್.ಶಿವಪ್ರಸಾದ್, ವಿಶ್ವನಾಥ್, ಚೇತನ್, ಲತೇಶ್ ಹಾಗೂ ಮತ್ತಿತರರು ಹಾಜರಿದ್ದರು.ಕನ್ನಡಿಗರಿಗೆ ಉದ್ಯೋಗ ಕಾನೂನು ರೂಪಿಸಲು ಸರ್ಕಾರಗಳು ವಿಫಲ: ಬೇಕರಿ ರಮೇಶ್

ಮಂಡ್ಯ:ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸಲು ಸಂವಿಧಾನಿಕವಾಗಿ ಕಾನೂನು ರೂಪಿಸುವಲ್ಲಿ ಆಳುವ ಸರ್ಕಾರಗಳು ವಿಫಲವಾಗಿದೆ ಎಂದು ಕದಂಬ ಸೈನ್ಯ ರಾಜ್ಯಧ್ಯಕ್ಷ ಬೇಕರಿ ರಮೇಶ್ ಅಸಮಾಧಾನ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮನ್ನಾಳುವ ಸರ್ಕಾರಗಳು ಇದುವರೆಗೂ ಕನ್ನಡಿಗರಿಗೆ ಉದ್ಯೋಗ ಮೀಸಲಾತಿಗಾಗಿ ಕಾನೂನು ರೂಪಿಸಿ ವಿಧಾನ ಮಂಡಲದಲ್ಲಿ ಕಾಯಿದೆಯಾಗಿ ಜಾರಿಗೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು.ರಾಜ್ಯದ ನೆಲ, ಜಲ, ಸರ್ಕಾರದ ತೆರಿಗೆ ವಿನಾಯ್ತಿಯಂತಹ ಮೂಲ ಸೌಲಭ್ಯ ಪಡೆಯುತ್ತಿರುವ ಖಾಸಗಿ ಹೂಡಿಕೆದಾರರು, ಬಂಡವಾಳಗಾರರು, ಉದ್ಯಮಿಗಳು, ಕೈಗಾರಿಕೆಗಳು ಕನ್ನಡಿಗೆ ಉದ್ಯೋಗ ನೀಡದೇ ವಂಚಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಧಕ್ಕಬೇಕಾದರೆ ಡಾ.ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು. ಆದರೆ ಸರ್ಕಾರಗಳು ಸರಿಯಾದ ಕಾಯ್ದೆ ಜಾರಿಗೆ ತರದೇ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಕನ್ನಡಿಗರ ಜೀವನದಿ ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಸಂಕಷ್ಟ ಕಾಲದಲ್ಲಿ ರಾಷ್ಟ್ರೀಯ ವೈಜ್ಞಾನಿಕ ಮಾನದಂಡ ಕಾವೇರಿ ಸಂಕಷ್ಟ ಸೂತ್ರ ರಚಿಸುವಂತೆ ಕಾವೇರಿ ನೀರು ನಿಯಂತ್ರಣ ಮಂಡಳಿ ಮತ್ತು ನೀರು ನಿರ್ವಹಣ ಪ್ರಾಧಿಕಾರಕ್ಕೆ ಮತ್ತು ಕೇಂದ್ರ ಸರ್ಕಾರಕ್ಕೆ ಒತ್ತಡ ತರುವಂತೆ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಉಮ್ಮಡಹಳ್ಳಿ ನಾಗೇಶ್,ಆರಾಧ್ಯ, ಶಿವಕುಮಾರ್, ಸಲ್ಮಾನ್ ಉಪಸ್ಥಿತರಿದ್ದರು.