ಮರ್ಣೆ: ಸ್ವಯಂಪ್ರೇರಿತ ರಕ್ತದಾನ ಶಿಬಿರ

| Published : Jun 17 2024, 01:31 AM IST

ಸಾರಾಂಶ

ಮರ್ಣೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಮಂಜುಶ್ರೀ ಶಿಬಿರವನ್ನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಇಲ್ಲಿನ ಮರ್ಣೆ ಯೂಥ್ ಸ್ಪೋರ್ಟ್ಸ್ ಕಲ್ಚರಲ್ ಅಸೋಸಿಯೇಷನ್ ಮತ್ತು ಉಡುಪಿಯ ಸೀನಿಯರ್ ಚೇಂಬರ್ಸ್ ಟೆಂಪಲ್ ಸಿಟಿ ಮತ್ತು ಜಿಲ್ಲಾಆಸ್ಪತ್ರೆ ಸಹಯೋಗದಲ್ಲಿ ಮರ್ಣೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಏರ್ಪಡಿಸಲಾಯಿತು

ಶಿಬಿರವನ್ನು ಜಿಲ್ಲಾಸ್ಪತ್ರೆಯ ರಕ್ತನಿಧಿ ಕೇಂದ್ರದ ಡಾ. ಮಂಜುಶ್ರೀ ಅವರು ಉದ್ಘಾಟಿಸಿ, ರಕ್ತದಾನದ ಅಗತ್ಯ ಮತ್ತು ಮಹತ್ವವನ್ನು ಹೇಳಿದರು.

ಕಾರ್ಯಕ್ರಮದಲ್ಲಿ ಟೆಂಪಲ್ ಸಿಟಿ ಲೀಜನ್ ಅಧ್ಯಕ್ಷ ಸಂತೋಷ್ ಕುಮಾರ್, ಗಿರಿಜಾ ಹೆಲ್ತ್ ಸರ್ಜಿಕಲ್ಸ್ ಉಡುಪಿ ಇದರ ಮಾಲಕ ರವೀಂದ್ರ ಶೆಟ್ಟಿ, ಗಣೇಶೋತ್ಸವ ಉತ್ಸವ ಸಮಿತಿ ಮರ್ಣೆಯ ಪದ್ಮನಾಭ ಹೆಗ್ಡೆ, ಶಾಲಾ ಸಂಚಾಲಕ ದಯಾನಂದ ನಾಯಕ್, ಮುಖ್ಯೋಪಾಧ್ಯಾಯರಾದ ಕೃಷ್ಣ ನಾಯ್ಕ್, ಅಲೆವೂರು ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಕರ್ವಾಲು, ಮಾಜಿ ತಾಪಂ ಸದಸ್ಯ ವಿಜಯ್ ಕುಮಾರ್ ಉದ್ಯಾವರ, ಯೂಥ್ ಕ್ಲಬ್ ನ ಅಧ್ಯಕ್ಷ ರಾಘವೇಂದ್ರ ಗವಳ್ಕಾರ್, ಗೌರವಾಧ್ಯಕ್ಷರಾದ ಹರೀಶ್ ಶೆಟ್ಟಿ ಮರ್ಣೆ, ನಟಿ ಪವಿತ್ರ ಶೆಟ್ಟಿ ಕಟಪಾಡಿ ಉಪಸ್ಥಿತರಿದ್ದರು.

ಯೂತ್‌ ಕ್ಲಬ್ ಗೌರವಾಧ್ಯಕ್ಷ ಹರೀಶ್ ಶೆಟ್ಟಿ ಮರ್ಣೆ ಸ್ವಾಗತಿದರು, ನಾಗೇಶ್ ನಾಯಕ್ ಮರ್ಣೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

ಈ ಗ್ರಾಮದಲ್ಲಿ ಮೊದಲ ಬಾರಿಗೆ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸುಮಾರು 35ಕ್ಕೂ ಅಧಿಕ ದಾನಿಗಳು ರಕ್ತದಾನ ಮಾಡಿದರು.