ಮುಖ್ಯರಸ್ತೆ ವರ್ತಕ ಹಾಗೂ ಉದ್ಯಮಿ ಜಯಣ್ಣ ಶಿರೂರ ಹಾಗೂ ವೀರೇಶ ಶಿರೂರ ಸ್ವಯಂ ಪ್ರೇರಿತರಾಗಿ ಮುಖ್ಯರಸ್ತೆಯಲ್ಲಿನ ತಮ್ಮ ಸ್ವಂತ ಕಟ್ಟಡವನ್ನು ಬುಧವಾರ ತೆರವುಗೊಳಿಸುವ ಅಗಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

ಬ್ಯಾಡಗಿ: ಮುಖ್ಯರಸ್ತೆ ವರ್ತಕ ಹಾಗೂ ಉದ್ಯಮಿ ಜಯಣ್ಣ ಶಿರೂರ ಹಾಗೂ ವೀರೇಶ ಶಿರೂರ ಸ್ವಯಂ ಪ್ರೇರಿತರಾಗಿ ಮುಖ್ಯರಸ್ತೆಯಲ್ಲಿನ ತಮ್ಮ ಸ್ವಂತ ಕಟ್ಟಡವನ್ನು ಬುಧವಾರ ತೆರವುಗೊಳಿಸುವ ಅಗಲೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.ಮುಖ್ಯರಸ್ತೆ ಅಗಲೀಕರಣ ಬ್ಯಾಡಗಿ ಜನರ ಬಹುದಿನದ ಕನಸು ಇಂತಹ ಮಹತ್ವದ ಸಾರ್ವಜನಿಕ ಕಾರ್ಯಕ್ಕೆ ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಯನ್ನು ತೆರವುಗೊಳಿಸಿರುವ ಜಯಣ್ಣ ಶಿರೂರ ಹಾಗೂ ವೀರೇಶ ಶಿರೂರ ಕಳೆದ 15 ವರ್ಷದಿಂದ ನನೆಗುದಿಗೆ ಬಿದ್ದಿದ್ದ ಮುಖ್ಯರಸ್ತೆ ಅಗಲೀಕರಣ ಸಮಸ್ಯೆ ಶೀಘ್ರ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.ಆಸ್ತಿ ಉಳಿಸಿಕೊಳ್ಳಲು ಹೋರಾಟ

ಈ ಹಿಂದೆ ಪಟ್ಟಣದ ಮುಖ್ಯರಸ್ತೆಯಲ್ಲಿನ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಹೋರಾಡಿದ್ದ ಜಯಣ್ಣ ಶಿರೂರ ಅವರು ಪಟ್ಟಣದ ಅಭಿವೃದ್ಧಿಗೆ ಮುಖ್ಯ ರಸ್ತೆಯ ಅಗಲೀಕರಣ ಅತ್ಯವಶ್ಯವಾಗಿದೆ. ಸ್ವಯಂ ಪ್ರೇರಿತರಾಗಿ ಮುಖ್ಯ ರಸ್ತೆಯಲ್ಲಿನ ತಮ್ಮ ಅಂಗಡಿಯನ್ನು ತೆರೆವುಗೊಳಿಸಲು ಮುಂದಾಗಿರುವುದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜಯಣ್ಣ ಶಿರೂರ ಅವರು ತೆಗೆದುಕೊಂಡ ಕಟ್ಟಡ ತೆರವುಗೊಳಿಸುವ ನಿರ್ಧಾರ ಮುಖ್ಯರಸ್ತೆ ಅಗಲೀಕರಣಕ್ಕೆ ಬಹುದೊಡ್ಡ ಶಕ್ತಿ ತುಂಬಿದಂತಾಗಿದೆ. ಈಗಾಗಲೇ ಮುಖ್ಯ ರಸ್ತೆಯಲ್ಲಿನ 125ಕ್ಕೂ ಅಧಿಕ ವರ್ತಕರು ಅಗಲೀಕರಣಕ್ಕೆ ಒಪ್ಪಿ ಪರಿಹಾರದ ಮೊತ್ತವನ್ನು ಸಹ ಪಡೆದುಕೊಂಡಿದ್ದು, ಜಯಣ್ಣ ಶಿರೂರ ಅವರ ನಿರ್ಧಾರಿಂದ ಇನ್ನಷ್ಟು ಜನರು ಪರಿಹಾರ ಪಡೆದುಕೊಂಡಲ್ಲಿ ಮುಖ್ಯರಸ್ತೆಯ ಅಗಲೀಕರಣ ಸಮಸ್ಯೆ ಶೀಘ್ರದಲ್ಲಿ ಪರಿಹಾರವಾಗಲಿದೆ ಎಂಬ ಆಶಯ ಹೆಚ್ಚಾಗಿದೆ.ಅಭಿವೃದ್ಧಿ ಸಾಧ್ಯ

ಪಟ್ಟಣದ ಅಭಿವೃದ್ಧಿಗೆ ಹಾಗೂ ಅಗಲೀಕರಣಕ್ಕೆ ನಾವು ಬದ್ಧರಾಗಿದ್ದೇವೆ. ಈ ಹಿನ್ನೆಲೆಯಲ್ಲಿ ಸ್ವಯಂ ಪ್ರೇರಿತರಾಗಿ ಕಟ್ಟಡ ತೆರವುಗೊಳಿಸಿ ಅಗಲೀಕರಣಕ್ಕೆ ಅನೂಕೂಲ ಮಾಡಿಕೊಟ್ಟಿದ್ದೇವೆ. ಎಲ್ಲರೂ ಪರಿಹಾರ ಮೊತ್ತ ತೆಗೆದುಕೊಂಡು ಅಗಲೀಕರಣಕ್ಕೆ ಸಹಕಾರ ನೀಡಿದಲ್ಲಿ ಪಟ್ಟಣದ ಅಭಿವೃದ್ಧಿ ಸಾಧ್ಯವಾಗಲಿದೆ ಎನ್ನುತ್ತಾರೆ ವರ್ತಕ ವೀರೇಶ ಶಿರೂರ.ಮಹತ್ವದ ಹೆಜ್ಜೆ

ಸ್ವಾರ್ಥಕ್ಕಿಂತ ಸಮಾಜದ ಹಿತವನ್ನು ಮೇಲುಗೈ ಮಾಡಿ ಅಂಗಡಿ ತೆರವುಗೊಳಿಸಿಕೊಂಡು ಜಯಣ್ಣ ಹಾಗೂ ವೀರೇಶ ಶಿರೂರ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದು ಬ್ಯಾಡಗಿ ಪಟ್ಟಣ ಅಭಿವೃದ್ಧಿ ಪಥದಲ್ಲಿ ಸಾಗಲು ಸಹಕಾರಿಯಾಗಲಿದೆ. ಇಂತಹ ಸಕಾರಾತ್ಮಕ ಮನೋಭಾವಗಳು ನಮ್ಮ ಊರಿನ ಕ್ಷೇಯೋಭಿವೃದ್ಧಿಗೆ ಹೊಸ ದಾರಿ ದೀಪವಾಗಲಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳುತ್ತಾರೆ.ಸಮಸ್ಯೆಗೆ ಮುಕ್ತಿ

ಜಯಣ್ಣ ಶಿರೂರ ಅವರದು ಮಾದರಿ ನಡೆ. ಇವರ ರೀತಿಯಲ್ಲಿ ಮುಖ್ಯ ರಸ್ತೆ ವರ್ತಕರು ಸ್ವಯಂ ಪ್ರೇರಿತರಾಗಿ ಪರಿಹಾರ ಮೊತ್ತ ಪಡೆದುಕೊಂಡು ಕಟ್ಟಡ ತೆರವುಗೊಳಸಿ ಅಗಲೀಕರಣಕ್ಕೆ ಸಾಥ್ ನೀಡಿದಲ್ಲಿ ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುತ್ತಾರೆ ಮಾಜಿ ಶಾಸಕ ಸುರೇಶಗೌಡ ಪಾಟೀಲ