ವಾಂತಿ-ಭೇದಿ: ಭಾನುವಾರ ಮತ್ತೆ 11 ಜನ ಆಸ್ಪತ್ರೆಗೆ

| Published : Sep 02 2024, 02:02 AM IST

ವಾಂತಿ-ಭೇದಿ: ಭಾನುವಾರ ಮತ್ತೆ 11 ಜನ ಆಸ್ಪತ್ರೆಗೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಳೆದ ಗುರುವಾರದಿಂದ ಕಲುಷಿತ ನೀರಿನ ಸೇವನೆಯಿಂದಾಗಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡವರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಭಾನುವಾರ 11 ಜನ ಆಸ್ಪತ್ರೆ ಸೇರಿದ್ದು, ಇದುವರೆಗೂ ಅಸ್ವಸ್ಥಗೊಂಡವರ ಸಂಖ್ಯೆ 55ಕ್ಕೇರಿದೆ.

- ಜೋಳದಾಳ್‌ನಲ್ಲಿ ಕಲುಷಿತ ನೀರಿನಿಂದಾಗಿ 55ಕ್ಕೇರಿದ ಅಸ್ವಸ್ಥರ ಸಂಖ್ಯೆ

- ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ ಶಾಸಕ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಳೆದ ಗುರುವಾರದಿಂದ ಕಲುಷಿತ ನೀರಿನ ಸೇವನೆಯಿಂದಾಗಿ ವಾಂತಿ-ಭೇದಿಯಿಂದ ಅಸ್ವಸ್ಥಗೊಂಡವರ ಸಂಖ್ಯೆ ಮತ್ತೆ ಹೆಚ್ಚಳವಾಗಿದೆ. ಭಾನುವಾರ 11 ಜನ ಆಸ್ಪತ್ರೆ ಸೇರಿದ್ದು, ಇದುವರೆಗೂ ಅಸ್ವಸ್ಥಗೊಂಡವರ ಸಂಖ್ಯೆ 55ಕ್ಕೇರಿದೆ.

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಸಹ ವಾಂತಿ-ಭೇದಿಯಿಂದಾಗಿ 11 ಚಿಕಿತ್ಸೆಗೆ ದಾಖಲಾಗಿದ್ದಾರೆ. ಗ್ರಾಮದ ಎರಡು ಬೀದಿಗಳಲ್ಲಿ ಕುಡಿಯುವ ನೀರಿನ ಪೈಪ್ ಲೈನ್ ಅನ್ನು ಚರಂಡಿಯ ಒಳಭಾಗದಲ್ಲಿಯೇ ಅಳವಡಿಸಲಾಗಿದೆ. ಲೀಕೇಜ್ ಆದ ಪೈಪ್‌ನಿಂದ ಚರಂಡಿ ನೀರು ಕುಡಿಯುವ ನೀರಿನೊಂದಿಗೆ ಸೇರಿ ಜನರಲ್ಲಿ ವಾಂತಿ-ಭೇದಿ ಸಮಸ್ಯೆ ಉಂಟಾಗಲು ಕಾರಣವಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ಈ ಕುರಿತು ಮಾತನಾಡಿದ್ದು, ಮೂರು ದಿನಗಳಿಂದಲೂ ಜಿಲ್ಲಾ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಜೋಳದಾಳ್ ಗ್ರಾಮಕ್ಕೆ ಭೇಟಿ ನೀಡಿ, ಸಮಸ್ಯೆ ಪರಿಶಿಲನೆ ನಡೆಸುತ್ತಿದ್ದಾರೆ. ಗ್ರಾಮವು ಚನ್ನಗಿರಿ ಪಟಣ್ಣದಿಂದ 10 ಕಿ.ಮೀ. ದೂರದಲ್ಲಿದೆ. ಜನರಿಗೆ ಏನಾದರೂ ಆರೋಗ್ಯ ಸಮಸ್ಯೆಗಳಾದಲ್ಲಿ ಅವರನ್ನು ಕರೆ ತರಲು ಆರೋಗ್ಯ ಇಲಾಖೆಯಿಂದ ಒಂದು ವ್ಯಾನ್ ಅನ್ನು ಗ್ರಾಮದಲ್ಲಿಯೇ ಕಾಯ್ದಿರಿಸಲಾಗಿದೆ ಎಂದು ತಿಳಿಸಿದ್ದಾರೆ.

ಜೋಳದಾಳ್ ಗ್ರಾಮಕ್ಕೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದ ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ಶಾಸಕ ಬಸವರಾಜ ವಿ. ಶಿವಗಂಗಾ, ದಾವಣಗೆರೆ ವಿ.ವಿ.ಯ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್, ತುಮ್ಕೋಸ್‌ ಮಾಜಿ ಅಧ್ಯಕ್ಷ ಎಚ್.ಎಸ್. ಶಿವಕುಮಾರ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಪುತ್ರ ಅನೀತ್ ಅವರು ಆಸ್ಪತ್ರೆಗೆ ಭೇಟಿ ನೀಡಿ. ರೋಗಿಗಳ ಯೋಗ-ಕ್ಷೇಮ ವಿಚಾರಿಸಿದ್ದಾರೆ.

- - - -1ಕೆಸಿಎನ್‌ಜಿ3:

ಚನ್ನಗಿರಿ ತಾಲೂಕಿನ ಜೋಳದಾಳ್ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಆಸ್ವಸ್ಥಗೊಂಡವರು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಶಾಸಕ ಬಸವರಾಜ ವಿ.ಶಿವಗಂಗಾ ಅವರು ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿದರು. -1ಕೆಸಿಎನ್‌ಜಿ4:

ದಾವಣಗೆರೆ ವಿವಿ ಮಾಜಿ ಸಿಂಡಿಕೇಟ್ ಸದಸ್ಯ ಮಾಡಾಳು ಮಲ್ಲಿಕಾರ್ಜುನ್‌ ಅವರು ವಾಂತಿ-ಭೇದಿಯಿಂದಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದರು.