ಸಾರಾಂಶ
ಸಿರವಾರದಲ್ಲಿ ತಾಪಂ ಹಾಗೂ ವಿವಿಧ ಇಲಾಖೆಗಳ ಸಂಯೋಗದಲ್ಲಿ ಚುನಾವಣೆ ಜಾಗೃತಿ ಜಾಥಾ ನಡೆಯಿತು.
ಸಿರವಾರ: ಮತದಾನ ಪ್ರಜಾಪ್ರಭುತ್ಚದ ಮೊದಲ ಅಂಗ ಅದರ ಮಹತ್ವ ಅರಿತು ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡವ ಮೂಲಕ ದೇಶದ ಸದೃಢತೆಗೆ ನಾಂದಿ ಹಾಡೋಣ ಎಂದು ತಾಪಂ ಇಓ ಬಸವರಾಜ ಶರಭೈ ಹೇಳಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವೀಪ್ ಸಮಿತಿ, ತಾಲೂಕು ಆಡಳಿತ, ತಾಪಂ, ತಾಲೂಕು ಸ್ವೀಪ್ ಸಮಿತಿ, ಹಾಗೂ ಪಪಂ ಸಂಯುಕ್ತಾಶ್ರಯದಲ್ಲಿ ನಡೆದ ಮತದಾನ ಜಾಗೃತಿ ಜಾಥಾದಲ್ಲಿ ಮಾತನಾಡಿದರು.ದೇಶದ ಪ್ರತಿಯೊಬ್ಬರೂ ಕೂಡ ಮತದಾನದಿಂದ ದೂರ ಉಳಿಯದೇ ಮತದಾನದಲ್ಲಿ ಭಾಗಿಯಾಗಬೇಕು. ಪ್ರಜಾಪ್ರಭುತ್ವ ಹಬ್ಬವಾಗಿ ಚುನಾವಣೆಯಲ್ಲಿ ನಿಮ್ಮ ನಾಯಕನನ್ನು ಆಯ್ಕೆ ಮಾಡಲು ಹಕ್ಕನ್ನು ಚಲಾಯಿಸಬೇಕು. ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು ಎಂದು ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದಿಂದ ದೇವದುರ್ಗ ಕ್ರಾಸ್‌ವರೆಗೆ ಮೇಣದ ಬತ್ತಿ, ಮತದಾನ ಜಾಗೃತಿ ಫಲಕ ಹಿಡಿದು ಪಾದಯಾತ್ರೆ ಮೂಲಕ ಜಾಗೃತಿ ಮೂಡಿಸಲಾಯಿತು. ಮತದಾನ ಪ್ರತಿಜ್ಞಾವಿಧಿ ಬೋಧಿಸಲಾಯಿತು.ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರಾ, ಸಿಡಿಪಿಓ ನಾಗರತ್ನ ನಾಯಕ, ಆಯುಷ್ ವೈದ್ಯಾಧಿಕಾರಿ ಸುನಿಲ್ ಸರೋದೆ, ಕೃಷಿ ಅಧಿಕಾರಿ ಆಂಜನೇಯ ರಾಠೋಡ್, ಸರ್ಕಾರಿ ನೌಕರರ ಸಂಘದ ಅದ್ಯಕ್ಷ ಅಯ್ಯನಗೌಡ ಎರೆಡ್ಡಿ, ಕಂದಾಯ ನೀರೀಕ್ಷಕ ಶ್ರೀನಾಥ, ಗ್ರಾಮ ಲೆಕ್ಕಾಧಿಕಾರಿ ವಿಲ್ಸನ್, ಪ.ಪಂ ಸಮುದಾಯ ಸಂಘಟನಾಧಿಕಾರಿ ಹಂಪಯ್ಯ ಪಾಟೀಲ, ಸುನೀತ ಸಜ್ಜನ್, ಅಂಗನವಾಡಿ ಮೇಲ್ವಿಚಾರಕಿಯರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು, ಪಪಂ ಸಿಬ್ಬಂದಿ ಭಾಗವಹಿಸಿದ್ದರು.