ಇತ್ತೀಚೆಗಿನ ಶಾಸಕರನ್ನು ಗಮನಿಸಿದರೆ ಒಬ್ಬೊಬ್ಬ ಶಾಸಕರ ಆಸ್ತಿ ಮೌಲ್ಯ ಸಾವಿರಾರು ಕೋಟಿ ಮಿಕ್ಕಿರುತ್ತದೆ. ಅದು ಸರಿಯಲ್ಲ. ನಮ್ಮನ್ನು ಆಳುವ ಪ್ರಭುಗಳು ನಮ್ಮಿಂದಲೇ ಆಯ್ಕೆ ಆಗುತ್ತಿದ್ದು ಅಭ್ಯರ್ಥಿಗಳನ್ನು ಅವರ ಆಸ್ತಿ, ಸಂತಸ್ಥಿನ ಮೇಲೆ ಆಯ್ಕೆ ಮಾಡುವುದು ಸರಿಯಲ್ಲ. ಅವರ ವ್ಯಕ್ತಿತ್ವ ನೀಡಿ ಮತ ನೀಡಬೇಕು. ಪಕ್ಷ, ಆಸ್ತಿ ನೋಡಬಾರದು.
ಪುತ್ತೂರು : ಇತ್ತೀಚೆಗಿನ ಶಾಸಕರನ್ನು ಗಮನಿಸಿದರೆ ಒಬ್ಬೊಬ್ಬ ಶಾಸಕರ ಆಸ್ತಿ ಮೌಲ್ಯ ಸಾವಿರಾರು ಕೋಟಿ ಮಿಕ್ಕಿರುತ್ತದೆ. ಅದು ಸರಿಯಲ್ಲ. ನಮ್ಮನ್ನು ಆಳುವ ಪ್ರಭುಗಳು ನಮ್ಮಿಂದಲೇ ಆಯ್ಕೆ ಆಗುತ್ತಿದ್ದು ಅಭ್ಯರ್ಥಿಗಳನ್ನು ಅವರ ಆಸ್ತಿ, ಸಂತಸ್ಥಿನ ಮೇಲೆ ಆಯ್ಕೆ ಮಾಡುವುದು ಸರಿಯಲ್ಲ. ಅವರ ವ್ಯಕ್ತಿತ್ವ ನೀಡಿ ಮತ ನೀಡಬೇಕು. ಪಕ್ಷ, ಆಸ್ತಿ ನೋಡಬಾರದು.
ಮತದಾರರಿಗೂ ನಾಯಕರನ್ನು ಆಯ್ಕೆ ಮಾಡುವ ಜವಾಬ್ದಾರಿಯಿದ್ದು ಮನೆಯಲ್ಲಿರದೇ ಮತದಾನದಲ್ಲಿ ಭಾಗವಹಿಸಿ ಉತ್ತಮ ನಾಯಕರನ್ನೇ ಆಯ್ಕೆ ಮಾಡಬೇಕು ಎಂದು ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾಗಿರುವ ಸದಾನಂದ ನಾಗಪ್ಪ ನಾಯ್ಕ ಅಭಿಪ್ರಾಯ ಪಟ್ಟರು. ಅವರು ತಾಲೂಕು ಆಡಳಿತ, ತಾಲೂಕು ಪಂಚಾಯತ್, ನಗರ ಸಭೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಕಾನೂನು ನ್ಯಾಯ ಮತ್ತು ಮಾನವ ಹಕ್ಕು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಶುಕ್ರವಾರ ಪುತ್ತೂರು ತಾಲೂಕು ಪಂಚಾಯತ್‌ನಲ್ಲಿ ನಡೆದ ವಿದ್ಯಾರ್ಥಿಗಳಿಗೆ ಯುವ ಸಂಸತ್ತು ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ ಎಲ್ಲದಕ್ಕೂ ಒಂದು ಕಾನೂನುಗಳಿವೆ. ಅದು ಸಮರ್ಪಕವಾಗಿ ಅನುಷ್ಟಾನ ಆಗಬೇಕು. ಭ್ರಷ್ಠಾಚಾರಕ್ಕೂ ಸಂಬಂದಿಸಿದಂತೆ ಹಲವು ಕಾನೂನುಗಳಿವೆ. ಅದು ಅರಿಯಾಗಿ ಅನುಷ್ಟಾನ ಆಗುತ್ತಿಲ್ಲ. ಭ್ರಷ್ಠಾಚಾರ ನಿರ್ಮೂಲನೆಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯವಾಗಿದ್ದು ಕಚೇರಿ ಕೆಲಸಗಳಿಗೆ ತೆರೆಳಿದ ಗಂಡ ಸಂಜೆ ಮನೆಗೆ ಬಂದಾಗ ಅವರ ಬ್ಯಾಗ್ ಪರಿಶೀಲಿಸಿ ಅದರಲ್ಲಿ ಲಂಚ ಪಡೆದ ಹಣ ತಂದಿದ್ದರೆ ಅವರ ಕಾರ್ಯವನ್ನು ವಿರೋಧಿಸುವ ಕೆಲಸ ಮನೆಯಲ್ಲಿರುವ ಮಹಿಳೆಯರು ಮಾಡಿದಾಗ ಭಾರತದಲ್ಲಿ ಭ್ರಷ್ಟಾಚಾರ ನಿರ್ಮೂಲನೆಯಾಗಲು ಸಾಧ್ಯ ಎಂದರು.ಪುತ್ತೂರು ನಗರ ಯೋಜನಾ ಪ್ರಾಧೀಕಾರ(ಪುಡಾ)ದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ ಪ್ರಶ್ನಿಸುವ ಗುಣವೇ ಪ್ರಜಾಪ್ರಭುತ್ವದ ಮೊದಲ ಲಕ್ಷಣ. ಪ್ರಶ್ನಿಸುವ ಹೊರತಾದ ಪ್ರಜಾಪ್ರಭುತ್ವ ಕಲ್ಪಿಸಲು ಸಾಧ್ಯವಿಲ್ಲ. ಕಲಾಪದಲ್ಲಿ ಪ್ರಶ್ನಿಸುವ ವಿರೋಧ ಪಕ್ಷದ ನಾಯಕನೇ ನಿಜವಾದ ಹೋರೋ. ಅಧಿವೇಶನದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರ ಹೊಂದಾಣಿಕೆಯಲ್ಲಿ ಕಲಾಪ ನಡೆಸಿದರೆ ಅದು ದೇಶಕ್ಕೆ ಜನರಿಗೆ ಮಾಡುವ ದ್ರೋಹವಾಗಿದೆ. ಜನರ ಸಮಸ್ಯೆಗಳನ್ನು ಕಲಾಪದಲ್ಲಿ ಪ್ರಶ್ನಿಸುವನೇ ನಾಯಕ. ಆದರೆ ಪ್ರಶ್ನಿಸುವವರನ್ನು ಬಾಯಿ ಮುಚ್ಚಿಸುವ ಕೆಲಸ ಎಲ್ಲಾ ಸರಕಾರದ ಅವಧಿಯಲ್ಲಿ, ಎಲ್ಲಾ ದೇಶ ರಾಜ್ಯಗಳಲ್ಲಿಯೂ ನಡೆಯುತ್ತಿದೆ ಎಂದರು.ಪುತ್ತೂರು ತಹಶೀಲ್ದಾರ್ ಎಸ್.ಬಿ ಕೂಡಲಗಿ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎಂ., ಪುತ್ತೂರು ಉಪವಿಭಾಗದ ಡಿವೈಎಸ್ಪಿ ಪ್ರಮೋದ್ ಕುಮಾರ್, ಪುತ್ತೂರು ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಮಾತನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಸ್ತಾವಣೆಯೊಂದಿಗೆ ಸ್ವಾಗತಿಸಿದರು. ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಅಬ್ದುಲ್ ರಝಾಕ್ ಸಂವಿಧಾನ ಪೀಠಿಕೆ ವಚನ ಬೋಧಿಸಿದರು. ಶಿಕ್ಷಕ ಪ್ರಶಾಂತ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಂಯೋಜಕ ಹರಿಪ್ರಸಾದ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿಧಾನ ಸಭೆಯು ಅಣುಕು ಕಾರ್ಯಕಲಾಪಗಳ ಮೂಲಕ ಯುವ ಸಂಸತ್ ಸ್ಪರ್ಧೆಗಳು ನಡೆಯಿತು. ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.