ಜಾಗರೂಕತೆಯಿಂದ ಮತ ಚಲಾಯಿಸಿ ಬಿಜೆಪಿ ಸಂಚನ್ನು ವಿಫಲಗೊಳಿಸಿ-ಶಾಸಕ ಮಾನೆ

| Published : May 04 2024, 12:33 AM IST

ಜಾಗರೂಕತೆಯಿಂದ ಮತ ಚಲಾಯಿಸಿ ಬಿಜೆಪಿ ಸಂಚನ್ನು ವಿಫಲಗೊಳಿಸಿ-ಶಾಸಕ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ಆತಂಕದ ವಾತಾವರಣ ಸೃಷ್ಟಿಸಿ, ಜಾತಿ, ಧರ್ಮದ ಭಾವನೆಗಳನ್ನು ಬೇರೆ ರೀತಿಯಾಗಿ ಬಿಂಬಿಸಿ ಜನರನ್ನು ದಾರಿ ತಪ್ಪಿಸುವ ಮೂಲಕ ಮತ ಪಡೆಯುವ ಸಂಚನ್ನು ಬಿಜೆಪಿ ಈ ಬಾರಿಯೂ ರೂಪಿಸಿದ್ದು, ಪ್ರತಿಯೊಬ್ಬರೂ ಸಹ ಜಾಗರೂಕತೆಯಿಂದ ಮತ ಚಲಾಯಿಸುವ ಮೂಲಕ ಬಿಜೆಪಿಯ ಸಂಚನ್ನು ವಿಫಲಗೊಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.

ಹಾನಗಲ್ಲ: ಆತಂಕದ ವಾತಾವರಣ ಸೃಷ್ಟಿಸಿ, ಜಾತಿ, ಧರ್ಮದ ಭಾವನೆಗಳನ್ನು ಬೇರೆ ರೀತಿಯಾಗಿ ಬಿಂಬಿಸಿ ಜನರನ್ನು ದಾರಿ ತಪ್ಪಿಸುವ ಮೂಲಕ ಮತ ಪಡೆಯುವ ಸಂಚನ್ನು ಬಿಜೆಪಿ ಈ ಬಾರಿಯೂ ರೂಪಿಸಿದ್ದು, ಪ್ರತಿಯೊಬ್ಬರೂ ಸಹ ಜಾಗರೂಕತೆಯಿಂದ ಮತ ಚಲಾಯಿಸುವ ಮೂಲಕ ಬಿಜೆಪಿಯ ಸಂಚನ್ನು ವಿಫಲಗೊಳಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಕರೆ ನೀಡಿದರು.

ತಾಲೂಕಿನ ಬಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರ ಪ್ರಚಾರ ಮತಯಾಚಿಸಿ ಅವರು ಮಾತನಾಡಿದರು.

ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೂ ಸಾಲದ ಹೊರೆ ಬಿದ್ದಿದೆ. ಆರ್ಥಿಕ ವ್ಯವಸ್ಥೆ ಕುಸಿಯುತ್ತಿದೆ. ಉದ್ಯೋಗ ನಷ್ಟ ಉಂಟಾಗುತ್ತಿದೆ. ಜ್ವಲಂತ ಸಮಸ್ಯೆಗಳನ್ನು ದೇಶ ಎದುರಿಸುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಮುಖಂಡರಾದ ಎಂ.ಎಸ್.ಪಾಟೀಲ, ಹನೀಫ್ ಬಂಕಾಪೂರ, ಚನ್ನಬಸಪ್ಪ ಬಿದರಗಡ್ಡಿ, ಚನ್ನವೀರಗೌಡ ಪಾಟೀಲ, ರಾಜೂ ಬೇದ್ರೆ, ಮನೋಜ ಉಡುಗಣಿ, ನಾಗರಾಜ ಮಲ್ಲಮ್ಮನವರ, ಪದ್ಮಾ ಬೇದ್ರೆ, ಲಕ್ಷ್ಮೀ ಕಲಾಲ, ಕುಶಾಲ ವಾಗಿನಕೊಪ್ಪ, ಪತಂಗ ಮಕಾನದಾರ, ರಹೀಮ್ ಮಕಾನದಾರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ನಮ್ಮ ರಾಜ್ಯಕ್ಕೆ ನ್ಯಾಯಸಮ್ಮತವಾಗಿ ಬರಬೇಕಿದ್ದ ಶೇ. ೮೧ರಷ್ಟು ಹಣಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮಕ್ಮಲ್ ಟೋಪಿ ಹಾಕಿದೆ. ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯ ಮಧ್ಯೆಯೂ ನೂರು ರು. ಪರಿಹಾರ ಕೇಳಿದರೆ ಬಿಜೆಪಿ ಸರ್ಕಾರ ಭಿಕ್ಷೆಯ ರೂಪದಲ್ಲಿ ನಮ್ಮ ರಾಜ್ಯಕ್ಕೆ ಕೇವಲ ಶೇ.೧೯ ರು. ನೀಡಿದೆ. ಕರ್ನಾಟಕ ಮತ್ತು ಕನ್ನಡಿಗರ ವಿರೋಧಿ ಬಿಜೆಪಿಗೆ ಬುದ್ಧಿ ಕಲಿಸಬೇಕಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.