ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್‌ಗೆ ಮತ ನೀಡಿ:ಮುದ್ದಹನುಮೇಗೌಡ

| Published : Apr 15 2024, 01:22 AM IST

ಪ್ರಜಾಪ್ರಭುತ್ವದ ಉಳಿವಿಗೆ ಕಾಂಗ್ರೆಸ್‌ಗೆ ಮತ ನೀಡಿ:ಮುದ್ದಹನುಮೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ರಕ್ಷಣೆಗಾಗಿ ಜನರು ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಮನವಿ ಮಾಡಿದ್ದಾರೆ

ಕನ್ನಡಪ್ರಭ ವಾರ್ತೆ ಶಿರಾ ದೇಶದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಸಂವಿಧಾನದ ರಕ್ಷಣೆಗಾಗಿ ಜನರು ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ ಮುದ್ದಹನುಮೇಗೌಡ ಮನವಿ ಮಾಡಿದರು.

ಅವರು ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ದೊಡ್ಡ ಅಗ್ರಹಾರ, ಗೋಪಾಲ ದೇವರಹಳ್ಳಿ, ಹೂಯಿಲ್ ದೊರೆ, ನೇರಳಗುಡ್ಡ, ಕುರುಬರಹಳ್ಳಿ, ಹಾಗೂ ಬುಕ್ಕಾಪಟ್ಟಣ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದರು. ಜಿಲ್ಲೆಯ ಪರವಾಗಿ ದಿಲ್ಲಿಯ ಸಂಸತ್ ನಲ್ಲಿ ಮಾತನಾಡುವ ನಾಯಕರು ಬಿಜೆಪಿಯಲ್ಲಿ ಇಲ್ಲವಾಗಿದ್ದು, ಸೂಕ್ತ ವ್ಯಕ್ತಿ ಯನ್ನು ಆರಿಸಿ, ಸಂಸತ್ಗೆ ಕಳಿಸುವ ಜವಾಬ್ದಾರಿ ನಿಮ್ಮ ಮೇಲಿದೆ.

ಬುಕ್ಕಾಪಟ್ಟಣ ಹೋಬಳಿ ಹಿಂದುಳಿಯಲು ಈ ಹಿಂದಿನ ಲೋಕಸಭಾ ಸದಸ್ಯರೇ ಕಾರಣ ಈವರೆಗೆ ಬುಕ್ಕಾಪಟ್ಟಣ ಹೋಬಳಿಗೆ ಅವರು ನೀಡಿದ ಕೊಡುಗೆ ಏನು ಎಂದು ಜನ ಆಲೋಚಿಸಬೇಕು. ಸಂಸತ್‌ನಲ್ಲಿ ಜಿಲ್ಲೆಯ ಸಂಸದರು ಎಷ್ಟು ಬಾರಿ ಪ್ರಶ್ನೆ ಕೇಳಿದ್ದಾರೆ ? ಹಾಗೂ ಪ್ರಶ್ನೋತ್ತರ ಕಾಲಾಪಗಳಲ್ಲಿ ಎಷ್ಟು ಬಾರಿ ಭಾಗವಹಿಸಿದ್ದಾರೆ ಎಂದು ಪ್ರಶ್ನಿಸಿದರು. ಮಾಜಿ ಶಾಸಕ ಕಿರಣ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಹಾಗೂ ಕೇಂದ್ರ ಸರ್ಕಾರದಿಂದ ೨೫ ಗ್ಯಾರಂಟಿಗಳನ್ನು ತಮ್ಮ ಮುಂದೆ ಇಡುತ್ತಿದ್ದೇವೆ. ಕಾಂಗ್ರೆಸ್ ಎಂದರೆ ನುಡಿದಂತೆ ನಡೆಯುವ ಪಕ್ಷವಾಗಿದೆ ಎಂದು ತಿಳಿಸಿದರುವಿಧಾನ ಪರಿಷತ್ ಸದಸ್ಯ ರಾಜೇಂದ್ರ, ಶಾಸಕ ಟಿ.ಬಿ.ಜಯಚಂದ್ರ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳಿದರ ಹಾಲಪ್ಪ, ಸಿ ಆರ್ ಉಮೇಶ್, ಜೈಪ್ರಕಾಶ್, ಶಿವಕುಮಾರ್, ಕರೆ ಮಾದೇನಹಳ್ಳಿ ನಾಗರಾಜು, ದ್ಯಾಮಣ್ಣ, ಮುಜಾಹಿದ್, ಶೇಷ ನಾಯಕ್, ಹೊಸಪಾಳ್ಯ ನಿಂಗಪ್ಪ, ದಯಾನಂದ್, ಪ್ರಭಾಕರ್ ಸೇರಿ ಇತರರಿದ್ದರು.