ಸಾರಾಂಶ
ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಬಾಪುರ, ಮೊಗದಾಳ, ಮರಕುಂದಾ, ಭಂಗೂರ, ಸಿಂಧೋಲ, ರಾಜಗೀರಾ, ಹೊಕ್ರಾಣ (ಕೆ), ಹೊಕ್ರಾಣ (ಬಿ) ಸೇರಿ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಕರ ಪತ್ರ ವಿತರಿಸಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಶಾಸಕ ಶೈಲೇಂದ್ರ ಬೆಲ್ದಾಳೆ ಮತಯಾಚಿಸಿದರು.
ಬೀದರ್: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅತಿ ಹೆಚ್ಚು ಮತಗಳಿಂದ ಗೆಲ್ಲುವುದರೊಂದಿಗೆ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಇದಕ್ಕಾಗಿ ನಾವು ಹಗಲಿರುಳು ಶ್ರಮಿಸುವುದು ನಮ್ಮೇಲ್ಲರ ಕರ್ತವ್ಯವಾಗಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ತಿಳಿಸಿದರು.
ಬೀದರ್ ದಕ್ಷಿಣ ಕ್ಷೇತ್ರದ ವ್ಯಾಪ್ತಿಯ ಬಾಪುರ, ಮೊಗದಾಳ, ಮರಕುಂದಾ, ಭಂಗೂರ, ಸಿಂಧೋಲ, ರಾಜಗೀರಾ, ಹೊಕ್ರಾಣ (ಕೆ), ಹೊಕ್ರಾಣ (ಬಿ) ಸೇರಿ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಕರ ಪತ್ರ ವಿತರಿಸಿ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರ ಪ್ರಚಾರ ನಡೆಸಿ ಅವರು ಮಾತನಾಡಿ, ದೇಶದ ಭದ್ರತೆ ಹಾಗೂ ಸಮಗ್ರ ಅಭಿವೃದ್ಧಿಗಾಗಿ ಭಾರತವನ್ನು ಬಲಿಷ್ಠ ದೇಶವಾಗಿಸಲು ಹಗಲಿರುಳು ಶ್ರಮಿಸುತ್ತಿರುವ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.ಬಿಜೆಪಿ ಲೋಕಸಭಾ ಅಭ್ಯರ್ಥಿ ಭಗವಂತ ಖೂಬಾ ಈಗಾಗಲೇ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಬಹಳಷ್ಟು ಶ್ರಮಿಸಿದ್ದಾರೆ. ಹೀಗಾಗಿ ನಮ್ಮ ಬಿಜೆಪಿ ಪಕ್ಷದ ಅಭ್ಯರ್ಥಿ ಭಗವಂತ ಖೂಬಾ ಗೆಲ್ಲಲಿದ್ದಾರೆ ಎಂಬ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ರಾಜರೆಡ್ಡಿ ಶಾಬಾದಿ, ಮುಖಂಡರಾದ ಚಂದ್ರಯ್ಯ ಸ್ವಾಮಿ, ಸುರೇಶ ಮಾಶೆಟ್ಟಿ, ಮಾಣಿಕಪ್ಪ ಖಾಶೆಂಪುರ, ಘಾಳೆಪ್ಪ ಚಟನಳ್ಳಿ, ಶಿವಕುಮಾರ ಸ್ವಾಮಿ ಇದ್ದರು.