ಸುಭದ್ರ ಸರ್ಕಾರಕ್ಕಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ

| Published : Apr 27 2024, 01:20 AM IST

ಸುಭದ್ರ ಸರ್ಕಾರಕ್ಕಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೊಮ್ಮೆ ಮೋದಿ ಎಂಬ ಸಂಕಲ್ಪದೊಂದಿಗೆ ಎಲ್ಲರೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಮತ ನೀಡಬೇಕೆಂದು ಮನವಿ

ಮುಂಡರಗಿ: ದೇಶದಲ್ಲಿ ಉತ್ತಮ ಅಭಿವೃದ್ಧಿ ಪರ ಆಡಳಿತ ನಡೆಸುವಂತಹ ಸುಭದ್ರ ಸರ್ಕಾರ ಅಧಿಕಾರಕ್ಕೆ ಬರಬೇಕಾದರೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಹೆಚ್ಚಿನ ಮತ ಹಾಕುವ ಮೂಲಕ ಆಯ್ಕೆ ಮಾಡಬೇಕು ಎಂದು ಪುರಸಭೆ ಸದಸ್ಯ ನಾಗೇಶ ಹುಬ್ಬಳ್ಳಿ ಹೇಳಿದರು.

ಅವರು ಗುರುವಾರ ಸಂಜೆ 18ನೇ ವಾರ್ಡಿನ ವಿದ್ಯಾನಗರ ಮತ್ತು 19ನೇ ವಾರ್ಡಿನಲ್ಲಿ ಹಾವೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರ ಮನೆ ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದರು.

ಕಳೆದ 10 ವರ್ಷದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 48.27 ಕೋಟಿಗೂ ಅಧಿಕ ಬಡವರನ್ನು ಬ್ಯಾಂಕಿಂಗ್ ವ್ಯವಸ್ಥೆಗೆ ಜೋಡನೆ ಮಾಡಿದ್ದಾರೆ. ಪ್ರಧಾನಮಂತ್ರಿ ಜೀವನ್ ಸುರಕ್ಷಾ ಯೋಜನೆಯಡಿ 20.75 ಕೋಟಿ ಫಲಾನುಭವಿಗಳು ಪ್ರಯೋಜನ ಪಡೆದುಕೊಂಡಿದ್ದಾರೆ. ಪ್ರಧಾನಮಂತ್ರಿ ಜೀವನ್ ಜ್ಯೋತಿ ವೀವವಿಮಾ ಯೋಜನೆಯಡಿಯಲ್ಲಿ 13.53 ಕೋಟಿ ಫಲಾನುಭವಿಗಳು ಪ್ರಯೋಜನೆ ಪಡೆದುಕೊಂಡಿದ್ದಾರೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿಯಲ್ಲಿ 11.72 ಕೋಟಿ ಶೌಚಾಲಯಗಳ ನಿರ್ಮಾಣ ಮಾಡಲಾಗಿದೆ. ಇಂತಹ ಇನ್ನಷ್ಟು ಅಭಿವೃದ್ಧಿಗಾಗಿ ಬಿಜೆಪಿಗೆ ಅಭ್ಯರ್ಥಿ ಬೊಮ್ಮಾಯಿಯವರಿಗೆ ಮತನೀಡಿ ಆರಿಸಿ ತರಬೇಕು ಎಂದರು.

ಪುರಸಭೆ ಸದಸ್ಯೆ ಜ್ಯೋತಿ ಹಾನಗಲ್ ಮಾತನಾಡಿ, ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಹಿಳೆಯರ ಅಭಿವೃದ್ಧಿಗಾಗಿ ಪ್ರತಿ ತಿಂಗಳು ಎಲ್ಲ ಗರ್ಭಿಣಿಯರಿಗೆ ಪ್ರಧಾನಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನ, ಹೆರಿಗೆ ರಜೆಯನ್ನು 12 ವಾರದಿಂದ 26 ವಾರಕ್ಕೆ ಹೆಚ್ಚಳ, ಆರೋಗ್ಯಯುಕ್ತವಾದ ಜೀವನಕ್ಕಾಗಿ ಹೊಗೆಮುಕ್ತ ಮನೆ ಯೋಜನೆಯಡಿಯಲ್ಲಿ 9.6 ಕೋಟಿ ಮನೆಗಳಿಗೆ ಉಚಿತ ಎಲ್.ಪಿ.ಜಿ. ಸಂಕಲ್ಪ ಕಲ್ಜಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆ, ಬೇಟಿ ಬಚಾವೋ, ಬೇಟಿ ಪಢಾವೂ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಮಹಿಳೆಯರಿಗಾಗಿ ಅನೇಕ ಯೋಜನೆ ಜಾರಿಗೆ ತಂದಿದ್ದಾರೆ. ಆದ್ದರಿಂದ ಮತ್ತೊಮ್ಮೆ ಮೋದಿ ಎಂಬ ಸಂಕಲ್ಪದೊಂದಿಗೆ ಎಲ್ಲರೂ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರಿಗೆ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಆನಂದಗೌಡ ಪಾಟೀಲ, ಎಸ್.ಎಸ್. ಗಡ್ಡದ, ಪ್ರಭು ಅಬ್ಬೀಗೇರಿ, ವೀರಣ್ಣ ತುಪ್ಪದ, ಪ್ರಶಾಂತ ಗುಡದಪ್ಪನವರ, ಆರ್.ಎಂ. ತಪ್ಪಡಿ, ಶ್ರೀನಿವಾಸ ಅಬ್ಬೀಗೇರಿ, ಫಕ್ರುಸಾಬ್ ಹಾರೋಗೇರಿ, ದೇವು ಹಡಪದ, ಶಂಕರ ಉಳ್ಳಾಗಡ್ಡಿ, ಶಂಕರಗೌಡ ಪಾಟೀಲ, ವೀರೇಂದ್ರ ಅಂಗಡಿ, ರವೀಗೌಡ ಪಾಟೀಲ, ವೀರಣ್ಣ ಟೆಂಗಿನಕಾಯಿ, ಮಂಜುನಾಥ ದೊಡ್ಡಮನಿ, ಧ್ರುವಕುಮಾರ ಹೂಗಾರ, ಸುರೇಶ ಬಂಡಿವಡ್ಡರ, ದಾವಲ್ ಸಾಬ್ ಕರ್ನಾಚಿ, ಯಲ್ಲಪ್ಪ ಗಣಾಚಾರಿ, ಮಂಜು ಭಜಂತ್ರಿ, ಪವಿತ್ರಾ ಕಲ್ಲಕುಟಗರ್, ಪುಷ್ಪಾ ಉಕ್ಕಲಿ, ಅರುಣಾ ಪಾಟೀಲ, ಮಂಜುಳಾ ಹಮ್ಮಿಗಿಮಠ, ರಾಧಾ ಬಾರಕೇರ, ರೇಖಾ ಬಾರಕೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.