ದೇಶದ ಭದ್ರತೆ, ಜನಪರ ಆಡಳಿತಕ್ಕೆ ಬಿಜೆಪಿಗೆ ಮತ ನೀಡಿ

| Published : Apr 29 2024, 01:34 AM IST

ದೇಶದ ಭದ್ರತೆ, ಜನಪರ ಆಡಳಿತಕ್ಕೆ ಬಿಜೆಪಿಗೆ ಮತ ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಚುನಾವಣೆ ನಂತರ ಎಲ್ಲ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಬಂದ್ ಆಗಲಿವೆ

ಶಿರಹಟ್ಟಿ: ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನಡೆಸಿದ ಭ್ರಷ್ಟಾಚಾರ ರಹಿತ ಆಡಳಿತ, ದೇಶದ ಎಲ್ಲ ಜನರಿಗೂ ಸಮಾನ ಯೋಜನೆ, ಅವುಗಳ ಸಮರ್ಪಕ ಜಾರಿ ಸೇರಿದಂತೆ ಹಲವಾರು ರಾಷ್ಟ್ರೀಯ ವಿಚಾರಗಳೇ ಹಾವೇರಿ-ಗದಗ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವಿಗೆ ಮಾನದಂಡವಾಗಲಿವೆ ಎಂದು ಬಿಜೆಪಿ ಮುಖಂಡ ಸುರೇಶ ಅಕ್ಕಿ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಭಾನುವಾರ ವಿದ್ಯಾನಗರ ಬಡಾವಣೆಯಲ್ಲಿ ಮನೆ ಮನೆಗೆ ಪ್ರಚಾರ ನಡೆಸಿ ಕೇಂದ್ರ ಸರ್ಕಾರದ ಸಾಧನೆಗಳ ಕರಪತ್ರ ಹಂಚಿ ಮಾತನಾಡಿದರು.

ರಾಜ್ಯ ಸರ್ಕಾರವು ಪಂಚ ಗ್ಯಾರಂಟಿ ನೀಡಿದ್ದೇವೆ ಎಂದು ಹೇಳಿಕೊಳ್ಳುತ್ತಾ ಎಸ್ಸಿ,ಎಸ್ಟಿ, ಒಬಿಸಿ ಸಮುದಾಯದವರ ಮೀಸಲು ಹಣ ಅನವಶ್ಯಕವಾಗಿ ವ್ಯಯಿಸುತ್ತಿದ್ದು, ಇದರಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಚುನಾವಣೆ ನಂತರ ಎಲ್ಲ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಬಂದ್ ಆಗಲಿವೆ ಎಂದರು.

ರಾಜ್ಯದ ಜನತೆ ತಾತ್ಕಾಲಿಕ ಗ್ಯಾರಂಟಿಗಳಿಗೆ ಮೊರೆ ಹೋಗದೆ,ಸುಭದ್ರ ರಾಷ್ಟ್ರ ನಿರ್ಮಾಣದ ಕನಸು ಹೊತ್ತ ವಿಶ್ವವೇ ಮೆಚ್ಚಿದ ಧೀಮಂತ ನಾಯಕ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ಮತ್ತೊಮ್ಮೆ ಅವಕಾಶ ನೀಡಬೇಕು. ಸುದೀರ್ಘ ರಾಜಕಾರಣದ ಅನುಭವ ಹೊಂದಿರುವ ಬಸವರಾಜ ಬೊಮ್ಮಾಯಿ ರಾಜಕೀಯ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ.ಈ ಬಾರಿ ಯಾವುದೇ ಆಸೆ ಆಮಿಷಕ್ಕೆ ಬಲಿಯಾಗದೇ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿದರೆ ನಮ್ಮ ನಿಮ್ಮೆಲ್ಲರ ಧ್ವನಿಯಾಗಿ ಕೆಲಸ ಮಾಡುತ್ತಾರೆ ಎಂದು ಕರೆ ನೀಡಿದರು.

ಮುಖಂಡ ಪ್ರಭು ಹಲಸೂರ ಮಾತನಾಡಿ, ದೇಶದ ಹಿತಕ್ಕೆ,ನಮ್ಮ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಮತ್ತೆ ಮೋದಿ ಅವರನ್ನು ಪ್ರಧಾನಿ ಮಾಡುವ ಅನಿವಾರ್ಯತೆ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಟ್ಟ ಅವರು, ಮೋದಿ ಅವರ ದಶಕದ ಸಾಧನೆ ಕುರಿತು ಕರಪತ್ರ ಹಂಚಿ ನಿಮ್ಮ ಮತ ಬಿಜೆಪಿಗೆ ಹಾಕುವ ಸಂಕಲ್ಪ ಮಾಡಲು ಮನವಿ ಮಾಡಿದರು.

ಕಾಂಗ್ರೆಸ್ ನೀತಿ, ಧೋರಣೆ ಹಾಗೂ ವರ್ತನೆಗಳ ವಿರುದ್ಧ ದೂರಿದರು. ದೇಶ ಉಳಿಯಬೇಕಾದರೆ, ನಾವೆಲ್ಲರೂ ಸುರಕ್ಷಿತವಾಗಿರಬೇಕಾದರೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಕೊಟ್ಟ ಸಂವಿಧಾನ ರಕ್ಷಣೆ ಆಗಬೇಕಾದರೆ, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿ ಭಾರತ ವಿಶ್ವದಲ್ಲೇ ಸೂಪರ್ ಪವರ್ ದೇಶವಾಗಿ ಹೊರಹೊಮ್ಮಬೇಕಾದರೆ ಮೋದಿ ಅವರಂತಹ ಸಮರ್ಥ ನೇತಾರ ಬೇಕು. ಬಿಜೆಪಿಗೆ ಮತ ನೀಡಿದರೆ ದೇಶದ ಜತೆಗೆ ನಮ್ಮ ಪರಿವಾರದ ಹಿತ ಕಾಪಾಡಲು ಸಾಧ್ಯ ಎಂದರು.

ಕಾಂಗ್ರೆಸ್ ವೋಟಿಗಾಗಿ ಓಲೈಕೆ ರಾಜಕಾರಣ ಮಾಡುತ್ತಿದೆ. ಕಳೆದ ಹತ್ತು ತಿಂಗಳಲ್ಲಿ ರಾಜ್ಯದ ವಿವಿದೆಢೆ ಹತ್ತಾರು ಅಹಿತಕರ ಘಟನೆಗಳು ನಡೆದಿವೆ. ಕಾನೂನು ಸುವ್ಯವಸ್ಥೆ ಹಾಳಾಗಿದೆ. ರಾಜ್ಯ,ದೇಶದಲ್ಲಿ ಶಾಂತಿ ನೆಲೆಸಬೇಕಾದರೆ ಬಿಜೆಪಿಗೆ ಮತ ಹಾಕುವುದೇ ಉತ್ತರ ಎಂದರು.

ಬಸವರಾಜ ಬೊಮ್ಮಾಯಿ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ತಾಲೂಕಿನ ಇಟಗಿ-ಸಾಸಲವಾಡ ಏತನೀರಾವರಿ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಿದ್ದಾರೆ. ಎಲ್ಲ ವರ್ಗಗಳ ಜನರ ಹಿತ ಕಾಯುವ ಕೆಲಸ ಮಾಡಿದ್ದು, ಜನತೆ ಇದನ್ನು ಮರೆಯದೇ ಬಿಜೆಪಿಗೆ ಮತ ಹಾಕಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಲು ಸಹಕರಿಸಬೆಕು ಎಂದು ಜನರಲ್ಲಿ ಮನವಿ ಮಾಡಿದರು.

ಮುಂಖಂಡರಾದ ದೇವಪ್ಪ ಪೂಜಾರ, ಈರಣ್ಣ ದೇವಗೀರಿ, ಶಶಿಧರ ದೇಗಾವಿ ಸೇರಿ ಅನೇಕರು ಉಪಸ್ಥಿತರಿದ್ದರು.