ಬಲಿಷ್ಠ ಭಾರತ ನಿರ್ಮಾಣವಾಗಲು ಬಿಜೆಪಿಗೆ ಮತ ಹಾಕಿ: ಶಿವಶಂಕರ್

| Published : Apr 26 2024, 12:46 AM IST

ಬಲಿಷ್ಠ ಭಾರತ ನಿರ್ಮಾಣವಾಗಲು ಬಿಜೆಪಿಗೆ ಮತ ಹಾಕಿ: ಶಿವಶಂಕರ್
Share this Article
  • FB
  • TW
  • Linkdin
  • Email

ಸಾರಾಂಶ

ಬಲಿಷ್ಠ ಭಾರತ ನಿರ್ಮಾಣವಾಗಲು, ಬದುಕು ಹಸನಾಗಲು ಸರ್ವರಿಗೂ ಸಮಪಾಲು, ಸಮಬಾಳು ದೊರಕಲು, ನರೇಂದ್ರ ಮೋದಿ ಪ್ರಧಾನಿಯಾಗಲು ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ಅವರಿಗೆ ಮತಹಾಕಲು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮನವಿ ಮಾಡಿದರು.

- ಮಲೇಬೆನ್ನೂರು ವ್ಯಾಪ್ತಿಯಲ್ಲಿ ಗಾಯತ್ರಿ ಸಿದ್ಧೇಶ್ವರ ಪರ ಪ್ರಚಾರ - - -ಕನ್ನಡಪ್ರಭ ವಾರ್ತೆ, ಮಲೇಬೆನ್ನೂರು

ಬಲಿಷ್ಠ ಭಾರತ ನಿರ್ಮಾಣವಾಗಲು, ಬದುಕು ಹಸನಾಗಲು ಸರ್ವರಿಗೂ ಸಮಪಾಲು, ಸಮಬಾಳು ದೊರಕಲು, ನರೇಂದ್ರ ಮೋದಿ ಪ್ರಧಾನಿಯಾಗಲು ಜೆಡಿಎಸ್ -ಬಿಜೆಪಿ ಮೈತ್ರಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ಅವರಿಗೆ ಮತಹಾಕಲು ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮನವಿ ಮಾಡಿದರು.

ಬುಧವಾರ ಸಂಜೆ ದೊಗ್ಗಳ್ಳಿ, ಕೊಂಡಜ್ಜಿ, ಬುಳ್ಳಾಪುರ, ಕೆಂಚನಹಳ್ಳಿ, ಸಾರಥಿ, ಪಾಮೇನಹಳ್ಳಿ, ಹನಗವಾಡಿ, ಗಂಗನರಸಿ, ತಿಮ್ಲಾಪುರ, ಬಿಳಸನೂರು, ಸಿರಿಗೆರೆ ಮತ್ತು ಯಲವಟ್ಟಿ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ಮಾಡಿದ ನಂತರ ಸಮೀಪದ ಕುಂಬಳೂರಿನ ದೇವಾಲಯ ಮುಂಭಾಗದಲ್ಲಿ ರೋಡ್‌ ಶೋ ನಡೆಸಿ ಅವರು ಮಾತನಾಡಿದರು.

ಡಾ. ಅಂಬೇಡ್ಕರ್ ಜನಿಸಿದರೂ ಸಂವಿಧಾನ ಬದಲಾಯಿಸಲು ಅಸಾಧ್ಯವೆಂದು ಮೋದಿ ಅವರೇ ಹೇಳಿದರೂ ಕಾಂಗ್ರೆಸ್ ಪಕ್ಷದವರು ಸುಳ್ಳು ಹರಡುತ್ತಾ, ಮತದಾರರನ್ನು ದಿಕ್ಕು ತಪ್ಪಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

೨೦೦೩ರಲ್ಲಿ ಎಸ್‌.ಎಂ. ಕೃಷ್ಣ ಸರ್ಕಾರದಲ್ಲಿಯೂ ಬರಗಾಲ, ೨೦೧೩ರಲ್ಲಿ ಸಿದ್ದರಾಮಯ್ಯ ಸರ್ಕಾರ ಬಂದಾಗಲು ಬರಗಾಲ, ಪ್ರಸ್ತುತ ೨೦೨೪ರಲ್ಲಿಯೂ ಬರಗಾಲ ಬಂದಿದೆ. ಅಲ್ಲಿಗೆ ಕಾಂಗ್ರೆಸ್ ಅಂದ್ರೆ ಬರಗಾಲ ಎಂಬುದು ಸಾಬೀತಾಗಿದೆ. ಎಚ್‌.ಡಿ.ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಯಾವಾಗ ಭಾಜಪಗೆ ಬೆಂಬಲ ನೀಡಿದರೋ, ಅಂದೇ ರಾಜ್ಯದಲ್ಲಿ ಶುಭಕಾಲ ಶುರುವಾಯಿತು. ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಹರಿಹರ ತಾಲೂಕಿನಿಂದ ಒಂದೂವರೆ ಲಕ್ಷ ಮತಗಳನ್ನು ನೀಡಲು ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನ ಮಾಡಬೇಕೆಂದು ಶಿವಶಂಕರ್ ಮನವಿ ಮಾಡಿದರು.

ಭಾಜಪ ಜಿಲ್ಲಾ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್ ಮಾತನಾಡಿ, ಸುಳ್ಳು ಗ್ಯಾರಂಟಿಗಳಿಂದ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಹವಣಿಸುತ್ತಿದೆ. ಅವರ ಕನಸು ನನಸಾಗಲು ಅಸಾಧ್ಯ. ಕೇಂದ್ರದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದರೆ ೧೦೦ಕ್ಕೆ ೮೫ ರೂ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಎಚ್ಚರಿಕೆಯಿಂದ ಮತಹಾಕಿ ಎಂದರು.

ಕೋರೊನಾ ಅವಧಿಯಲ್ಲಿ ಅನೇಕ ರಾಷ್ಟ್ರಗಳು ದಿವಾಳಿಯಾದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪರಿಣಾಮಕಾರಿ, ಲಸಿಕೆ ನೀಡಿ, ಜನರ ಪ್ರಾಣ ಕಾಪಾಡಿದ ಧೀಮಂತ ವ್ಯಕ್ತಿ ಎಂದರು.

ಶಾಸಕ ಬಿ.ಪಿ. ಹರೀಶ್, ಮಹಿಳಾ ನಾಯಕಿ ಡಾಟಿ ಸದಾನಂದಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಜಿ.ಪಂ. ಮಾಜಿ ಸದಸ್ಯ ವೀರಭದ್ರಪ್ಪ, ಬಿ.ಶಂಭಣ್ಣ, ಎನ್, ಬಾಬುಕಲ್ಲೇಶ್, ಲೋಕೇಶ್, ಎಚ್. ಶಂಭಣ್ಣ, ಕೆ.ಕಾಮರಾಜ್, ಕರಡಿ ರಾಜಣ್ಣ, ಬೆಳ್ಳೂಡಿ ಸಿದ್ದಪ್ಪ, ಅಂದನೂರು ರೇವಣಸಿದ್ದಪ್ಪ, ಭೀಮಸಮುದ್ರ ಪ್ರಸನ್ನ, ಬಿ.ಜಿ.ನಿರಂಜನ್, ಸುಧಾ ಲಿಂಗರಾಜು, ಜಿಗಳಿ ಚಂದ್ರು ಹಾಗೂ ನೂರಾರು ಕಾರ್ಯಕರ್ತರು ಇದ್ದರು.

- - - -ಚಿತ್ರ-೧:

ಕುಂಬಳೂರಿನಲ್ಲಿ ಬಿಜೆಪಿ ಅಭ್ಯರ್ಥಿ ಪರ ಶಿವಶಂಕರ್ ರೋಡ್‌ ಶೋ ನಡೆಸಿ ಮತಯಾಚಿಸಿ, ಮಾತನಾಡಿದರು.